»   » ಆರ್ ಚಂದ್ರು 'ಕನಕ' ಚಿತ್ರಕ್ಕೆ ಫಿಕ್ಸ್ ಆದ ಮೊದಲ ನಾಯಕಿ ಇವರು...?

ಆರ್ ಚಂದ್ರು 'ಕನಕ' ಚಿತ್ರಕ್ಕೆ ಫಿಕ್ಸ್ ಆದ ಮೊದಲ ನಾಯಕಿ ಇವರು...?

Posted By:
Subscribe to Filmibeat Kannada

'ಕನಕ' ಚಿತ್ರಕ್ಕಾಗಿ ದುನಿಯಾ ವಿಜಯ್ ಇತ್ತೀಚೆಗಷ್ಟೇ ಜನಜಂಗುಳಿಯಲ್ಲಿ ಫೋಟೋಶೂಟ್ ಮುಗಿಸಿ ಆಟೋ ಡ್ರೈವರ್ ಗೆಟಪ್ ನಲ್ಲಿ ಹೇಗ್ ಕಾಣ್ತಾರೆ ಎಂಬ ಲುಕ್ ರಿವಿಲ್ ಆಗಿತ್ತು. ಆದ್ರೆ ಆಟೋ ಚಾಲಕನ ಪಾತ್ರ ನಿರ್ವಹಿಸಲಿರುವ ನಟ ದುನಿಯಾ ವಿಜಯ್ ಗೆ, ಚಿತ್ರದಲ್ಲಿ ಜೋಡಿ ಆಗಲಿರುವ ನಟಿ ಯಾರು ಎಂಬ ಕುತೂಹಲ ಮಾತ್ರ ಹಾಗೆ ಉಳಿದಿತ್ತು. ಈಗ ಈ ಕ್ಯೂರಿಯಾಸಿಟಿಗೆ ಬ್ರೇಕ್ ಬಿದ್ದಂತಿದೆ.[ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ']

ಹೌದು, 'ಕನಕ' ಚಿತ್ರಕ್ಕಾಗಿ ದುನಿಯಾ ವಿಜಯ್ ಅವರ ಫೋಟೋಶೂಟ್ ಮುಗಿಸಿ ನಾಯಕಿಯರ ಹುಡುಕಾಟದಲ್ಲಿದ್ದ ಆರ್ ಚಂದ್ರು ಅವರ ಚಿತ್ರಕ್ಕೆ, ಈಗ ಹಿರೋಯಿನ್ ಸಿಕ್ಕಿದ್ದಾರೆ. ಅಲ್ಲದೇ ಈ ಹಿಂದೆ 'ಕನಕ' ಚಿತ್ರಕ್ಕೆ ನಾಯಕಿಯರೆಂದು ಹರಿದಾಡಿದ್ದ ಸುದ್ದಿ ಸಹ ಸುಳ್ಳಾಗಿದೆ.

'ಕನಕ' ಚಿತ್ರಕ್ಕೆ ನಾಯಕಿ ಎಂದು ಈ ಹಿಂದೆ ಹೇಳಿದ್ದು...

'ಕನಕ' ಚಿತ್ರದಲ್ಲಿ 'ಯೂ ಟರ್ನ್' ಖ್ಯಾತಿಯ ಶ್ರದ್ಧಾ ಶ್ರೀನಾಥ್ ನಾಯಕಿ ಆಗಿ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅವರು ನಟಿಯಾಗಿ ಸ್ಕ್ರೀನ್ ಶೇರ್ ಮಾಡುತ್ತಾರಾ ಅಥವಾ ಇಲ್ಲವಾ ಎಂಬುದು ಇನ್ನೂ ಖಚಿತವಾಗಿಲ್ಲ. ಕಾರಣ ಚಿತ್ರದಲ್ಲಿ ಇಬ್ಬರು ನಾಯಕಿಯರ ರೋಲ್ ಇದೆ.[ವಿಜಯ್ ನಟನೆಯ 'ಕನಕ'ನಿಗೆ ಮಹಾರಾಷ್ಟ್ರದ ಎಮ್ಮೆಗಳು]

ಈ ನಟಿಯರು ಕಾಣಿಸಿಕೊಳ್ಳುವುದು ಡೌಟ್

ಶ್ರದ್ಧಾ ಶ್ರೀನಾಥ್ ನಾಯಕಿ ಆದರೆ ಇನ್ನೊಂದು ಪಾತ್ರಕ್ಕೆ ನಿತ್ಯಾ ಮೆನನ್ ಅಥವಾ ಶ್ರುತಿ ಹರಿಹರನ್ ಆಯ್ಕೆ ಆಗುವ ಚಾನ್ಸ್ ಇದೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಈಗ ಇವರು ಕಾಣಿಸಿಕೊಳ್ಳುವುದು ಸಹ ಸಂಶಯವಾಗಿದೆ. ಕಾರಣ ಚಿತ್ರತಂಡ ಈಗ ಬೇರೆಯೇ ನಟಿಯನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿರುವ ಬಗ್ಗೆ ವರದಿ ಆಗಿದೆ.

'ಕನಕ' ಚಿತ್ರಕ್ಕೆ ಸೇರ್ಪಡೆ ಆಗಿರುವ ಆ ನಟಿ ಯಾರು?

'ಕನಕ' ಚಿತ್ರದಲ್ಲಿ ದುನಿಯಾ ವಿಜಯ್ ಗೆ ಹಿರೋಯಿನ್ ಆಗಿ ಈಗ 'ಕೆಂಡ ಸಂಪಿಗೆ' ಖ್ಯಾತಿಯ ಮಾನ್ವಿತಾ ಹರೀಶ್ ಚಿತ್ರತಂಡ ಸೇರಿದ್ದಾರೆ. ಅಂದಹಾಗೆ ಇವರು ಮೊದಲ ಹಿರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ ಎಂದು ವರದಿ ಆಗಿದೆ.

ಎರಡನೇ ಹೀರೋಯಿನ್ ಆಯ್ಕೆ ಬಾಕಿ

'ಕನಕ' ಚಿತ್ರಕ್ಕೆ ಈಗ ಎರಡನೇ ಹೀರೋಯಿನ್ ಆಯ್ಕೆ ಬಾಕಿ ಉಳಿದಿದ್ದು, ಫೈನಲೈಜ್ ಆಗಬೇಕಿದೆ.

ಚಿತ್ರದ ಇನ್ನೊಬ್ಬರು ಹಿರೋಯಿನ್ ಅವಕಾಶ ಯಾರಿಗೆ?

ಈ ಹಿಂದೆಯೇ ಶ್ರದ್ಧಾ ಶ್ರೀನಾಥ್ 'ಕನಕ' ಚಿತ್ರದ ನಾಯಕಿ ಆಗುವುದು ಖಚಿತ ಎಂಬ ಸುದ್ದಿ ಹರಿದಾಡಿತ್ತು. ಈ ನಿಟ್ಟಿನಲ್ಲಿ ನೋಡುವುದಾದರೆ ಶ್ರದ್ಧಾ ಶ್ರೀನಾಥ್ ಅವರು ಚಿತ್ರದ ಇನ್ನೊಬ್ಬರು ನಾಯಕಿ ಆಗುವ ಚಾನ್ಸ್ ಇರಬಹುದು. ಅಲ್ಲದೇ ನಿತ್ಯಾ ಮೆನನ್ ಮತ್ತು ಶ್ರುತಿ ಹರಿಹರನ್ ಅವರನ್ನು ಆಯ್ಕೆ ಮಾಡಲು ಚಿತ್ರತಂಡ ಆಸಕ್ತಿ ಹೊಂದಿತ್ತು ಎಂಬ ಕಾರಣದಿಂದ ಈ ಮೂವರಲ್ಲಿ ಯಾರು ಬೇಕಾದರೂ ನಾಯಕಿ ಆಗಿ ಬಣ್ಣ ಹಚ್ಚುವ ಚಾನ್ಸ್ ಇದೆ.

English summary
Kannada Actress Manvita Harish has been roped in as the heroine for 'Duniya' Vijay starrer 'Kanaka'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada