»   » ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ'

ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್ ನಲ್ಲಿ 'ಕನಕ' ಸಿನಿಮಾ ಸೆಟ್ಟೇರಿರುವ ಸುದ್ದಿ ನಾವೇ ನಿಮಗೆ ತಿಳಿಸಿದ್ವಿ.

ಹಾಗೇ, ಬೀದಿಬೀದಿಗಳಲ್ಲಿ... ಜನಜಂಗುಳಿಯಲ್ಲಿ 'ಕನಕ'ನ ಫೋಟೋಶೂಟ್ ನಡೆಯಲಿದೆ ಅಂತ ನಾವೇ ವರದಿ ಮಾಡಿದ್ವಿ. ಇತ್ತೀಚೆಗಷ್ಟೇ 'ಕನಕ'ನ ಫೋಟೋಶೂಟ್ ಬೆಂಗಳೂರಿನಲ್ಲಿ ನಡೆದಿತ್ತು. ಅದರ ಕೆಲ ಸ್ಟಿಲ್ ಗಳನ್ನ ನಿಮಗಾಗಿ ನಾವು ಹೊತ್ತು ತಂದಿದ್ದೀವಿ ನೋಡಿ....

'ಕನಕ'ನ ಆಟೋ ಸವಾರಿ

ಎಲ್ಲ ಸಿನಿಮಾಗಳಂತೆ ಸ್ಟುಡಿಯೋದಲ್ಲಿ ಫೋಟೋಶೂಟ್ ಮಾಡದೆ ನೈಜತೆಗೆ ಹೆಚ್ಚು ಒತ್ತು ಕೊಟ್ಟಿರುವ ನಿರ್ದೇಶಕ ಆರ್.ಚಂದ್ರು ಬೆಂಗಳೂರಿನ ಬೀದಿಗಳಲ್ಲಿ 'ಕನಕ' ಚಿತ್ರದ ಫೋಟೋಶೂಟ್ ನಡೆಸಿದ್ದಾರೆ. [ದುನಿಯಾ ವಿಜಯ್ ಹುಟ್ಟುಹಬ್ಬ: ಬಡವರಿಗೆ 'ಕನಕ'ನ ಕಾಣಿಕೆ]

ಆಟೋ ಚಾಲಕನಾಗಿ ದುನಿಯಾ ವಿಜಯ್ ಹೇಗ್ ಕಾಣ್ತಾರೆ ನೋಡಿ...

'ಕನಕ' ಚಿತ್ರದಲ್ಲಿ ಆಟೋ ಚಾಲಕನ ಪಾತ್ರ ನಿರ್ವಹಿಸಲಿದ್ದಾರೆ ನಟ ದುನಿಯಾ ವಿಜಯ್. ಆಟೋ ಡ್ರೈವರ್ ಗೆಟಪ್ ನಲ್ಲಿ ದುನಿಯಾ ವಿಜಯ್ ಹೇಗ್ ಕಾಣ್ತಾರೆ ಅಂತ ನೀವೇ ನೋಡಿ....

ಫೋಟೋಶೂಟ್ ನಡೆದಿದ್ದು ಎಲ್ಲಿ.?

ಬೆಂಗಳೂರಿನ ಮೆಜೆಸ್ಟಿಕ್, ಕಂಟೋನ್ಮೆಂಟ್ ಹಾಗೂ ಎಂ.ಜಿ ರೋಡ್ ನಲ್ಲಿ 'ಕನಕ' ಚಿತ್ರದ ಫೋಟೋಶೂಟ್ ನಡೆದಿದೆ.[ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ]

ಶೂಟಿಂಗ್ ಯಾವಗ್ಲಿಂದ ಶುರು.?

'ಕನಕ' ಚಿತ್ರದ ಚಿತ್ರೀಕರಣ ಸದ್ಯದಲ್ಲಿಯೇ ಶುರು ಆಗಲಿದೆ. ಅಂದ್ಹಾಗೆ, ಸಿನಿಮಾದಲ್ಲಿ ದುನಿಯಾ ವಿಜಯ್ ಗೆ ಜೋಡಿ ಆಗುವ ನಟಿಯ ಆಯ್ಕೆ ಇನ್ನೂ ಆಗಿಲ್ಲ. ಎಲ್ಲವೂ ಕನ್ಫರ್ಮ್ ಆದ ಕೂಡಲೆ ಶೂಟಿಂಗ್ ಶುರು.[ಜನಜಂಗುಳಿಯಲ್ಲಿ ನಡೆಯಲಿದೆ 'ಕನಕ'ನ ಫೋಟೋಶೂಟ್]

English summary
Check out the exclusive stills of Duniya Vijay starrer R.Chandru directorial 'Kanaka' here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada