»   » 'ನೀರ್ ದೋಸೆ' ಬಿಡಿ, 'ದೊಡ್ಡ ಮೆಣಸಿನಕಾಯಿ' ಬರುತ್ತೆ ನೋಡಿ!

'ನೀರ್ ದೋಸೆ' ಬಿಡಿ, 'ದೊಡ್ಡ ಮೆಣಸಿನಕಾಯಿ' ಬರುತ್ತೆ ನೋಡಿ!

Posted By:
Subscribe to Filmibeat Kannada

ಕಿವಿ ಮೇಲೆ ದಾಸವಾಳ ಹೂ ಇಟ್ಕೊಂಡು 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಬ್ರೇಕಿಂಗ್ ನ್ಯೂಸ್ ಹೇಳ್ತಿದ್ದ ವಿಜಯ ಪ್ರಸಾದ್, ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಅಂತ ಅನಿಸಿಕೊಂಡಿದ್ದು 'ಸಿದ್ಲಿಂಗು' ಚಿತ್ರದ ಮೂಲಕ.

ಪಂಚಿಂಗ್ ಡೈಲಾಗ್ಸ್ ಜೊತೆಗೆ ನವಿರಾದ ಕಥೆಯನ್ನ 'ಸಿದ್ಲಿಂಗು' ಮೂಲಕ ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದ ವಿಜಯ ಪ್ರಸಾದ್, ಕಳೆದ ಎರಡು ವರ್ಷಗಳಿಂದ 'ನೀರ್ ದೋಸೆ' ತಯಾರಿಯಲ್ಲೇ ಇದ್ದಾರೆ.

Kannada Director Vijayaprasad's new movie titled 'Doddamenasinakayi'

ಅತ್ತ ರಮ್ಯಾ ಬರ್ಲಿಲ್ಲ, ಇತ್ತ 'ನೀರ್ ದೋಸೆ' ಹ್ಯುಯ್ಯೋಕೆ ಆಗ್ಲಿಲ್ಲ. ಈ ಕಾರಣಕ್ಕೆ ಸದ್ಯಕ್ಕೆ 'ನೀರ್ ದೋಸೆ' ತಂಟೆ ಬಿಟ್ಟು 'ದೊಡ್ಡ ಮೆಣಸಿನಕಾಯಿ' ಹಿಡಿದುಕೊಂಡಿದ್ದಾರೆ ನಿರ್ದೇಶಕ ವಿಜಯ ಪ್ರಸಾದ್. [ವಿಜಯಪ್ರಸಾದ್ ನೀಡಲಿದ್ದಾರೆ ಭಾರಿ 'ನೀರ್ ದೋಸೆ']

ಇದ್ಯಾವ್ದಪ್ಪಾ 'ದೊಡ್ಡ ಮೆಣಸಿನಕಾಯಿ' ಅಂತ ಹುಬ್ಬೇರಿಸ್ಬೇಡಿ. ವಿಜಯ ಪ್ರಸಾದ್ ನಿರ್ದೇಶನ ಮಾಡುವುದಕ್ಕೆ ಹೊರಟಿರುವ ಹೊಚ್ಚ ಹೊಸ ಸಿನಿಮಾದ ಹೆಸರೇ 'ದೊಡ್ಡ ಮೆಣಸಿನಕಾಯಿ'.

ಈಗಾಗಲೇ 'ದೊಡ್ಡ ಮೆಣಸಿನಕಾಯಿ' ಕಥೆಯನ್ನ ನೀಟಾಗಿ ಕಟ್ ಮಾಡಿ ಸಿನಿಮಾ ಮಾಡುವುದಕ್ಕೆ ವಿಜಯ್ ಪ್ರಸಾದ್ ರೆಡಿಯಾಗಿದ್ದಾರೆ. ನಿರ್ಮಾಣ ಮಾಡುವುದಕ್ಕೆ ಕೆ.ಎ.ಸುರೇಶ್ ಕೂಡ ಮುಂದೆ ಬಂದಿದ್ದಾರೆ ಅನ್ನುತ್ತಿವೆ ಮೂಲಗಳು.

ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿರುವುದರಿಂದ ಯಾವುದೂ ಪಕ್ಕಾ ಆಗಿಲ್ಲ. ವಿಜಯ್ ಪ್ರಸಾದ್ ಪ್ಲಾನ್ ಪ್ರಕಾರ ನಡೆದರೆ, ಆದಷ್ಟು ಬೇಗ 'ದೊಡ್ಡ ಮೆಣಸಿನಕಾಯಿ' ಸೆಟ್ಟೇರುವುದು ಖಚಿತ. ಹ್ಹಾ...'ದೊಡ್ಡ ಮೆಣಸಿನಕಾಯಿ' ಕುಯ್ಯೋಕೆ ರಮ್ಯಾ ಇರ್ತಾರಾ ಅಂತ ನಮ್ಮನ್ನ ಕೇಳ್ಬೇಡಿ.

English summary
Kannada Director Vijayaprasad of 'Sidlingu' fame is busy with the pre-production work of new movie. According to the sources, the movie is titled as 'Doddamenasinakayi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada