»   » ಎಂದೆಂದಿಗೂ ಚಿತ್ರದಿಂದ ನಟ ಶ್ರೀನಗರ ಕಿಟ್ಟಿ ಔಟ್

ಎಂದೆಂದಿಗೂ ಚಿತ್ರದಿಂದ ನಟ ಶ್ರೀನಗರ ಕಿಟ್ಟಿ ಔಟ್

Posted By:
Subscribe to Filmibeat Kannada
ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಬೆಳವಣಿಗೆಗಳು ಹೊಸದಲ್ಲ. ಆದರೆ 'ಎಂದೆಂದಿಗೂ' ಚಿತ್ರ ಇನ್ನೂ ಸೆಟ್ಟೇರುವುದಕ್ಕೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಈ ಹಿಂದೆ ಈ ಚಿತ್ರಕ್ಕೆ ಶ್ರೀನಗರ ಕಿಟ್ಟಿ ನಾಯಕ ನಟ ಎನ್ನಲಾಗಿತ್ತು. ಈಗ ಆ ಜಾಗಕ್ಕೆ ಅಜಯ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತವೆ ಮೂಲಗಳು.

ಕೆಲವು ತಿಂಗಳ ಹಿಂದೆ ಚಿತ್ರದಲ್ಲಿ ಸಂಜು ವೆಡ್ಸ್ ಗೀತಾ ಜೋಡಿ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತು. ಬಳಿಕ ರಮ್ಯಾ ಅಭಿನಯಿಸುತ್ತಿಲ್ಲ ಬದಲಾಗಿ ರಾಧಿಕಾ ಪಂಡಿತ್ ಎಂಬುದು ಕನ್ಫರ್ಮ್ ಆಗಿದೆ.

ಈಗ ಚಿತ್ರದ ಹೀರೋ ಶ್ರೀನಗರ ಕಿಟ್ಟಿ ಅಲ್ಲ ಅಜಯ್ ಎನ್ನುತ್ತಿವೆ ಮೂಲಗಳು. ಶೀಘ್ರದಲ್ಲೇ ಸೆಟ್ಟೇರಲಿರುವ ಈ ಚಿತ್ರಕ್ಕೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

ಇನ್ನು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಎಸ್ ವಿ ಬಾಬು. ಮೊದಲ ಹಂತದ ಚಿತ್ರೀಕರಣ ಸ್ವೀಡನ್ ಹಾಗೂ ಬೆಂಗಳೂರು ನಡೆಸಲು ನಿರ್ದೇಶಕರು ಪ್ಲಾನ್ ಹಾಕಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಅಜಯ್ ಅಭಿನಯದ 'ಕೃಷ್ಟನ್ ಲವ್ ಸ್ಟೋರಿ' ಎಲ್ಲರ ಮನಗೆದ್ದಿತ್ತು. ಈಗ ಮತ್ತೆ ಆ ಜೋಡಿ ಮೋಡಿ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

English summary
Kannada film Endendigu hero replaced by Ajay Rao. Srinagara Kitty and Ramya as supposed to play the pair in the film. Ramya was replaced by Radhika Pandit and now Ajay Rao has stepped into the shoes of Kitty.
Please Wait while comments are loading...