»   » ಮೈನಾ ಚಿತ್ರದಿಂದ ಒಂದೂವರೆ ಕೋಟಿ ಲಾಸಂತೆ

ಮೈನಾ ಚಿತ್ರದಿಂದ ಒಂದೂವರೆ ಕೋಟಿ ಲಾಸಂತೆ

Posted By:
Subscribe to Filmibeat Kannada

ನಾಗಶೇಖರ್ ಅವರ 'ಮೈನಾ' ಅಮೋಘ ಪ್ರದರ್ಶನ ಕಂಡಿದ್ದರೂ ಬಾಕ್ಸ್ ಆಫೀಸಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆರೋಪವನ್ನು ಮಾಡುತ್ತಿರುವುದು ಸ್ವತಃ ಚಿತ್ರದ ನಿರ್ಮಾಪಕ ರಾಜ್ ಕುಮಾರ್. (ಚಿತ್ರ ವಿಮರ್ಶೆ ಓದಿ)

ಆದರೆ ಈ ಮಾತನ್ನು ಚಿತ್ರದ ನಿರ್ದೇಶಕ ನಾಗಶೇಖರ್ ಸುತಾರಾಂ ಒಪ್ಪುತ್ತಿಲ್ಲ. ಚಿತ್ರ ಲಾಭ ಮಾಡಿದೆ ಎನ್ನುತ್ತಾರೆ ಅವರು. ಈಗ ಇದೇ ಹುಮ್ಮಸ್ಸಿನಲ್ಲಿ ಅವರು 'ಮೈನಾ 2' ಚಿತ್ರವನ್ನು ಕೈಗೆತ್ತಿಕೊಂಡಿರುವುದಾಗಿ ಸುದ್ದಿ ಇದೆ. ಆದರೆ ಚಿತ್ರದ ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.


ಮೈನಾ ಚಿತ್ರ 22 ಕೇಂದ್ರಗಳಲ್ಲಿ ಅರ್ಧ ಶತಕ ಬಾರಿಸಿದೆ. ಚಿತ್ರದಿಂದ ಲಾಸ್ ಆಗಿದೆ ಎಂಬ ಮಾತುಗಳು ಸತ್ಯಕ್ಕೆ ದೂರವಾದವು ಎಂದಿರುವ ನಾಗಶೇಖರ್ ಸದ್ಯಕ್ಕೆ ಹೊಸ ಪ್ರಾಜೆಕ್ಟ್ ನಲ್ಲಿ ಮುಳುಗಿದ್ದಾರೆ. ಆ ಪ್ರಾಜೆಕ್ಟ್ ಡೀಟೇಲ್ಸ್ ಇನ್ನಷ್ಟೆ ಹೊರಬೀಳಬೇಕು.

ಇನ್ನೊಂದು ಕಡೆ 'ಮೈನಾ' ಚಿತ್ರದ ನಿರ್ಮಾಪಕ ಕುಮಾರ್ ಸಹ ಹೊಸ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಲಾಸ್ ಆದ ನಿರ್ಮಾಪಕ ಇಷ್ಟು ಬೇಗ ಇನ್ನೊಂದು ಚಿತ್ರ ಹೇಗೆ ಕೈಗೆತ್ತಿಕೊಳ್ಳಲು ಸಾಧ್ಯ ಎಂಬ ಚರ್ಚೆ ಗಾಂಧಿನಗರದಲ್ಲಿ ಬಿಸಿಯೇರಿದೆ.

ಇನ್ನೊಂದು ಕಡೆ ಮೈನಾ ಚಿತ್ರದ ಯಶಸ್ಸು ಪರಭಾಷಾ ಚಿತ್ರ ನಿರ್ಮಾಪಕರ ಗಮನವನ್ನೂ ಸೆಳೆದಿದೆ. ತೆಲುಗಿನಲ್ಲೂ ಈ ಚಿತ್ರವನ್ನು ರೀಮೇಕ್ ಮಾಡಲಾಗುತ್ತಿದೆ. ಆದರೆ ಮೂಲ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ತೆಲುಗಿನಲ್ಲಿ ಬದಲಾಯಿಸಲಾಗುತ್ತಿದೆ.

ತೆಲುಗು ಚಿತ್ರದ ಬಳಿಕ ತಮಿಳು ಹಾಗೂ ಮಲಯಾಳಂನತ್ತಲೂ 'ಮೈನಾ' ಚಿತ್ರ ಹಾರಲಿದೆ ಎನ್ನುತ್ತವೆ ಮೂಲಗಳು. ಇಷ್ಟೆಲ್ಲಾ ಆದರೂ ಚಿತ್ರ ಮಾತ್ರ ಲಾಭ ಮಾಡಿಲ್ಲ. ಒಂದೂವರೆ ಕೋಟಿ ಲಾಸ್ ಆಗಿದೆ ಎನ್ನುತ್ತಾರೆ ನಿರ್ಮಾಪಕರು. ಯಾರನ್ನು ನಂಬುವುದು ಯಾರನ್ನು ಬಿಡುವುದು. (ಏಜೆನ್ಸೀಸ್)

English summary
If sources are to be believed Kannada film Myna fails in Box office. The films producer Rajkumar himself says, the film fails to impress at the box office.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada