For Quick Alerts
  ALLOW NOTIFICATIONS  
  For Daily Alerts

  'ದಂಡುಪಾಳ್ಯ' ಗ್ಯಾಂಗ್ ಬರುವ ದಿನಾಂಕ ಪಕ್ಕಾ ಆಯ್ತು.!

  By Bharath Kumar
  |

  ದಂಡುಪಾಳ್ಯ......ಈ ಹೆಸರು ಕೇಳಿದ್ರೆ ಜನರಲ್ಲಿ ಒಂಥರಾ ಭಯ ಶುರುವಾಗುತ್ತೆ. ಅಷ್ಟೆ ಭಯಂಕರವಾಗಿ 'ದಂಡುಪಾಳ್ಯ' ಸಿನಿಮಾ ಕೂಡ ಮೂಡಿ ಬಂದಿತ್ತು. ಈಗ ಅದರ ಮುಂದುವರೆದ ಭಾಗ ಸಿದ್ದವಾಗಿದ್ದು, ತೆರೆಗೆ ಬರಲು ಸಜ್ಜಾಗಿದೆ.

  ಈಗಾಗಲೇ 'ದಂಡುಪಾಳ್ಯ-2' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ. ಅದೇ ಕ್ರೌರ್ಯ, ಭಯಾನಕ, ರೋಚಕ ಅಂಶಗಳ ಮೂಲಕ ಪೂಜಾ ಗಾಂಧಿ ಮತ್ತು ಗ್ಯಾಂಗ್ ಮತ್ತೆ ತೆರೆಮೇಲೆ ಅಬ್ಬರಿಸಲು ಬರ್ತಿದ್ದಾರೆ. ಮೂಲಗಳ ಪ್ರಕಾರ 'ದಂಡುಪಾಳ್ಯ-2' ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿದ್ದು, ಜುಲೈ 14 ರಂದು ಥಿಯೇಟರ್ ಗೆ ಬರಲು ಯೋಚನೆ ಮಾಡಿದ್ದಾರಂತೆ.

  'ದಂಡುಪಾಳ್ಯ' ಗ್ಯಾಂಗ್ ನಿಂದ ಬಂತು ಭಯಾನಕ ಸುದ್ದಿ

  ಅಂದ್ಹಾಗೆ, 'ದಂಡುಪಾಳ್ಯ' ಮೊದಲ ಭಾಗವನ್ನ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ಅವರೇ ಮುಂದುವರೆದ ಭಾಗಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಾಟಿಕೋಳಿ ಚಿತ್ರದ ಖ್ಯಾತಿಯ ವೆಂಕಟ್ ನಿರ್ಮಾಣ ಮಾಡಿದ್ದಾರೆ. ಇನ್ನು ಅರ್ಜುನ್ ಜನ್ಯ ಈ ಚಿತ್ರಕ್ಕೆ ಹಿನ್ನಲೆ ಸಂಗೀತ ಒದಗಿಸಿದ್ದಾರೆ.

  ಗಾಂಧಿನಗರದಲ್ಲಿ ಮತ್ತೆ ಶುರುವಾಯಿತು 'ದಂಡುಪಾಳ್ಯ' ಗ್ಯಾಂಗ್ ಅಟ್ಟಹಾಸ

  ಉಳಿದಂತೆ 'ದಂಡುಪಾಳ್ಯ' ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರೇ ಇಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಶಂಕರ್, ರವಿ ಕಾಳೆ ಆರ್ಭಟ ಇಲ್ಲಿಯೂ ಮುಂದುವರೆದಿದ್ದು, 'ದಂಡುಪಾಳ್ಯ' ಗ್ಯಾಂಗ್ ಗೆ ಈ ಬಾರಿ ಸಂಜನಾ ಗಲ್ರಾನಿ ಸೇರಿಕೊಂಡಿದ್ದಾರೆ. ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಶೃತಿ ಕಾಣಿಸಿಕೊಂಡಿದ್ದಾರೆ.

  English summary
  Kannada Actress Pooja Gandhi starrer Kannada Movie 'Dandupalya 2' will release on July 14th. The movie is directed by Srinivasa raju, features P Ravishanker, Makrand Deshapande, and Others in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X