»   » 'ಜಾನ್ ಜಾನಿ ಜನಾರ್ಧನ್' ರಿಲೀಸ್ ಡೇಟ್ ಪಕ್ಕಾ ಆಯ್ತು

'ಜಾನ್ ಜಾನಿ ಜನಾರ್ಧನ್' ರಿಲೀಸ್ ಡೇಟ್ ಪಕ್ಕಾ ಆಯ್ತು

Posted By:
Subscribe to Filmibeat Kannada

'ರಾಜಾಹುಲಿ' ಚಿತ್ರದ ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನ ಮಾಡಿರುವ 'ಜಾನ್ ಜಾನಿ ಜನಾರ್ಧನ್' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಸ್ಯಾಂಡಲ್ ವುಡ್ ನ 'ಕೃಷ್ಣ' ಅಲಿಯಾಸ್ ಅಜೇಯ್ ರಾವ್, 'ಕೃಷ್ಣ' ಅಲಿಯಾಸ್ ಸುನೀಲ್ ನಾಗಪ್ಪ ಮತ್ತು ಲೂಸ್ ಮಾದ ಯೋಗೇಶ್ ಅವರು, ಸ್ನೇಹಿತರಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಜಾನ್ ಜಾನಿ ಜನಾರ್ಧನ್' ಮಲಯಾಳಂ 'ಅಮರ್ ಅಕ್ಬರ್ ಆಂಟನಿ' ಚಿತ್ರದ ರೀಮೇಕ್ ಆಗಿದೆ.[ವಿಡಿಯೋ: 'ಕನ್ನಡ ಕಲಿಯಲೇ' ಅಂತಾವ್ರೆ 'ಜಾನ್ ಜಾನಿ ಜನಾರ್ದನ']


ಇದೀಗ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಮತ್ತು ಈ ಚಿತ್ರದ ವಿಶೇಷತೆ ಏನು ಎಂಬುದನ್ನು ನೋಡಲು ಮುಂದೆ ಓದಿ...


ಯಾವಾಗ ರಿಲೀಸ್

ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿ ನಿಂತಿರುವ 'ಜಾನ್ ಜಾನಿ ಜನಾರ್ಧನ್' ಚಿತ್ರವನ್ನು ನವೆಂಬರ್ 11 ರಂದು ಬಿಡುಗಡೆ ಮಾಡಲು ನಿರ್ದೇಶಕ ಗುರು ದೇಶಪಾಂಡೆ ಮತ್ತು ನಿರ್ಮಾಪಕರಾದ ಪದ್ಮನಾಭ್, ಶಶಿಕಿರಣ್ ಮತ್ತು ಗಿರೀಶ್ ಅವರು ನಿರ್ಧರಿಸಿದ್ದಾರೆ.[ಮಗದೊಮ್ಮೆ 'ಐಟಂ ಗರ್ಲ್' ಆದ 'ಬಸಂತಿ' ಐಂದ್ರಿತಾ ರೇ.!]


ಖಡಕ್ ಪೊಲೀಸ್ ಆಫೀಸರ್ ಆದ ಮಾಲಾಶ್ರೀ

ಈ ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಮತ್ತೆ ತಮ್ಮ ಖಾಕಿ ಖದರ್ ತೋರಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಲಾಶ್ರೀ ಅವರು ಕೇಡಿಗಳಿಗೆ ಹಿಗ್ಗಾ-ಮುಗ್ಗಾ ಥಳಿಸುತ್ತಾರೆ.['ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?]


ಮುಂಬೈ ಬೆಡಗಿ ಕಾಮ್ನಾ ರಣಾವತ್

ಇದೇ ಮೊದಲ ಬಾರಿಗೆ ಮುಂಬೈ ಮೂಲದ ರೂಪದರ್ಶಿ ಕಾಮ್ನಾ ರಣಾವತ್ ಅವರು 'ಜಾನ್ ಜಾನಿ ಜನಾರ್ಧನ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಅಜೇಯ್ ರಾವ್ ಅವರಿಗೆ ಕಾಮ್ನಾ ಅವರು ನಾಯಕಿಯಾಗಿ ಮಿಂಚಿದ್ದಾರೆ.[ಮುಂಬೈ ನಿಂದ ನೇರವಾಗಿ ಸ್ಯಾಂಡಲ್ ವುಡ್ ಗೆ ಬಂದ ರೂಪದರ್ಶಿ]


ಹಲವು ಹಿರಿಯ ನಟರು ಒಂದೇ ಫ್ರೇಮ್ ನಲ್ಲಿ

ಕೆಲವು ದಿನಗಳ ಹಿಂದೆ ವಿಧಿ ವಶರಾದ ಹಿರಿಯ ಹಾಸ್ಯ ನಟ ಸಂಕೇತ್ ಕಾಶಿ ಅವರು ಈ ಚಿತ್ರದಲ್ಲಿ ಮಿಂಚಿದ್ದಾರೆ ಅನ್ನೋದು ವಿಶೇಷ. ಇದು ಅವರ ಕೊನೆಯ ಸಿನಿಮಾ ಕೂಡ ಹೌದು. ಜೊತೆಗೆ ಶ್ರೀನಿವಾಸ್ ಮೂರ್ತಿ, ಗಿರಿಜಾ ಲೋಕೇಶ್, ಲಕ್ಷ್ಮಿ ದೇವಮ್ಮ, ಬ್ಯಾಂಕ್ ಜನಾರ್ಧನ್ ಮತ್ತಿತ್ತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಎಲ್ಲಾ ಹಿರಿಯ ನಟರನ್ನು ಒಂದೇ ಫ್ರೇಮ್ ನಲ್ಲಿ ತೋರಿಸಿದ ಹೆಗ್ಗಳಿಕೆ ಗುರು ದೇಶಪಾಂಡೆ ಅವರದು.


ಮುತ್ತಪ್ಪ ರೈ ಬ್ಯಾನರ್ ನ ಸಿನಿಮಾ

ಎಂ.ಆರ್ ಪಿಕ್ಚರ್ಸ್ (ಮುತ್ತಪ್ಪ ರೈ ಬ್ಯಾನರ್) ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರೋ ಈ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೈ ಚಳಕ ಈ ಚಿತ್ರಕ್ಕಿದ್ದು, ರವಿ ವರ್ಮಾ ಸಾಹಸ ನಿರ್ದೇಶನ ಮಾಡಿದ್ದಾರೆ.


English summary
Kannada Actor Ajay Rao, Actor Yogesh and Actor Krishna starrer Kannada Movie 'John Jaani Janardhan' which is an official remake of Malayalam hit 'Amar Akbar Antony' is all set to release on the 11th of November. The moive is directed by Guru Deshpande.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada