»   » ದರ್ಶನ್ ರ 'ವಿರಾಟ್' ನಾಯಕಿ ಚೈತ್ರಾ ಬಿಚ್ಚಿಟ್ಟ ಕಥೆ

ದರ್ಶನ್ ರ 'ವಿರಾಟ್' ನಾಯಕಿ ಚೈತ್ರಾ ಬಿಚ್ಚಿಟ್ಟ ಕಥೆ

By: ಜೀವನರಸಿಕ
Subscribe to Filmibeat Kannada

ನಿಮಗೆ ಚೈತ್ರಾ ಚಂದ್ರನಾಥ್ ಅನ್ನೋ ಚೆಂದುಳ್ಳಿ ಚೆಲುವೆ ಬಗ್ಗೆ ಗೊತ್ತಿರಬೇಕು. ಮರೆತಿದ್ರೆ ಮತ್ತೆ ನೆನಪಿಸ್ತೀವಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಸಿನಿಮಾದಲ್ಲಿ ಹೀರೋಯಿನ್ನಾಗಿ ನಟಿಸಿದ್ದ ಬ್ಯೂಟಿ ಈಕೆ. ಎರಡು ಪರಭಾಷಾ ನಟಿಯರ ಜೊತೆ ಏಕೈಕ ಕನ್ನಡದ ಚೆಲುವೆ.

'ವಿರಾಟ್' ಸಿನಿಮಾದ ನಂತರ ಈ ಬ್ಯೂಟಿ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಹಿರೋಯಿನ್ ಗೆ ಬೇಕಾದ ಎಲ್ಲಾ ಕ್ವಾಲಿಟಿಗಳೂ ಇದ್ದರೂ ಈ ನಟಿ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಯಾರೂ ಚೈತ್ರಾರನ್ನ ಸಂಪರ್ಕಿಸಿಲ್ವಾ. ಸಂಪರ್ಕಿಸಿದ್ರೂ ಇವರೇ ಒಪ್ಪಿಕೊಂಡಿಲ್ವಾ? ಈಗ ಸಿನಿಮಾಗಳನ್ನ ಯಾಕೆ ಒಪ್ಪಿಕೊಳ್ತಿಲ್ಲ ಗೊತ್ತಿಲ್ಲ.

Actress Chitra Chandranath

ಆದರೆ ಈ ಬ್ಯೂಟಿಯನ್ನ ಮಾತನಾಡಿಸಿ ಸ್ಯಾಂಡಲ್ವುಡ್ ನಲ್ಲಿ ಮತ್ಯಾವ ಸಿನಿಮಾಗಳಲ್ಲೂ ನಟಿಸೋಲ್ವಾ ಅಂದಾಗ, ಚೈತ್ರಾ ಚಿತ್ರರಂಗದ ಒಂದು ಸತ್ಯವನ್ನ ಬಿಚ್ಚಿಟ್ರು! ಸ್ಯಾಂಡಲ್ವುಡ್ ನಲ್ಲಿ ಕಾಂಪ್ರೊಮೈಸ್ ಆಗ್ಬೇಕು. ಅಡ್ಜೆಸ್ಟ್ ಮಾಡ್ಕೋಬೇಕು ಇಲ್ಲಾಂದ್ರೆ ಅವಕಾಶಗಳು ಸಿಕ್ಕೋದಿಲ್ಲ.

ನಾವು ಇವರು ಕೊಡೋ ಸಂಭಾವನೆಗೆ ಕಾಂಪ್ರೊಮೈಸ್ ಆಗ್ಬೇಕು. ಹೀರೋಯಿನ್ನಾಗಿ ಮಿಂಚ್ಬೇಕು ಅನ್ನೋದಾದ್ರೆ ಇದಕ್ಕಿಂತ ಹೆಚ್ಚಿನ ಹಣವನ್ನ ಬಾಂಬೆಯಲ್ಲೇ ಮಾಡ್ಕೋಬಹುದು. ಆದರೆ ನಂಗೆ ಆ ಅವಶ್ಯಕತೆ ಇಲ್ಲ ಅಂತ ಬೇಸರ ವ್ಯಕ್ತಪಡಿಸ್ತಾರೆ. ಇತ್ತೀಚೆಗೆ ನಾವೇ ಹೇಳಿದ್ವಿ. ಸ್ಯಾಂಡಲ್ವುಡ್ ನಲ್ಲಿ ಕೈಬಿಡೋ ನಿರ್ದೇಶಕ, ನಿರ್ಮಾಪಕರು ಹೆಚ್ಚು ಅಂತ. [ಸ್ಯಾಂಡಲ್ ವುಡ್ ನಲ್ಲಿ ಕೈ ಬಿಡೋರೇ ಜಾಸ್ತಿ]

ಅಂದಹಾಗೆ 'ವಿರಾಟ್' ಸಿನಿಮಾ ಸದ್ಯ ನಿಂತೇ ಹೋಗಿದೆ. ಎಚ್.ವಾಸು ಅವರು 'ವಿರಾಟ್' ಮರೆತು ದುನಿಯಾ ವಿಜಿ ಅಭಿನಯದ 'ಕೋಬ್ರಾ' ಸಿನಿಮಾ ಶುರು ಮಾಡ್ಕೊಂಡಿದ್ದಾರೆ. ದರ್ಶನ್ ಡೇಟ್ಸ್ ಅಡ್ಜೆಸ್ಟ್ ಮಾಡಿಕೊಳ್ಳೋಕೆ ಎರಡು ವರ್ಷ ಕಾದ ವಾಸು ಬರಿಗೈಯ್ಯಲ್ಲಿ ವಾಪಾಸಾಗಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಕ್ ಟು ಬ್ಯಾಕ್ ಐದಾರು ಸಿನಿಮಾಗಳಲ್ಲಿ ಬಿಸಿ. ಏನೇ ಆಗ್ಲಿ ಹೊಸಬರಿಗೆ ಹೀಗಾಗದಿರ್ಲಿ. ಮಿಂಚಬೇಕಿರೋ ಪ್ರತಿಭೆಗಳ ಕೈ ಬಿಡದಿರ್ಲಿ ಗಾಂಧಿನಗರ. ಚೈತ್ರಾ ಜೀವನದಲ್ಲಿ ಮತ್ತೆ ಜೀವನ ಚೈತ್ರ ಬರಲಿ.

English summary
Kannada actress Chitra Chandranath breaks silence about why she is not accepting films in Kannada. She played a lead role in Challenging Star Darshan's yet to be released 'Viraat' movie. 
 
Please Wait while comments are loading...