For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್‌ಗಾಗಿ ಬರಲಿದ್ದಾರೆ ಮತ್ತೊಬ್ಬ ಬಾಲಿವುಡ್ ಸುಂದರಿ

  |

  ನಟ ಪ್ರಭಾಸ್ ಈಗ ದಕ್ಷಿಣ ಭಾರತ ನಟನಾಗಿ ಉಳಿದಿಲ್ಲ. ಅವರ ಖ್ಯಾತಿ ಪ್ಯಾನ್ ಇಂಡಿಯಾವನ್ನೂ ದಾಟಿ ಹಬ್ಬಿದೆ. ಪ್ರಭಾಸ್ ಜೊತೆ ಸಿನಿಮಾ ಮಾಡಲು ನಿರ್ದೇಶಕರು, ನಿರ್ಮಾಪಕರು ಮಾತ್ರವಲ್ಲ ನಟಿಯರು ಸಹ ಕಾತುರದಿಂದ ಕಾಯುತ್ತಿದ್ದಾರೆ.

  ಪ್ರಭಾಸ್‌ ಈಗಾಗಲೇ ಹಲವು ಸ್ಟಾರ್ ನಟಿಯರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ 'ಬಾಹುಬಲಿ' ಸ್ಟಾರ್.

  ಕೆಲವು ದಿನಗಳ ಹಿಂದೆಯಷ್ಟೆ ಪ್ರಭಾಸ್‌ರ ಹೊಸ ಸಿನಿಮಾ 'ಸ್ಪಿರಿಟ್' ಘೋಷಣೆಯಾಗಿದ್ದು, ಈ ಸಿನಿಮಾಕ್ಕೂ ಬಾಲಿವುಡ್‌ನಿಂದ ನಾಯಕಿಯನ್ನು ಕರೆತರಲಾಗುತ್ತಿದೆ. ಈಗಾಗಲೇ ಕಂಗನಾ ರಣೌತ್, ಶ್ರದ್ಧಾ ಕಪೂರ್, ಕೃತಿ ಸನೊನ್ ಇನ್ನೂ ಕೆಲವು ಬಾಲಿವುಡ್ ನಟಿಯರೊಟ್ಟಿಗೆ ನಟಿಸಿರುವ ಪ್ರಭಾಸ್‌ 'ಸ್ಪಿರಿಟ್'ನಲ್ಲಿ ಮತ್ತೊಬ್ಬ ಸ್ಟಾರ್ ಬಾಲಿವುಡ್ ನಟಿಯೊಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

  'ಸ್ಪಿರಿಟ್' ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. 'ಸ್ಪಿರಿಟ್' ಸಿನಿಮಾವನ್ನು 'ಅರ್ಜುನ್ ರೆಡ್ಡಿ' ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದು, ಸಿನಿಮಾದ ನಾಯಕಿ ಪಾತ್ರಕ್ಕೆ ಸ್ಟಾರ್ ನಟಿಯನ್ನೇ ಸಂಪರ್ಕಿಸಿದ್ದಾರೆ.

  'ಸ್ಪಿರಿಟ್' ಸಿನಿಮಾದಲ್ಲಿ ಕರೀನಾ ನಾಯಕಿ?

  'ಸ್ಪಿರಿಟ್' ಸಿನಿಮಾದಲ್ಲಿ ಕರೀನಾ ನಾಯಕಿ?

  'ಸ್ಪಿರಿಟ್' ಸಿನಿಮಾಕ್ಕೆ ನಟಿ ಕರೀನಾ ಕಪೂರ್ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಸಂದೀಪ್ ರೆಡ್ಡಿ ವಂಗಾ ಈಗಾಗಲೇ ಕರೀನಾ ಕಪೂರ್‌ಗೆ ಕತೆ ಹೇಳಿದ್ದು, ಕರೀನಾರ ಒಪ್ಪಿಗೆ ಹಾಗೂ ಸಂಭಾವನೆ ವಿಷಯದ ಚರ್ಚೆ ಬಾಕಿ ಇದೆ. ಕರೀನಾ ಒಂದೊಮ್ಮೆ ಒಪ್ಪಿಗೆ ನೀಡಿದರೆ ಕರೀನಾಗೆ ಇದು ಮೊದಲ ದಕ್ಷಿಣ ಭಾರತದ ಸಿನಿಮಾ ಆಗಲಿದೆ.

  ಬಿರಿಯಾನಿ ಕಳಿಸಿದ್ದ ಪ್ರಭಾಸ್

  ಬಿರಿಯಾನಿ ಕಳಿಸಿದ್ದ ಪ್ರಭಾಸ್

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಸಹ ನಟಿಸಿದ್ದು, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಏರ್ಪಟ್ಟಿದೆ. ಕೆಲವು ದಿನಗಳ ಹಿಂದಷ್ಟೆ ಸೈಫ್ ಅಲಿ ಖಾನ್ ಮನೆಗೆ ಬಿರಿಯಾನಿ ಕಳಿಸಿಕೊಟ್ಟಿದ್ದರು ನಟ ಪ್ರಭಾಸ್. ಆ ವಿಷಯವನ್ನು ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರಭಾಸ್ ಸಿನಿಮಾದಲ್ಲಿ ಕರೀನಾ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕರೀನಾ ನಟಿಸಿರುವ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದರ ಬಳಿಕ 'ವೀರ್ ದಿ ವೆಡ್ಡಿಂಗ್ 2' ಸಿನಿಮಾದಲ್ಲಿ ಕರೀನಾ ನಟಿಸಲಿದ್ದಾರೆ.

  ಬಾಲಿವುಡ್ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ

  ಬಾಲಿವುಡ್ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ

  ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಬಾಲಿವುಡ್ ನಟಿಯರು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟಿ ಆಲಿಯಾ ಭಟ್ 'ಆರ್‌ಆರ್‌ಆರ್' ಸಿನಿಮಾದಲ್ಲಿ ನಟಿಸಿದ್ದಾರೆ. ಅದಕ್ಕೂ ಮುನ್ನ ಶ್ರದ್ಧಾ ಕಪೂರ್, ಪ್ರಭಾಸ್ ಜೊತೆಗೆ 'ಸಾಹೊ' ಸಿನಿಮಾದಲ್ಲಿ ನಟಿಸಿದ್ದರು. ದೀಪಿಕಾ ಪಡುಕೋಣೆ ಪ್ರಭಾಸ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ ಸಿನಿಮಾದಿಂದ ವೃತ್ತಿ ಆರಂಭಿಸಿದ ಪೂಜಾ ಹೆಗ್ಡೆಯಂತೂ ತೆಲುಗು-ತಮಿಳು ಚಿತ್ರರಂಗದಲ್ಲಿಯೇ ಸೆಟಲ್ ಆಗಿಬಿಟ್ಟಿದ್ದಾರೆ. ಕಂಗನಾ ಸಹ ತಮಿಳಿನ 'ತಲೈವಿ' ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರಾಜಮೌಳಿ ತಂದೆ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ನಟಿ ಅನನ್ಯಾ ಪಾಂಡೆ ವಿಜಯ್ ದೇವರಕೊಂಡ ಜೊತೆಗೆ 'ಲೈಗರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಪ್ರಭಾಸ್ ಮುಂದಿನ ಸಿನಿಮಾಗಳು?

  ಪ್ರಭಾಸ್ ಮುಂದಿನ ಸಿನಿಮಾಗಳು?

  ಪ್ರಭಾಸ್ ನಟನಾ ವೃತ್ತಿ ಗಮನಿಸುವುದಾದರೆ 'ಬಾಹುಬಲಿ' ನಂತರ ಪ್ರಭಾಸ್ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದ್ದು, ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ 'ಆದಿಪುರುಷ್'ನಲ್ಲಿ ನಟಿಸುತ್ತಿದ್ದಾರೆ ಪ್ರಭಾಸ್. ಮೂಲತಃ ಇದು ಹಿಂದಿ ಸಿನಿಮಾ ಆಗಿದ್ದು, ಭಾರತದ ಇತರೆ ಪ್ರಮುಖ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ರಾಮಾಯಣದ ಕತೆಯ ಈ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸುತ್ತಿದ್ದಾರೆ. ಸಿನಿಮಾದ ಬಜೆಟ್ 500 ಕೋಟಿ ಎನ್ನಲಾಗಿದೆ. ಸಿನಿಮಾವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರಭಾಸ್ ನಟಿಸಿರುವ 'ರಾಧೆ-ಶ್ಯಾಮ್' ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಅದರ ಬಳಿಕ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಟಿಸಿರುವ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ದೀಪಿಕಾ ಪಡುಕೋಣೆ ಜೊತೆಗಿನ ಸಿನಿಮಾ ಸೆಟ್ಟೇರಲಿದ್ದು, ಅದರ ಬಳಿಕ 'ಸ್ಪಿರಿಟ್' ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. 'ಸ್ಪಿರಿಟ್' ಸಿನಿಮಾ ನಿರ್ದೇಶನ ಮಾಡಲಿರುವ ಸಂದೀಪ್ ರೆಡ್ಡಿ ವಂಗಾ ಇದೀಗ ಬಾಲಿವುಡ್ ನಟ ರಣ್ಬೀರ್ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದೆ.

  English summary
  Bollywood actress Kareena Kapoor may act in Prabhas's new movie Spirit. Deepika Padukone will act with Prabhas in his next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X