For Quick Alerts
  ALLOW NOTIFICATIONS  
  For Daily Alerts

  ದಾಖಲೆ ಮೊತ್ತಕ್ಕೆ RRR ಚಿತ್ರದ ಕರ್ನಾಟಕ ವಿತರಣೆ ಹಕ್ಕು ಸೇಲ್!

  |
  ರಿಲೀಸ್ ಗು ಮೊದಲೇ ಕರ್ನಾಟಕದಲ್ಲಿ ದಾಖಲೆ ಬರೆದ ತೆಲುಗು ಚಿತ್ರ RRR | Rajmouli | Bangalore | Karnataka

  ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶನದ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿ ಆರ್ ಒಟ್ಟಿಗೆ ನಟಿಸಿರುವ ಇಷ್ಟೆಲ್ಲಾ ನಿರೀಕ್ಷೆ ಹುಟ್ಟುಹಾಕುವಂತೆ ಮಾಡಿದೆ.

  ತೆಲುಗಿನ ಇಬ್ಬರು ಸೂಪರ್ ಸ್ಟಾರ್ ಹಾಗೂ ಬಾಹುಬಲಿ ಎಂಬ ಮೆಗಾ ಚಿತ್ರದ ಮೂಲಕ ಚರಿತ್ರೆ ಸೃಷ್ಟಿಸಿದ ನಿರ್ದೇಶಕನ ಚಿತ್ರ ಎಂಬ ಕಾರಣಕ್ಕೆ ದೇಶಾದ್ಯಂತ ವಿತರಕರು ಈ ಚಿತ್ರವನ್ನು ಖರೀದಿಸಲು ನಾ ಮುಂದು ತಾ ಮುಂದು ಎಂದು ಬರ್ತಿದ್ದಾರೆ.

  RRR ಚಿತ್ರಕ್ಕಾಗಿ ಅಜಯ್ ದೇವ್ಗನ್ ಸಂಭಾವನೆ ಬಗ್ಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡ್ತೀರಾ.!

  ಈಗಾಗಲೇ ಆರ್ ಆರ್ ಆರ್ ಸಿನಿಮಾ ಪ್ರಿ-ರಿಲೀಸ್ ಕಲೆಕ್ಷನ್ ಬಗ್ಗೆ ಭಾರಿ ಲೆಕ್ಕಾಚಾರ ಆರಂಭವಾಗಿದ್ದು, ಇದರಲ್ಲಿ ಕರ್ನಾಟಕದ ವಿತರಕರೆ ಬೆಲೆ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಅಷ್ಟಕ್ಕೂ, ಆರ್ ಆರ್ ಆರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಎಷ್ಟು ಕೋಟಿಗೆ ಸೇಲ್ ಆಗ್ತಿದೆ? ಮುಂದೆ ಓದಿ.....

  ದಕ್ಷಿಣದಲ್ಲಿ ಮಾತ್ರ 400 ಕೋಟಿ!

  ದಕ್ಷಿಣದಲ್ಲಿ ಮಾತ್ರ 400 ಕೋಟಿ!

  ಸೌತ್ ಇಂಡಸ್ಟ್ರಿಯ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿರುವ ಪ್ರಕಾರ, ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಸುಮಾರು 400 ಕೋಟಿವರೆಗೂ ಪ್ರಿ-ರಿಲೀಸ್ ಗಳಿಕೆ ಮಾಡಲಿದೆಯಂತೆ. ಈ ಮೂಲಕ ಬಾಹುಬಲಿ 2 ಚಿತ್ರದ ದಾಖಲೆಯನ್ನು ಹಿಂದಿಕ್ಕಲಿದೆ ಎಂದಿದ್ದಾರೆ.

  ಬೆರಗಾಗಿಸುತ್ತೆ RRR ಚಿತ್ರದ ಪ್ರೀ ಕಲೆಕ್ಷನ್ ರಿಪೋರ್ಟ್

  ತೆಲುಗು ದೇಶದಲ್ಲಿ 215 ಕೋಟಿ!

  ತೆಲುಗು ದೇಶದಲ್ಲಿ 215 ಕೋಟಿ!

  ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆರ್ ಆರ್ ಆರ್ ಚಿತ್ರ ಸುಮಾರು 215 ಕೋಟಿವರೆಗೂ ಪ್ರೀ-ರಿಲೀಸ್ ಬಿಸಿನೆಸ್ ಮಾಡಲಿದೆಯಂತೆ. ಬಾಹುಬಲಿ 2 ಸಿನಿಮಾ 100 ಕೋಟಿಯ ಗಳಿಕೆ ಮಾಡಿತ್ತಂತೆ. ಆದ್ರೆ, ಆರ್ ಆರ್ ಆರ್ ಚಿತ್ರ ಅದಕ್ಕಿಂತ ಹೆಚ್ಚು ಗಳಿಕೆ ಮಾಡಿದೆ ಎಂಬ ಟಾಕ್ ಈಗ ತೆಲುಗು ವೆಬ್ ಸೈಟ್ ಗಳಲ್ಲಿ ವರದಿಯಾಗಿದೆ.

  ಕರ್ನಾಟಕ ಹಕ್ಕು 50 ಕೋಟಿ ಅಂತೆ!

  ಕರ್ನಾಟಕ ಹಕ್ಕು 50 ಕೋಟಿ ಅಂತೆ!

  ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಕರ್ನಾಟಕದಲ್ಲಿ ಆರ್ ಆರ್ ಆರ್ ಚಿತ್ರದ ಕರ್ನಾಟಕ ವಿತರಣ ಹಕ್ಕು ಸುಮಾರು 50 ಕೋಟಿ ನೀಡಿ ಖರೀದಿಸಲಾಗಿದೆಯಂತೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಯಾರು ವಿತರಣೆ ಮಾಡಲಿದ್ದಾರೆ ಎಂಬುದು ಸದ್ಯದ ಮಟ್ಟಿಗೆ ಗೌಪ್ಯವಾಗಿದ್ದರೂ ಈ ಅಂಕಿಅಂಶ ನಿಜಕ್ಕೂ ಅಚ್ಚರಿ ಉಂಟು ಮಾಡಿದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಈಗ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ.

  ರಾಜಮೌಳಿಯ RRR ಚಿತ್ರಕ್ಕೆ ಮತ್ತಿಬ್ಬರು ಸೂಪರ್ ಸ್ಟಾರ್ಸ್ ಸಾಥ್!

  ತಮಿಳುನಾಡು ಲೆಕ್ಕಕ್ಕೆ ಸಿಕ್ಕಿಲ್ಲ, ಕೇರಳ ಕಥೆ ಏನು?

  ತಮಿಳುನಾಡು ಲೆಕ್ಕಕ್ಕೆ ಸಿಕ್ಕಿಲ್ಲ, ಕೇರಳ ಕಥೆ ಏನು?

  ತಮಿಳುನಾಡಿನಲ್ಲೂ ಆರ್ ಆರ್ ಆರ್ ಚಿತ್ರಕ್ಕೆ ಭಾರಿ ಬೇಡಿಕೆ ಇದೆ. ತಮಿಳಿನಲ್ಲೂ ಸಿನಿಮಾ ತೆರೆಕಾಣುವುದರಿಂದ ಹೆಚ್ಚು ಗಳಿಕೆ ಕಾಣಬಹುದು ಎಂಬ ನಿರೀಕ್ಷೆ ಇದೆ. ಆದರೆ ತಮಿಳುನಾಡಿನ ಪ್ರಿ-ರಿಲೀಸ್ ಗಳಿಕೆ ಬಗ್ಗೆ ಅಂಕಿಅಂಶ ನಿಖರವಾಗಿಲ್ಲ. ಕೇರಳದಲ್ಲಿ 15 ಕೋಟಿಗೆ ಸಿನಿಮಾ ಸೇಲ್ ಆಗಿದೆ ಎನ್ನಲಾಗಿದೆ.

  RRR ಚಿತ್ರದ ಯೂನಿಟ್ ಸದಸ್ಯರ ಮೇಲೆ ರಾಜಮೌಳಿ ಗರಂ

  ಆರ್ ಆರ್ ಆರ್ ಬಜೆಟ್ ಎಷ್ಟು?

  ಆರ್ ಆರ್ ಆರ್ ಬಜೆಟ್ ಎಷ್ಟು?

  ಡಿವಿವಿ ದಾನಯ್ಯ ಈ ಚಿತ್ರ ನಿರ್ಮಿಸುತ್ತಿದ್ದು, ಸುಮಾರು 300 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜು ಹಾಕಲಾಗಿದೆ. ಐತಿಹಾಸಿಕ ಚಿತ್ರವಾಗಿದ್ದರಿಂದ ಮೇಕಿಂಗ್ ನಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಈ ವರ್ಷದ ಮಧ್ಯದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಬಿಡುಗಡೆ ದಿನಾಂಕ 2021ಕ್ಕೆ ಹೋಗಿದೆ.

  English summary
  Ss Rajamouli's RRR movie is creating sensional for pre-release business. as per source karnataka distributor paid very high price for RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X