For Quick Alerts
ALLOW NOTIFICATIONS  
For Daily Alerts

  'ರೇಪ್ ಕಡಿವಾಣಕ್ಕೆ ಗಂಡಂದಿರನ್ನು ಸಂತೃಪ್ತಿಗೊಳಿಸಿ ಸಾಕು'

  By Srinath
  |

  ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ ದೇಶದ ನಾನಾ ಕಡೆ ಒಂದೇ ಸಮನೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೆ ಇಲ್ಲೊಬ್ಬ ಪಡಪೋಷಿ ನಟಿ 'ಅತ್ಯಾಚಾರಕ್ಕೆ ಕಡಿವಾಣ ಹಾಕಲು ತನ್ನದೇ ಆದ ಹೊಸ ಮಾರ್ಗವನ್ನು ಸೂಚಿಸಿದ್ದಾಳೆ.

  ಏನಪ್ಪಾ ಅಂದರೆ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಗಂಡಂದಿರನ್ನು ತೃಪ್ತವಾಗಿಡಿ ಎಂದು ಆಕೆ ಹಲುಬಿದ್ದಾಳೆ. ಯಾರಪ್ಪಾ ಇಂತಹ ಮುಫತ್ತು ಸಲಹೆ ನೀಡುರುವುದು ಎಂದು ನೋಡಿದರೆ ಆಕೆ ಬೇರೆ ಯಾರೂ ಬೆತ್ತಲೆ ಜಗತ್ತಿನ ಪೂನಂ ಪಾಂಡೆ!

  ಚಂದ್ರ ಚಕೋರಿಯ 'ಉಚಿತ' ಸಲಹೆ

  ಇಂಟರ್ನೆಟ್ ಮತ್ತು ಸಿನಿ ಪುಟಗಳಲ್ಲಿ ಢಾಳಾಗಿ ಕಾಣಿಸಿಕೊಳ್ಳುವ ಈ ನಗ್ನ ಚಂದ್ರ ಚಕೋರಿ (ಅಂದಹಾಗೆ ಪೂನಂ ಅಂದರೆ ಪೂರ್ಣ ಚಂದಿರ ಎಂಬರ್ಥವಿದೆ!) ಮಹಿಳೇಯರೇ ನಿಮ್ಮ ಮೇಲೆ ದೌರ್ಜನ್ಯ/ಅತ್ಯಾಚಾರದಂತಹ ಕುಕೃತ್ಯಗಳು ನಡೆಯಬಾರದೆಂದರೆ ನೀವು ನಿಮ್ಮ ಗಂಡಂದಿರನ್ನು ಹಾಸಿಗೆಯಲ್ಲಿ ಸಂತೃಪ್ತಗೊಳಿಸಿ ಎಂದು 'ಉಚಿತ' ಸಲಹೆ ನೀಡಿದ್ದಾಳೆ.

  'ಅಂತಹವರಿಗಾಗಿ' ಪೂನಂ ಏನು ಮಾಡಬಹುದು!?

  ಇದು ವಿವಾಹಿತ ಪುರುಷರ ಬಗ್ಗೆ ಹೇಳಿದಂತಿದೆ. ಆದರೆ ಇತ್ತೀಚೆಗೆ ಅತ್ಯಾಚಾರ ಮಾಡುತ್ತಿರುವ ಪಾಪಿಗಳು ತಾವಿನ್ನೂ ಅಪ್ರಾಪ್ತ ವಯಸ್ಸಿನವರೆಂದೂ ಅಂದರೆ ಮದುವೆ ಆಗದವರೆಂದೂ ಕೋರ್ಟುಗಳಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ. ಅಂತಹವರಿಗಾಗಿ ಪೂನಂ ಪಾಂಡೆ ಏನು ಮಾಡಬಹುದು!?

  ಮನೆಯಲ್ಲೇ ಲೈಂಗಿಕ ತೃಪ್ತಿಹೊಂದಿದರೆ ಸಮಸ್ಯೆ ಉದ್ಭವಿಸದು

  'ನೋಡಿ ಈ ಪುರುಷ ಪುಂಗವರು ಸಿನಿಮಾಗಳನ್ನು ನೋಡುವುದರಿಂದಾಗಲಿ ಅಥವಾ ಪ್ರಚೋದನಕಾರಿ/ ಉದ್ರೇಕಕಾರಿ ಚಿತ್ರಗಳನ್ನು ನೋಡುವುದರಿಂದ ಮನೆಗಳಿಂದ ಹೊರಬಂದು ಮಹಿಳೆಯರ ಮೇಲೆ ಅಪರಾಧವೆಸಗುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅದರ ಬದಲಿಗೆ ತಮ್ಮ ತಮ್ಮ ಮನೆಗಳಲ್ಲೇ ಅವರು ಲೈಂಗಿಕವಾಗಿ ತೃಪ್ತಿಹೊಂದಿದರೆ ಈ ಸಮಸ್ಯೆ ಉದ್ಭವಿಸದು ಎಂಬುದು ಪೂನಂ ಪಾಂಡೆಯ ಬಿಟ್ಟಿ ವಾದ.

  ಬಿಚ್ಚೋಲೆ ಗೌರಮ್ಮ ಪೂನಂ ಒಪ್ಪೋಲ್ಲ

  ಏನೇ ಆಗಲಿ, ಪತ್ರಿಕೆಗಳಲ್ಲಿ ಪ್ರಕಟವಾಗುವ ದೊಡ್ಡ ದೊಡ್ಡ ಪ್ರಚೋದನಕಾರಿ ಚಿತ್ರಗಳು ಆತ್ಯಾಚಾರಕ್ಕೆ ಪ್ರೇರೇಪಣೆಯಾಗುತ್ತದೆ ಎಂಬುದನ್ನು ಈ ಬಿಚ್ಚೋಲೆ ಗೌರಮ್ಮ ಪೂನಂ ಪಾಂಡೆ ಒಪ್ಪೋಲ್ಲವಂತೆ.

  ಬೀರು-ಬಾರು-ಪಬ್ಬುಗಳನ್ನು ತೆರೆದರೆ

  ಆಯ್ತು ಅದೂ ಆಗಲಿಲ್ಲವಾ. ಅಂದರೆ ಮನೆಗಳಲ್ಲಿ ಪುರುಷರನ್ನು ಸಂತೃಪ್ತಗೊಳಿಸಿದರೂ ಅಪರಾಧಗಳು ಕಡಿಮೆಯಾಗಲಿಲ್ಲ ಅಂದರೆ ಬೀರ್-ಬಾರ್ ಗಳಿಗೆ ಮುಕ್ತರಾಗಿ. ನೋಡಿ ಈ ಬೀರು-ಬಾರು-ಪಬ್ಬುಗಳನ್ನು ತೆರೆದರೆ ರಸ್ತೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದಂತಹ ಅಪರಾಧಗಳು ತಕ್ಕಮಟ್ಟಿಗೆ ನಿಲ್ಲುತ್ತವೆ. ಈ ಪುರುಷರು ಎಲ್ಲೋ ಒಂದು ಕಡೆ ಸಂತೃಪ್ತರಾಗುವುದಕ್ಕೆ ಅವಕಾಶವಿರಬೇಕಲ್ವಾ? ಎಂದು ಮರುಪ್ರಶ್ನಿಸುತ್ತಾಳೆ ಈ ಮಾಡೆಲ್ ಕಮ್ ಬಾಲಿವುಡ್ ಬೆಡಗಿ.

  ಉದ್ರೇಕಕಾರಿ ಉಡುಪನ್ನು ಧರಿಸುವುದರಿಂದ

  ಸರಿ ಹಾಗಾದರೆ ಮಹಿಳೆಯರು ಉದ್ರೇಕಕಾರಿ ಉಡುಪನ್ನು ಧರಿಸುವುದರಿಂದ ಅವರ ಮೇಲೆ ಅತ್ಯಾಚಾರ ನಡೆಯುವ ಸಾಧ್ಯತೆ ಇರುವುದಿಲ್ಲವಾ? ಎಂದು ಕೇಳಿದರೆ ನೋ ಛಾನ್ಸ್ ಎಂದು ತುಟಿ ಕೊಂಕು ಮಾಡುತ್ತಾಳೆ. ಅಲ್ರೀ, ರೇಪ್ ತಡೆಯಬೇಕು ಅಂದರೆ ಮಹಿಳೆ ಮೈತುಂಬಾ ಬಟ್ಟೆ ಸುತ್ತಿಕೊಂಡೇ ಇರಬೇಕಾ? ಐದು ವರ್ಷದ ಹಸುಳೆ ಮೇಲೆ ಅತ್ಯಾಚಾರ ನಡೆಯುತ್ತದೆ ಅಂದರೆ ಏನರ್ಥ ಎಂದೂ ದಬಾಯಿಸುತ್ತಾಳೆ ಈ ಚಂದ್ರಚಕೋರಿ.

  ಯಾಕ್ರೀ ಸುಖಾಸುಮ್ಮನೆ ನನ್ನ ಮೈಮೇಲೆ ಬೀಳ್ತೀರಿ!

  'ಅಲ್ಲಮ್ಮಾ ನಿನ್ನ ಚಿತ್ರಗಳು ಉದ್ರೇಕಕಾರಿಯಾಗಿರತಾವೆ. ಅದನ್ನು ನೋಡಿಯೂ ಈ ಕ್ರೈಂ ನಡೆಯಬಹುದಲ್ವಾ" ಎಂದು ಕೇಳಿದರೆ 'ಯಾಕ್ರೀ ಸುಖಾಸುಮ್ಮನೆ ನನ್ನ ಮೈಮೇಲೆ ಬೀಳ್ತೀರಿ! ನಾನು ಬರುವುದಕ್ಕೂ ಮುಂಚೆ ಮಹಿಳೆಯರ ಮೇಲೆ ಕುಕೃತ್ಯಗಳು ನಡೆಯುತ್ತಿರಲಿಲ್ವಾ?. ಅಂತೂ ನಿಮಗೊಂದು ಹರಕೆಯ ಕುರಿ ಬೇಕು ಅದಕ್ಕೆ ನನ್ನಂತಹ ಪಾಪದ ಹುಡುಗಿಯ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತೀರಿ!' ಎಂದು ಗಂಭೀರವಾಗುತ್ತಾಳೆ ಈ 'ನಶಾ' ಸುಂದರಿ.

  English summary
  Keep your husbands happy to stop rapes - Poonam Pandey admonishes wives. "I don't think men go out and commit crime against women because of what they see in films and in pictures. On the contrary, I feel there would be far less crime against women if there would be more sexual gratification at home for men belonging to a certain class, who don't have direct and easy access to female company," Poonam Pandey finds solution to crime against women.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more