»   » ಕೆ.ಎಫ್.ಸಿ.ಸಿ ಅಧ್ಯಕ್ಷಗಾದಿಗೆ ನಿರ್ಮಾಪಕ ಸಾ.ರಾ.ಗೋವಿಂದು?

ಕೆ.ಎಫ್.ಸಿ.ಸಿ ಅಧ್ಯಕ್ಷಗಾದಿಗೆ ನಿರ್ಮಾಪಕ ಸಾ.ರಾ.ಗೋವಿಂದು?

Posted By:
Subscribe to Filmibeat Kannada

ಈ ತಿಂಗಳಾಂತ್ಯದಲ್ಲಿ, ಅಂದ್ರೆ ಅಕ್ಟೋಬರ್ 31 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಸಾ.ರಾ.ಗೋವಿಂದು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ನಿರ್ಮಾಪಕರ ವಲಯಕ್ಕೆ ಮೀಸಲು. ಮೂಲಗಳ ಪ್ರಕಾರ, ನಿರ್ಮಾಪಕರ ಸಂಘದಿಂದ ಸಾ.ರಾ.ಗೋವಿಂದು ಅವಿರೋಧವಾಗಿ ಆಯ್ಕೆ ಆಗುವ ಸಾಧ್ಯತೆ ಇದೆ.

sa ra govindu

ಎರಡ್ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ, 'ಬೆಳ್ಳಿ ಕಾಲುಂಗುರ', 'ಕನಸುಗಾರ', 'ಚಂದು', 'ಚೋರ ಚಿತ್ತ ಚೋರ', 'ಜಾಣ', 'ಗುನ್ನ', 'ಲಾಲಿ ಹಾಡು' ಚಿತ್ರಗಳನ್ನ ನಿರ್ಮಿಸಿದ್ದಾರೆ ಸಾ.ರಾ.ಗೋವಿಂದು. [ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ]

ಅಧಿಕಾರಕ್ಕೆ ಎಂದೂ ಆಸೆ ಪಡದ ನಿರ್ಮಾಪಕ ಸಾ.ರಾ.ಗೋವಿಂದು, ಅರ್ಹತೆ ಇದ್ದರೂ ಇದುವರೆಗೂ ಕೆ.ಎಫ್.ಸಿ.ಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ. ಈ ಬಾರಿ ನಿರ್ಮಾಪಕರ ವಲಯದ ಜೊತೆಗೆ ವಿತರಕರು ಹಾಗು ಪ್ರದರ್ಶಕರ ಒತ್ತಾಯದ ಮೇರೆಗೆ ಸರ್ಧಿಸಲಿದ್ದಾರೆ ಅನ್ನೋದು ಮೂಲಗಳಿಂದ ಬಂದಿರುವ ಮಾಹಿತಿ.

English summary
According to the sources, Producer Sa.Ra.Govindu will contest for the President post in Karnataka Film Chamber of Commerce election, which will be held on October 31st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada