»   » ಚಿಕ್ಕಣ್ಣಗೆ 'ರನ್ನ' ಸುದೀಪ್ ದುಬಾರಿ ಉಡುಗೊರೆ!

ಚಿಕ್ಕಣ್ಣಗೆ 'ರನ್ನ' ಸುದೀಪ್ ದುಬಾರಿ ಉಡುಗೊರೆ!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮಾತಿನಲ್ಲಿ ಒರಟಿರಬಹುದು. ಆದ್ರೆ, ಸ್ನೇಹಜೀವಿ. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಹೃದಯವಂತ. ಸುದೀಪ್ ಹೃದಯವಂತಿಕೆ ಬಗ್ಗೆ 'ರನ್ನ' ಚಿತ್ರದ ನಿರ್ದೇಶಕ ನಂದಕಿಶೋರ್ ಮತ್ತು ತರುಣ್ ಸುಧೀರ್ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನ ನಾವು ಹೇಳಿದ್ವಿ. ನೀವೂ ಕೇಳಿದ್ರಿ.

ಈಗ ಸುದೀಪ್ ಉದಾರತನದ ಬಗ್ಗೆ ಮತ್ತೊಂದು ನಿದರ್ಶನ ನಿಮ್ಮ 'ಫಿಲ್ಮಿಬೀಟ್'ಗೆ ಸಿಕ್ಕಿದೆ. ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಚ್ಚಿಕ್ಕು ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತು. ಈಗ ಇದೇ 'ನಲ್ಲ'ನಿಗೆ ಆತ್ಮೀಯರಾಗಿರುವುದು ಹಾಸ್ಯ ನಟ ಚಿಕ್ಕಣ್ಣ. ['ರನ್ನ' ಸುದೀಪ್ ಜತೆ ನಟಿಸಿದ ಖುಷಿಯಲಿ ಆನಂದಭಾಷ್ಪ]


sudeep-chikkanna

'ರನ್ನ' ಚಿತ್ರದಲ್ಲಿ ಸುದೀಪ್ ಮತ್ತು ಚಿಕ್ಕಣ್ಣ ಕಾಮಿಡಿ ಜೋರಾಗಿದೆ. ಇಬ್ಬರ ಕಾಮಿಡಿ ಕೆಮಿಸ್ಟ್ರಿ ಹೇಗಿದೆ ಅನ್ನುವುದಕ್ಕೆ ''ಸೀರೆಲಿ ಹುಡುಗೀರ...'' ಹಾಡೇ ಸಾಕ್ಷಿ. ಈಗಾಗಲೇ ಹಿಂದಿನ ಚಿತ್ರಗಳಲ್ಲಿ ಚಿಕ್ಕಣ್ಣ ಹಾಸ್ಯ ಚಟಾಕಿಗಳನ್ನ ನೋಡಿ ಇಂಪ್ರೆಸ್ ಆಗಿದ್ದ ಸುದೀಪ್, 'ರನ್ನ' ಚಿತ್ರದಲ್ಲಿ ಚಿಕ್ಕಣ್ಣ ಪರ್ಫಾಮೆನ್ಸ್ ನ ಕಣ್ಣಾರೆ ಕಂಡು ಕ್ಲೀನ್ ಬೌಲ್ಡ್ ಆಗಿದ್ದಾರೆ.


ಇದೇ ಖುಷಿಯಲ್ಲಿ ದುಬಾರಿ ಕಾರ್ ವೊಂದನ್ನ ಚಿಕ್ಕಣ್ಣಗೆ ಉಡುಗೊರೆ ರೂಪದಲ್ಲಿ ಸುದೀಪ್ ನೀಡಿದ್ದಾರೆ. ಚಿಕ್ಕಣ್ಣ ವೃತ್ತಿಪರತೆ ನೋಡಿ ಸುದೀಪ್ ಕಾರ್ ಗಿಫ್ಟ್ ಮಾಡಿದ್ದಾರೆ ಅನ್ನುತ್ತಿವೆ ಚಿಕ್ಕಣ್ಣ-ಸುದೀಪ್ ಆಪ್ತ ಮೂಲಗಳು. [ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ]


ranna trailer

ನಂದಕಿಶೋರ್ ನಿರ್ದೇಶನದ 'ರನ್ನ' ಚಿತ್ರ ಜೂನ್ 4 ರಂದು ತೆರೆಗೆ ಬರಲಿದೆ. ರಚಿತಾ ರಾಮ್, ಹರಿಪ್ರಿಯಾ, ಮಧೂ, ಸಾಧುಕೋಕಿಲ ರಂತಹ ದೊಡ್ಡ ತಾರಾಬಳಗವಿರುವ 'ರನ್ನ' ಚಿತ್ರದಲ್ಲಿ ಸುದೀಪ್-ಚಿಕ್ಕಣ್ಣ ಕಾಮಿಡಿ ಕಮಾಲ್ ಹೇಗಿರಲಿದೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

English summary
According to the latest reports, Kannada Actor Kiccha Sudeep was blown away by Comedy Actor Chikkanna's acting in 'Ranna' and has gifted him a car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada