»   » 'ರನ್ನ'ನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ!

'ರನ್ನ'ನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ರಿಲೀಸ್ ಆಗಿದೆ. ಸುದೀಪ್ ಅಭಿಮಾನಿಗಳಿಗೆ 'ರನ್ನ' ಸೂಪರ್ ಕಿಕ್ ನೀಡಿದೆ. ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ರನ್ನ' ಮೂರು ದಿನಗಳಲ್ಲಿ ಮಾಡಿರುವ ಕಲೆಕ್ಷನ್ ಎಷ್ಟು ಗೊತ್ತಾ?

ಗಾಂಧಿನಗರದ ಪಂಡಿತರ ಲೆಕ್ಕಾಚಾರದ ಪ್ರಕಾರ ಬಿಡುಗಡೆಯಾದ ಮೂರೇ ದಿನಗಳಲ್ಲಿ 'ರನ್ನ' ಕಲೆಕ್ಟ್ ಮಾಡಿರುವುದು ಸುಮಾರು 10 ಕೋಟಿ ರೂಪಾಯಿ. ನಂಬಿದ್ರೆ ನಂಬಿ, ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿರುವ ಖಾಸ್ ಖಬರ್ ಅಂದ್ರೆ ಇದೆ.[ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]


Kiccha Sudeep starrer 'Ranna' collects 10 crore in 3 days?

ಮೂಲಗಳ ಪ್ರಕಾರ ಮೊದಲನೇ ದಿನ 'ರನ್ನ' ಕಲೆಕ್ಷನ್ 3.6 ಕೋಟಿ ರೂಪಾಯಿ ದಾಟಿದೆ. ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ 'ರನ್ನ', ಎರಡನೇ ದಿನ ಅಂದ್ರೆ, ಶುಕ್ರವಾರ 3 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇನ್ನೂ ಮೂರನೇ ದಿನ ಶನಿವಾರ, ವೀಕೆಂಡ್ ಆದ್ದರಿಂದ ಹತ್ತತ್ರ ನಾಲ್ಕು ಕೋಟಿ ಗಳಿಸಿದ್ಯಂತೆ.


ಅಲ್ಲಿಗೆ, ಮೂರೇ ದಿನಕ್ಕೆ 10 ಕೋಟಿ ಲೂಟಿ ಮಾಡುವ ಮೂಲಕ 'ರನ್ನ' ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾನೆ. ವರ್ಷದಿಂದ ಕಿಚ್ಚ ಸುದೀಪ್ ಸಿನಿಮಾಗಾಗಿ ಕಾತುರದಿಂದ ಕಾಯ್ತಿದ್ದ ಅಭಿಮಾನಿಗಳಿಗೆ 'ರನ್ನ' ರಸದೌತಣ ನೀಡಿದೆ. ಹೀಗೆ ಮುಂದುವರಿದರೆ, 'ರನ್ನ' ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವುದರಲ್ಲಿ ಡೌಟ್ ಇಲ್ಲ.[ಮೈಸೂರಲ್ಲಿ ಪ್ರೇಕ್ಷಕರೊಂದಿಗೆ 'ರನ್ನ' ನೋಡಿದ ಯಶ್]


Kiccha Sudeep starrer 'Ranna' collects 10 crore in 3 days?

ಕಿಚ್ಚ ಸುದೀಪ್ ಜೊತೆ ರಚಿತಾ ರಾಮ್, ಹರಿಪ್ರಿಯಾ, ಮಧುಬಾಲ ರಂತಹ ದೊಡ್ಡ ತಾರಾಬಳಗವಿರುವ 'ರನ್ನ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ನಂದಕಿಶೋರ್. (ಏಜೆನ್ಸೀಸ್)

English summary
Kiccha Sudeep starrer 'Ranna' is gathering huge response from the critics and audience. According to the grapevine, 'Ranna' has collected 10 crores (approx) in 3 days at the Box Office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada