»   » 'ರನ್ನ' ಸ್ಯಾಟೆಲೈಟ್ ರೈಟ್ಸ್ ಅಬ್ಬಬ್ಬಾ ಅಷ್ಟೊಂದಾ?

'ರನ್ನ' ಸ್ಯಾಟೆಲೈಟ್ ರೈಟ್ಸ್ ಅಬ್ಬಬ್ಬಾ ಅಷ್ಟೊಂದಾ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರನ್ನ'. ತೆಲುಗಿನಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದ್ದ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಈ 'ರನ್ನ'. ಸೆಟ್ಟೇರಿದಾಗಿನಿಂದಲೂ ಗಾಂಧಿನಗರದಲ್ಲಿ ಭಾರಿ ಸದ್ದು-ಸುದ್ದಿ ಮಾಡುತ್ತಿರುವ 'ರನ್ನ' ಸಿನಿಮಾ ಈಗ ರಿಲೀಸ್ ಗೆ ರೆಡಿಯಾಗಿದೆ.

ಬಿಡುಗಡೆಯಾಗುವ ಮುನ್ನವೇ ಹೊಸ ದಾಖಲೆ ಬರೆಯುವತ್ತ 'ರನ್ನ' ಚಿತ್ರ ಸಾಗುತ್ತಿದೆ. ಪ್ರಸಿದ್ಧ ಕನ್ನಡ ವಾಹಿನಿಯೊಂದಕ್ಕೆ 'ರನ್ನ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಸೇಲ್ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಮೂಲಗಳ ಪ್ರಕಾರ 'ರನ್ನ'ನ ಸ್ಯಾಟೆಲೈಟ್ ರೈಟ್ಸ್ ಗಾಗಿ ಕೋಟ್ ಮಾಡಿರುವ ಮೊತ್ತ ಬರೋಬ್ಬರಿ 5 ಕೋಟಿ ರೂಪಾಯಿ..!


Kiccha Sudeep starrer 'Ranna' Satellite rights for Rs.5 crores?

ಹೌದು, ಕಿರುತೆರೆಯಲ್ಲಿ 'ರನ್ನ' ಪ್ರಸಾರ ಹಕ್ಕುಗಳಿಗಾಗಿ ಐದು ಕೋಟಿ ರೂಪಾಯಿ ನೀಡುವುದಕ್ಕೆ ಚಾನೆಲ್ ಒಂದು ಮುಂದೆ ಬಂದಿದೆ. ಕನ್ನಡದ ಅದೆಷ್ಟೋ ಚಿತ್ರಗಳನ್ನ ತಿರುಗಿ ಕೂಡ ನೋಡದ ವಾಹಿನಿಯವರು ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರಕ್ಕಾಗಿ 5 ಕೋಟಿ ರೂಪಾಯಿ ನೀಡುವುದಕ್ಕೆ ರೆಡಿಯಿದ್ದಾರೆ. [ಕಿಚ್ಚ ಸುದೀಪ್ ಗೆ ಟೆಂಪರೇಚರ್ ರೈಸ್ ಆದಾಗ.....]


ಆದ್ರೆ, ಈ ಬಗ್ಗೆ ನಿರ್ದೇಶಕ ನಂದಕಿಶೋರ್ ಮತ್ತು ನಿರ್ಮಾಪಕರು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮೊದಲು ಆಡಿಯೋ ರಿಲೀಸ್ ಮಾಡುವತ್ತ 'ರನ್ನ' ಚಿತ್ರತಂಡ ಗಮನ ಹರಿಸುತ್ತಿದೆ. ಏಪ್ರಿಲ್ 16 ರಂದು 'ರನ್ನ' ಆಡಿಯೋ ರಿಲೀಸ್ ಆಗುವ ಸಾಧ್ಯತೆ ಇದೆ. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


ಈಗಾಗಲೇ ''ಸೀರೆಲಿ ಹುಡುಗೀರ....'' ಮತ್ತು ''ಬಬ್ಬರ್ ಶೇರ್...'' ಹಾಡುಗಳು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿವೆ. ಆಡಿಯೋ ರಿಲೀಸ್ ಆದ್ರೆ, ಅದರಲ್ಲಿ ರೆಕಾರ್ಡ್ ಮಾಡುವುದರ ಜೊತೆಗೆ ಪ್ರಸಾರ ಹಕ್ಕುಗಳಲ್ಲೂ ದಾಖಲೆ ಬರೆಯುವುದರಲ್ಲಿ ಡೌಟ್ ಇಲ್ಲ. (ಏಜೆನ್ಸೀಸ್)

English summary
Kiccha Sudeep starrer 'Ranna' audio is all set to release this week. Meanwhile, According to the reports, Kannada Entertainment Channel has quoted Rs.5 Crore for 'Ranna' Satellite Rights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada