»   » ಸುದೀಪ್ ಅನುಭವಿಸುತ್ತಿರುವ 'ನೋವು' ನಿಮಗ್ಗೊತ್ತಾ?

ಸುದೀಪ್ ಅನುಭವಿಸುತ್ತಿರುವ 'ನೋವು' ನಿಮಗ್ಗೊತ್ತಾ?

Posted By: ಜೀವನರಸಿಕ
Subscribe to Filmibeat Kannada

ಸುದೀಪ್ ಸ್ಯಾಂಡಲ್ ವುಡ್ ಮಾತ್ರ ಅಲ್ಲ ಬಾಲಿವುಡ್, ಟಾಲಿವುಡ್ ಅಷ್ಟೇ ಯಾಕೆ ಕಾಲಿವುಡ್ ನಲ್ಲೂ ಬಿಜಿ ಇರೋ ನಟ. ಕಿಚ್ಚ ಕನ್ನಡದಲ್ಲಿ 'ರನ್ನ' ಸಿನಿಮಾದ ಎರಡು ಶೆಡ್ಯೂಲ್ ಮುಗಿಸಿ ಸದ್ಯ ಚೆನ್ನೈನಲ್ಲಿದ್ದಾರೆ. ತಮಿಳಿನ ಇಳಯದಳಪತಿ ವಿಜಯ್ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡ್ತಿದ್ದಾರೆ.

ಆದರೆ ಇದೆಲ್ಲದರ ನಡುವೆ ಕಿಚ್ಚ ನಿದ್ರೆ ಮಾಡೋದು ತೀರಾ ಕಡಿಮೆಯಂತೆ. ಸುದೀಪ್ ಗೆ ನಿದ್ರೆ ಹತ್ತಿರ ಸುಳಿಯೋದೇ ಇಲ್ಲವಂತೆ. ರಾತ್ರಿ ಹೆಚ್ಚಿನ ಸಮಯ ಸಿನಿಮಾದ ವಿಷಯಗಳಲ್ಲೇ ಕಿಚ್ಚ ಬಿಜಿಯಾಗಿರ್ತಾರಂತೆ. ಹೀಗೆ ಮಾಡೋದ್ರಿಂದಾನೋ ಏನೋ ಕಿಚ್ಚನಿಗೆ ಮೈಗ್ರೇನ್ ಶುರುವಾಗಿದೆಯಂತೆ. [ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ]

Kichcha Sudeep

ಹೇಳಿ ಕೇಳಿ ಮೈಗ್ರೇನ್ ಅಂದ್ರೆ ತಲೆ ಸಿಡಿತ. ಸೆಟ್ ನಲ್ಲಿ ಎಲ್ಲರನ್ನೂ ಪ್ರೋತ್ಸಾಹಿಸ್ತಾ ಶೂಟಿಂಗ್ ಮಾಡೋ ಸುದೀಪ್ ಮೈಗ್ರೇನ್ ಬಂದ ನಂತರ ನಿದ್ರೆ ಮಾಡೋಕೆ ಕಷ್ಟಪಡ್ತಿದ್ದಾರೋ, ಇಲ್ಲದಿದ್ರೆ ನಿದ್ರೆ ಮಾಡದೇ ಇರೋದಕ್ಕೆ ಮೈಗ್ರೇನ್ ಬಂದಿದ್ಯೋ ಗೊತ್ತಿಲ್ಲ.

ಆದರೆ ಇದು ಕಿಚ್ಚನ ಅಭಿಮಾನಿಗಳಿಗೆ ಮಾತ್ರ ಆತಂಕ ತರಿಸಿದೆ. ಅಭಿನಯ ಚಕ್ರವರ್ತಿ ಸಿನಿಮಾ ಅಂತ ಬಿಜಿಯಾಗೋದ್ರ ಜೊತೆಗೆ 40 ದಾಟಿದ ಮೇಲೆ ಆರೋಗ್ಯದ ಬಗ್ಗೇನೂ ಸ್ವಲ್ಪ ಕಾಳಜಿ ತಗೋಬೇಕು ಅಲ್ಲವೇ ಎಂಬುದು ಅಭಿಮಾನಿಗಳ ಕಿವಿಮಾತು.

English summary
Do you know Abhinaya Chakravarthi Kichcha Sueep is suffering from Migraine? He is spending much time on his projects, even he is not keep back sufficient time for sleep. These leads to painful days for him, says sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada