For Quick Alerts
  ALLOW NOTIFICATIONS  
  For Daily Alerts

  Big News: ರಜನಿಕಾಂತ್ ಬಯೋಪಿಕ್ ಸುದ್ದಿ: ತಲೈವಾ ಪಾತ್ರಕ್ಕೆ ಆ ಸ್ಟಾರ್ ಸೂಕ್ತವಂತೆ!

  |

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಚಿತ್ರ ನೋಡುವುದಕ್ಕೆ ಖುಷಿ ಪಡುವ ಅಭಿಮಾನಿಗಳು ಅವರ ಬಯೋಪಿಕ್ ಬರುತ್ತೆ ಅಂದ್ರೆ ಹೇಗೆ ಸಂಭ್ರಮಿಸಬೇಡ ಹೇಳಿ. ಹೌದು, ಸೌತ್ ಇಂಡಸ್ಟ್ರಿಯಲ್ಲಿ ತಲೈವಾ ಬಯೋಪಿಕ್ ಬ್ರೇಕಿಂಗ್ ನ್ಯೂಸ್‌ ಹೊರಬಿದ್ದಿದೆ.

  ಸೂಪರ್ ಸ್ಟಾರ್ ರಜನಿಯ ಬಯೋಪಿಕ್ ತೆರೆಗೆ ತರಲು ಕಾಲಿವುಡ್ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡುತ್ತಿದ್ದು, ತಲೈವಾ ಪಾತ್ರ ಸೂಕ್ತ ನಟನೊಬ್ಬನ ಆಯ್ಕೆ ಸಹ ಮಾಡಿದ್ದಾರೆ. ಹಾಗಾದ್ರೆ, ರಜನಿಕಾಂತ್ ಬಯೋಪಿಕ್ ಮಾಡಲು ಸಜ್ಜಾಗುತ್ತಿರುವ ಪ್ರೊಡಕ್ಷನ್ ಸಂಸ್ಥೆ ಯಾವುದು? ರಜನಿ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳಬಹುದು? ಮುಂದೆ ಓದಿ...

  ಲಿಂಗಸ್ವಾಮಿ ಯೋಜನೆ

  ಲಿಂಗಸ್ವಾಮಿ ಯೋಜನೆ

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಯೋಪಿಕ್ ಮಾಡಲು ತಮಿಳಿನ ಸ್ಟಾರ್ ನಿರ್ದೇಶಕ ಲಿಂಗಸ್ವಾಮಿ ಮನಸ್ಸು ಮಾಡಿದ್ದು, ಇಂತಹದೊಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕಮರ್ಷಿಯಲ್ ಚಿತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಲಿಂಗಸ್ವಾಮಿ, ತಲೈವಾ ಬಯೋಪಿಕ್ ಮಾಡಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾರೆ. ಲಿಂಗಸ್ವಾಮಿಯ ಈ ಆಸೆ ಸೌತ್ ಇಂಡಸ್ಟ್ರಿಯಲ್ಲಿ ದೊಡ್ಡ ಸುದ್ದಿಯಾಗಿದೆ.

  ಧನುಶ್ 43ನೇ ಚಿತ್ರಕ್ಕೆ ಮಾಳವಿಕಾ ಮೋಹನ್ ನಾಯಕಿ

  ರಜನಿ ಪಾತ್ರದಲ್ಲಿ ಧನುಶ್!

  ರಜನಿ ಪಾತ್ರದಲ್ಲಿ ಧನುಶ್!

  ಒಂದು ವೇಳೆ ರಜನಿಕಾಂತ್ ಬಯೋಪಿಕ್ ಮಾಡಿದ್ರೆ ತಲೈವಾ ಪಾತ್ರದಲ್ಲಿ ಯಾರು ನಟಿಸಬಹುದು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕಾಡುವುದು ಸಹಜ. ಲಿಂಗಸ್ವಾಮಿ ಹೇಳುವ ಪ್ರಕಾರ ರಜನಿ ಅವರ ಅಳಿಯ ಧನುಶ್ ಅವರೇ ಆ ಪಾತ್ರ ಮಾಡಬೇಕು ಎನ್ನುತ್ತಾರೆ.

  ಅಣ್ಣಾತೆ ಚಿತ್ರದಲ್ಲಿ ತಲೈವಾ

  ಅಣ್ಣಾತೆ ಚಿತ್ರದಲ್ಲಿ ತಲೈವಾ

  ಸಿರುತೈ ಶಿವ ನಿರ್ದೇಶನ ಮಾಡುತ್ತಿರುವ ಅಣ್ಣಾತೆ ಸಿನಿಮಾದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ತಮಿಳುನಾಡು ಚುನಾವಣೆ ನಡೆಯಲಿದ್ದು, ಎಲೆಕ್ಷನ್‌ಗೂ ತಲೈವಾ ತಯಾರಿ ನಡೆಸಿದ್ದಾರೆ. ರಜನಿ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಬಹುದು.

  'ತಲೈವರ್ 169' ಸಿನಿಮಾ: ಮತ್ತೆ ಸನ್ ಪಿಕ್ಚರ್ಸ್ ಜೊತೆ ಕೈಜೋಡಿಸಿದ ರಜನಿಕಾಂತ್

  ಸತತ ಸಿನಿಮಾಗಳಲ್ಲಿ ಧನುಶ್ ಬ್ಯುಸಿ

  ಸತತ ಸಿನಿಮಾಗಳಲ್ಲಿ ಧನುಶ್ ಬ್ಯುಸಿ

  ಕಾರ್ತಿಕ್ ಸುಬ್ಬುರಾಜು ನಿರ್ದೇಶಕ 'ಜಗಮೇ ತಂತೀರಮ್' ಸಿನಿಮಾದಲ್ಲಿ ಧನುಶ್ ನಟಿಸಿದ್ದಾರೆ. 'ಕರ್ಣನ್' ಎಂಬ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಬಾಲಿವುಡ್‌ನ ಚಿತ್ರವೊಂದರಲ್ಲು ಅಭಿನಯಸುತ್ತಿದ್ದಾರೆ. ಇದೀಗ, ನರೇನ್ ಕಾರ್ತಿಕ್ ಜೊತೆ ಪ್ರಾಜೆಕ್ಟ್‌ವೊಂದಕ್ಕೆ (D43) ಸಹಿ ಹಾಕಿದ್ದಾರೆ.

  ತಲೈವಾ ಮತ್ತು ಧನುಶ್ ಏನಾಂತರೆ?

  ತಲೈವಾ ಮತ್ತು ಧನುಶ್ ಏನಾಂತರೆ?

  ಬಯೋಪಿಕ್ ಬಗ್ಗೆ ಈವರೆಗೂ ರಜನಿ ಎಲ್ಲಿಯೂ ಮಾತನಾಡಿಲ್ಲ. ಧನುಶ್ ಸಹ ಅಂತಹ ಆಸೆಯನ್ನು ವ್ಯಕ್ತಪಡಿಸಿಲ್ಲ. ಇದೀಗ, ಲಿಂಗಸ್ವಾಮಿ ಇಂತಹದೊಂದು ಆಸೆ ಹೊರಹಾಕಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ರಜನಿ ಬಯೋಪಿಕ್ ಗೆ ಒಪ್ಪಿಗೆ ಕೊಡ್ತಾರಾ? ಧನುಶ್ ಅವರು ರಜನಿ ಪಾತ್ರ ಮಾಡಲು ಮುಂದಾಗ್ತಾರಾ? ಕಾದುನೋಡಬೇಕು.

  English summary
  Kollywood top production house planning to make Rajinikanth Biopic. Media reports suggest that actor Dhanush will be playing Rajinikanth Role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X