»   » ಪ್ರತ್ಯೇಕ ಹೊಸ ಪಕ್ಷ ಕಟ್ಟಲು ಉಪೇಂದ್ರ ಮಾಡಿರುವ ಮಾಸ್ಟರ್ ಪ್ಲಾನ್ ಇದು.?

ಪ್ರತ್ಯೇಕ ಹೊಸ ಪಕ್ಷ ಕಟ್ಟಲು ಉಪೇಂದ್ರ ಮಾಡಿರುವ ಮಾಸ್ಟರ್ ಪ್ಲಾನ್ ಇದು.?

Posted By:
Subscribe to Filmibeat Kannada

ಇಷ್ಟು ದಿನ 'ಪ್ರಜಾಕೀಯ', 'ಪ್ರಜಾಕಾರಣ'ದ ಮೂಲಕ ಸದ್ದು ಮಾಡುತ್ತಿದ್ದ ಉಪೇಂದ್ರ ಇಂದು ಬೇಡದ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಪಕ್ಷಕ್ಕೆ ಓಂಕಾರ ಹಾಕುವಾಗಲೇ ಉಪೇಂದ್ರಗೆ ಸಂಕಟ ಎದುರಾಗಿದೆ.

ಕಣ್ಮುಚ್ಚಿ ಕಣ್ತೆರೆಯುವ ಅಂತರದಲ್ಲಿ ವಿಧಾನಸಭಾ ಚುನಾವಣೆ ಬರುವುದರಿಂದ, ಅಭ್ಯರ್ಥಿಗಳಿಗೆ ಬಿ-ಫಾರ್ಮ್ ಹಂಚುವ ವಿಚಾರದಲ್ಲಿ ಕೆ.ಪಿ.ಜೆ.ಪಿ ಪಕ್ಷದ ಸಂಸ್ಥಾಪಕ, ಮುಖ್ಯ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ನಡುವೆ ಭಿನ್ನಮತ ಮೂಡಿದೆ.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಾವೊಬ್ಬರೇ ಸೈನಿಂಗ್ ಅಥಾರಿಟಿ ಆಗಿರಬೇಕು ಎಂಬುದು ಉಪೇಂದ್ರ ವಾದ. ಆದ್ರೆ, ಇದು ಪ್ರಜಾಕೀಯ ತತ್ವಕ್ಕೆ ವಿರುದ್ಧ. ಒಬ್ಬರಿಗೆ ಅಧಿಕಾರ ನೀಡಲು ಸಾಧ್ಯವಿಲ್ಲ. ಕನಿಷ್ಟ ಇಬ್ಬರಿಗೆ ಸೈನಿಂಗ್ ಅಥಾರಿಟಿ ಇರಲಿ ಎಂಬುದು ಮಹೇಶ್ ಗೌಡ ಆಗ್ರಹ. ಈ ಭಿನ್ನಾಭಿಪ್ರಾಯದಿಂದಾಗಿ ಕೆ.ಪಿ.ಜೆ.ಪಿ ಪಕ್ಷದಿಂದ ಹೊರನಡೆಯಲು ಉಪೇಂದ್ರ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ, ಕೆ.ಪಿ.ಜೆ.ಪಿ ಪಕ್ಷದಿಂದ ಹೊರಬಂದು ಪ್ರತ್ಯೇಕ ಹೊಸ ಪಕ್ಷ ಕಟ್ಟಲು ಉಪೇಂದ್ರ ಮಾಡಿರುವ ಮಾಸ್ಟರ್ ಪ್ಲಾನ್ ಇದು ಎಂಬ ಅನುಮಾನ ಕೂಡ ಹಲವರಲ್ಲಿ ಮೂಡಿದೆ. ಮುಂದೆ ಓದಿರಿ...

ನಾಳೆ ತೀರ್ಮಾನ

ಕೆ.ಪಿ.ಜೆ.ಪಿ ಪಕ್ಷದಲ್ಲಿ ಉಪೇಂದ್ರ ಮುಂದುವರೆಯುವ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ತೀರ್ಮಾನ ಆಗಲಿದೆ. ನಾಳಿನ ಸಭೆಯಲ್ಲಿ ಅಭ್ಯರ್ಥಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ. ಸಭೆಯಲ್ಲಿ ಕಮಿಟಿ ತೆಗೆದುಕೊಳ್ಳುವ ನಿರ್ಣಯದ ಮೇಲೆ ಉಪ್ಪಿಯ ಮುಂದಿನ ನಡೆ ನಿಂತಿದೆ.

ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?

ನಾಳೆ ಹೊಸ ಪಕ್ಷ ಘೋಷಣೆ ಮಾಡ್ತಾರಾ ಉಪೇಂದ್ರ.?

ಪ್ರತ್ಯೇಕವಾಗಿ ಹೊಸ ಪಕ್ಷ ಕಟ್ಟಲು ಕಳೆದ 3 ತಿಂಗಳಿನಿಂದ ತೆರೆಮರೆಯಲ್ಲಿ ಉಪೇಂದ್ರ ಸಿದ್ಧತೆ ನಡೆಸಿದ್ದಾರಂತೆ. 'ಪ್ರಜಾಕೀಯ' ಎಂಬ ನೂತನ ಪಕ್ಷ ಘೋಷಣೆ ಮಾಡಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂಬ ಅಂತೆ-ಕಂತೆ ಕೂಡ ಕೇಳಿಬರುತ್ತಿದೆ.

ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

ಇದು ಉಪೇಂದ್ರ ತಂತ್ರ.?

ಮಹೇಶ್ ಗೌಡರಿಂದ ಬೇರೆಯಾಗಲು, ಹೊಸ ಪಕ್ಷ ಸ್ಥಾಪನೆ ಮಾಡಲು ಉಪೇಂದ್ರ ಮಾಡಿರುವ ತಂತ್ರ ಇದು ಎಂಬ ಅನುಮಾನ ಹಲವರಲ್ಲಿ ಮೂಡಿದೆ.

ಗೊತ್ತಿದ್ದೇ ಹೀಗೆ ಮಾಡಿದ್ರಾ.?

''ಕೆ.ಪಿ.ಜೆ.ಪಿ ಪಕ್ಷದಲ್ಲಿ ಎಲ್ಲ ಅಧಿಕಾರ ತಮಗೆ ನೀಡುವುದಿಲ್ಲವೆಂದು ಉಪೇಂದ್ರಗೆ ಮೊದಲೇ ಗೊತ್ತಿತ್ತು. ಗೊತ್ತಿದ್ದೇ ಅಧಿಕಾರ ನೀಡುವಂತೆ ಕೇಳಿದ್ರಾ?'' ಎಂಬ ಪ್ರಶ್ನೆ ಕೂಡ ಕೆಲವರಲ್ಲಿ ಕಾಡುತ್ತಿದೆ.

ಕೆ.ಪಿ.ಜೆ.ಪಿ ಹೆಸರಿಲ್ಲ!

ಮಹೇಶ್ ಗೌಡ ಹೇಳುವಂತೆ, ಉಪೇಂದ್ರ ಮನೆ ಮುಂದೆ ಆಗಲಿ, ಆಫೀಸ್ ನಲ್ಲಾಗಲಿ 'ಕೆ.ಪಿ.ಜೆ.ಪಿ' ಎಂಬ ಹೆಸರು ಇಲ್ಲ. ಎಲ್ಲೆಡೆ ಪ್ರಜಾಕೀಯ ಅಂತಲೇ ಬರೆದುಕೊಂಡಿರುವ ಉಪೇಂದ್ರ ಈಗ 'ಪ್ರಜಾಕೀಯ' ಅಂತಲೇ ಹೊಸ ಪಕ್ಷ ಕಟ್ಟುತ್ತಾರಾ.?

ಇದೆಲ್ಲವೂ ಗಿಮಿಕ್ಕಾ.?

ಅಸಲಿಗೆ ಇದೆಲ್ಲ ಗಿಮಿಕ್ಕಾ ಅಂತ ಕೇಳಿದ್ರೆ, 'ಗಿಮಿಕ್ ಯಾಕೆ ಮಾಡಲಿ.? ಗಿಮಿಕ್ ಮಾಡುವ ಹಾಗಿದ್ದರೆ, ಆರು ತಿಂಗಳ ಹಿಂದೆಯೇ ಮಾಡಬಹುದಿತ್ತು'' ಅಂತಾರೆ ಉಪೇಂದ್ರ.

English summary
KPJP Crisis: Will Upendra announce new party tomorrow.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada