Don't Miss!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅವಾಚ್ಯ ಶಬ್ಧಗಳಿಂದ ಬೈದ್ರಾ ದರ್ಶನ್ ? "ಓಹ್ ಡಿ ಬಾಸ್" ಎಂದವರು ಯಾರು? ವೈರಲ್ ವೀಡಿಯೋ ಅಸಲಿಯತ್ತೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಪದೇ ಪದೇ ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತದೆ. ಈ ಹಿಂದೆ ದರ್ಶನ್ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎನ್ನಲಾಗುತ್ತಿದ್ದ ಸಾಕಷ್ಟು ಆಡಿಯೋ ಕ್ಲಿಪ್‌ಗಳು ವೈರಲ್ ಆಗಿತ್ತು. ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಆದರೆ ಆ ವಿಡಿಯೋದಲ್ಲಿ ದರ್ಶನ್ ಕಾಣಿಸುತ್ತಿಲ್ಲ. ಬದಲಿಗೆ ಅವರದ್ದು ಎನ್ನಲಾಗುತ್ತಿರುವ ವಾಯ್ಸ್ ಕೇಳಿಸುತ್ತಿದೆ.
ದರ್ಶನ್ ಅಂದರೆ ರಫ್ ಅಂಡ್ ಟಫ್. ಮುಚ್ಚುಮರೆ ಇಲ್ಲ. ಎಲ್ಲವನ್ನೂ ನೇರವಾಗಿ ಹೇಳಿಬಿಡುತ್ತಾರೆ. ಒಳಗೊಂದು ಹೊರಗೊಂದು ಇರುವುದಿಲ್ಲ. ಇತ್ತೀಚೆಗೆ ದರ್ಶನ್ ಅವರ ಕೆಲ ಹೇಳಿಕೆಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಭಿಮಾನಿಗಳು ಮಾತ್ರ ನಮ್ಮ ಬಾಸ್ ಹೇಳಿದ ಅರ್ಥ ಬೇರೆ ಎಂದು ವಾದಿಸಿದರು. ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ಪುನೀತ್ ರಾಜ್‌ಕುಮಾರ್ ಹೆಸರು ತೆಗೆದುಕೊಂಡಿದ್ದು ಕೂಡ ದೊಡ್ಡ ಚರ್ಚೆ ಹುಟ್ಟಾಕ್ಕಿತ್ತು. ಇನ್ನು ಇತ್ತೀಚೆಗೆ ಅದೃಷ್ಟ ದೇವತೆ ಬಗ್ಗೆ ದರ್ಶನ್ ಕೊಟ್ಟ ಹೇಳಿಕೆ ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಕಳೆದ ವರ್ಷ ಮೈಸೂರಿನ 'ಸಂದೇಶ್ ಪ್ರಿನ್ಸ್' ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು.
ರಾಜ್‌ಕುಮಾರ್
ಬಿಟ್ರೆ
ಹೆಚ್ಚು
ಫ್ಯಾನ್ಸ್
ಇರೋದು
ನಿಮಗೆ
ಎಂದಾಗ
ಗರಂ
ಆದ
ದರ್ಶನ್!
ಇನ್ನು ನಟ ದರ್ಶನ್ ಮಾಧ್ಯಮದವರನ್ನು ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎನ್ನಲಾದ ಆಡಿಯೋ ಕೂಡ ಭಾರೀ ಸದ್ದು ಮಾಡಿತ್ತು. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ದರ್ಶನ್ ಯಾರಿಗೋ ಬೈದಿದ್ದಾರೆ ಎನ್ನಲಾಗುತ್ತಿದೆ. ಮೈಸೂರಿನ ಪಬ್‌ವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ.

ವಿಡಿಯೋದಲ್ಲಿ ಏನಿದೆ?
ನಟ ದರ್ಶನ್ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇದು ಕಳೆದ ಶನಿವಾರ ರಾತ್ರಿ ಮೈಸೂರಿನ ಸೋಶಿಯಲ್ ಪಬ್‌ನಲ್ಲಿ ನಡೆದಿರುವ ಘಟನೆ ಎನ್ನಲಾಗುತ್ತಿದೆ. ದರ್ಶನ್ ಪಬ್ ಒಳಗೆ ಈ ರೀತಿ ಕೂಗಾಡಿದ್ದಾರೆ. ಯಾರನ್ನೋ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಸಣ್ಣ ಮಟ್ಟಿಗೆ ಗಲಾಟೆ ಕೂಡ ನಡೆದಿರುವಂತೆ ಕಾಣುತ್ತಿದೆ. ಸಾಕಷ್ಟು ಜನ ಅಭಿಮಾನಿಗಳು ಹೋಟೆಲ್ ಹೊರಗೂ ಜಮಾಯಿಸಿದ್ದರು.
ಸತೀಶ್
ರೆಡ್ಡಿ
ಹೆಗಲ
ಮೇಲೆ
ಗನ್ನಿಟ್ಟು
ಉಮಾಪತಿಗೆ
ಗುರಿ,
ಮಾಜಿ
ಗೆಳೆಯನ
ವಿರುದ್ಧ
ಅಖಾಡಕ್ಕೆ
ದರ್ಶನ್

ವಿಡಿಯೋ ಫುಲ್ ವೈರಲ್
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಡುವೆ ಅಭಿಮಾನಿಯೊಬ್ಬರು 'ಓಹ್ ಡಿಬಾಸ್' ಎನ್ನುವುದು ಕೂಡ ಕೇಳಿಸುತ್ತಿದೆ. ಹಾಗಾಗಿ ಇದು ದರ್ಶನ್ ಅವರದ್ದೇ ವಾಯ್ಸ್ ಎಂದು ಕೆಲವರು ಹೇಳುತ್ತಿದ್ದಾರೆ. ಈ ಹಿಂದೆ ಇಂತದ್ದೇ ಆಡಿಯೋ ಕ್ಲಿಪ್‌ಗಳು ವೈರಲ್ ಆದಾದ ಅದೆಲ್ಲಾ ಫೇಕ್, ಯಾರೋ ದರ್ಶನ್ ರೀತಿ ಮಿಮಿಕ್ರಿ ಮಾಡಿರೋದು ಎಂದು ಕೆಲವರು ವಾದಿಸಿದ್ದರು. ಕೆಲವರು ಈ ವಿಡಿಯೋ ಬಗ್ಗೆ ಕೂಡ ಅದೇ ರೀತಿ ಮಾತನಾಡುತ್ತಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ದರ್ಶನ್ ಹವಾ
ಸೋಮವಾರ ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಹುಟ್ಟುಹಬ್ಬದ ಸಂಭ್ರಮಾಚರಣೆದಲ್ಲಿ ನಟ ದರ್ಶನ್ ಭಾಗಿ ಆಗಿದ್ದರು. ಭರ್ಜರಿ ರೋಡ್ ಶೋ ಕೂಡ ನಡೆಸಿದ್ದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಟನಿಗೆ ಜೈಕಾರ ಹಾಕಿದ್ದರು. ಈ ಬಾರಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಿಂದೆ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಉಮಾಪತಿ ಈಗ ದೂರಾಗಿದ್ದಾರೆ. ಸತೀಶ್ ರೆಡ್ಡಿ ಜೊತೆ ದರ್ಶನ್ ರೋಡ್ ಶೋ ನಡೆಸಿ ಉಮಾಪತಿಗೆ ಖಡಕ್ ಸಂದೇಶ ರವಾನಿಸಿದಂತಿದೆ.
ದರ್ಶನ್
ಫಾರ್ಮ್‌ಹೌಸ್‌ನಲ್ಲಿ
ಅಪ್ರಾಪ್ತೆಯ
ಮೇಲೆ
ಅತ್ಯಾಚಾರ:
ಆ
ಕೇಸ್
ಬಗ್ಗೆ
ಮಾಹಿತಿ
ಕೊಟ್ಟ
ದಾಸ!

'ಕ್ರಾಂತಿ' ಬಿಡುಗಡೆಗೆ ದಿನಗಣನೆ
ವಿ. ಹರಿಕೃಷ್ಣ ನಿರ್ದೇಶನದಲ್ಲಿ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜನವರಿ 26ಕ್ಕೆ ಥಿಯೇಟರ್‌ಗಳಲ್ಲಿ ದರ್ಶನ್ 'ಕ್ರಾಂತಿ' ಶುರುವಾಗಲಿದೆ.