For Quick Alerts
  ALLOW NOTIFICATIONS  
  For Daily Alerts

  ಬಿಸಿತುಪ್ಪವಾದ 'ಸಂಗೊಳ್ಳಿ ರಾಯಣ್ಣ' ಸ್ಯಾಟಲೈಟ್ ರೈಟ್ಸ್

  By ಉದಯರವಿ
  |

  ಈಗಾಗಲೆ ಬಾಕ್ಸಾಫೀಸಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಸುಮಾರು ರು.30 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಆದರೂ ಚಿತ್ರದ ಸ್ಯಾಟಲೈಟ್ ರೈಟ್ಸ್ ಮಾತ್ರ ಇನ್ನೂ ಮಾರಾಟವಾಗಿಲ್ಲ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

  ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತುಗಳನ್ನು ನಂಬುವುದಾದರೆ, ಉದಯ ಟಿವಿಯವರು 'ರಾಯಣ್ಣ' ಸ್ಯಾಟಲೈಟ್ ರೈಟ್ಸ್ ಗಾಗಿ ಎಂಟು ಕೋಟಿ ಆಫರ್ ಮಾಡಿದ್ದರಂತೆ. ಆದರೆ ನಿರ್ಮಾಪಕರು ಇನ್ನೂ ಹೆಚ್ಚಿನ ಬೇಡಿಕೆ ಇಟ್ಟ ಕಾರಣ ಅವರು ಸುಮ್ಮನಾಗಿದ್ದಾರೆ.

  ಉಳಿದ ಟಿವಿ ವಾಹಿನಿಗಳು ಸೈಲೆಂಟಾಗಿದ್ದು ಬಿಟ್ಟಿವೆ. ಒಟ್ಟಿನಲ್ಲಿ ಟಿವಿ ವಾಹಿನಿಗಳಿಗೆ 'ರಾಯಣ್ಣ' ಬಿಸಿತುಪ್ಪವಾಗಿ ಪರಿಣಮಿಸಿದೆ. ಎಂಟು ಕೋಟಿ ರಾಜಿಯಾಗಲು ಅವರು ಸಿದ್ಧರಿಲ್ಲ. ಕಡೆಗೆ ಆರು ಕೋಟಿಗೆ ಸೇಲ್ ಮಾಡಿದ್ದಾರೆ ಎನ್ನಲಾಗಿದ್ದರೂ ಇನ್ನೂ ಮಾರಾಟವೇ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

  ಇದುವರೆಗೂ ರಾಯಣ್ಣ ಚಿತ್ರ ರು.30 ಕೋಟಿ ಕಲೆಕ್ಷನ್ ಮಾಡಿದೆ ಎಂಬುದನ್ನು ಯಾರೂ ನಂಬುತ್ತಿಲ್ಲ. ಇನ್ನೂ ನಿರ್ಮಾಪಕರ ಬಂಡವಾಳವೇ ಬಂದಿಲ್ಲ ಎನ್ನಲಾಗಿದೆ. ಅದೇನು ಕತೆನೋ ಏನೋ? ಒಂದು ಸಂತೋಷದ ವಿಚಾರ ಏನಪ್ಪಾ ಅಂದ್ರೆ ರಾಯಣ್ಣ 25 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

  ಯಾವುದೇ ವಾಹಿನಿಗೆ ಸ್ಯಾಟಲೈಟ್ ರೈಟ್ಸ್ ಸಿಕ್ಕಿದರೂ ಒಂದು ವರ್ಷ ಪ್ರಸಾರ ಮಾಡುವಂತಿಲ್ಲ. ಹಾಗಾಗಿ ವಾಹಿನಿಗಳೂ ಈಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿವೆ. ಕಾಂಜಿ ಪಿಂಜಿ ಚಿತ್ರಗಳ ಕಥೆ ಬಿಡಿ ಬಿಗ್ ಬಜೆಟ್, ಸ್ಟಾರ್ ನಟರ ಚಿತ್ರಗಳ ಪರಿಸ್ಥಿತಿಯೇ ಹೀಗಾದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

  English summary
  If sources are to be believed, Challenging Star Darshan's Krantiveera Sangolli Rayannna satellite rights are yet to be sold for any tv channel. Earlier it is said that Rayanna have been sold for Rs. 6 crores to Udaya TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X