Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ಚಿತ್ರಗಳನ್ನು ತಿರಸ್ಕರಿಸಿದ ಕೃತಿ ಶೆಟ್ಟಿ!
ನಟಿ ಕೃತಿ ಶೆಟ್ಟಿ ಚೊಚ್ಚಲ ಚಿತ್ರ 'ಉಪ್ಪೇನ' ಮೂಲಕ ಖ್ಯಾತಿ ಗಳಿಸಿದ್ದಾರೆ. 'ಉಪ್ಪೇನಾ' ಯಶಸ್ಸಿನ ನಂತರ ನಟಿ ಕೃತಿ ಶೆಟ್ಟಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆದರೆ ಮೊದಲ ಚಿತ್ರದ ಬಳಿಕ ಅಷ್ಟೇನು ಸದ್ದು ಮಾಡದ ಕೃತಿ ಶೆಟ್ಟಿ ಕೈ ಹಿಡಿದಿದ್ದು ವಾರಿಯರ್.
ಇತ್ತೀಚೆಗಷ್ಟೇ ತೆಲುಗಿನ ವಾರಿಯರ್ ಸಿನಿಮಾದ ಮೂಲಕ ಕೃತಿ ಕೊಂಚ ಮಟ್ಟಿಗೆ ಸದ್ದು ಮಾಡಿದ್ದಾರೆ. ಇದರ ಜೊತೆಗೆ ಕೃತಿ ಹಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸೌತ್ ನಟಿಯರಿಗೆ ಬಾಲಿವುಡ್‌ನಲ್ಲೂ ಕೂಡ ಬೇಡಿಕೆ ಹೆಚ್ಚಿದೆ. ಹಾಗಾಗಿ ಕೃತಿ ಯಾವಾಗ ಬಾಲಿವುಡ್‌ನತ್ತ ಮುಖ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು.
'ಕೆಜಿಎಫ್
2'
ನಿಂದ
'ಪುಷ್ಪ
2'
ಕಥೆ
ಬದಲಾಗುತ್ತಾ?
ಏನಂತಾರೆ
ನಿರ್ಮಾಪಕರು?
ಇದಕ್ಕೀಗ ಸ್ವತಃ ಕೃತಿ ಶೆಟ್ಟಿ ಉತ್ತರ ನೀಡಿದ್ದು, ಬಾಲಿವುಡ್‌ನಲ್ಲಿ ನಟಿಸುವ ಅಗತ್ಯ ಇಲ್ಲ ಎಂದಿದ್ದಾರೆ. ಕೃತಿಯ ಈ ಹೇಳಿಕೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಬಾಲಿವುಡ್‌ನಲ್ಲಿ ನಟಿಸುವ ಬಗ್ಗೆ ನಟಿ ಕೃತಿ ಶೆಟ್ಟಿ ಹೇಳಿದ್ದೇನು ಎನ್ನುವುದನ್ನು ಮುಂದೆ ಓದಿ...

ಬಾಲಿವುಡ್‌ಗೆ ಕೃತಿ ಶೆಟ್ಟಿ ನೋ ಎಂಟ್ರಿ!
ಸೌತ್ ಸಿನಿಮಾರಂಗದಲ್ಲಿ ಕೊಂಚ ಹೆಸರು ಮಾಡುತ್ತಲೇ, ನಟಿ ಮಣಿಯರು ಬಾಲಿವುಡ್‌ನತ್ತ ಮುಖ ಮಾಡುತ್ತಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈಗ ನಟಿ ಕೃತಿ ಶೆಟ್ಟಿ ಸರದಿ. ಕೃತಿಗೆ ಬಾಲಿವುಡ್‌ನಿಂದ ಆಫರ್‌ಗಳು ಬರ್ತಿವೆಯಂತೆ. ಆದರೆ ಬಾಲವಿಡ್ ಸಿನಿಮಾಗಳಲ್ಲಿ ನಟಿಸಲು ಕೃತಿ ಶೆಟ್ಟಿಯೇ ತಿರಸ್ಕಾರ ಮಾಡುತ್ತಿದ್ದಾರಂತೆ.
3
ಸಿನಿಮಾ
ಸೋಲು:
ಯಾಕೋ
ಪೂಜಾ
ಹೆಗ್ಡೆ
ಅದೃಷ್ಟವೇ
ಸರಿ
ಇಲ್ಲ
ಎಂದ
ನೆಟ್ಟಿಗರು

ಕೃತಿಗೆ ಬಾಲಿವುಡ್ ಅವಶ್ಯಕತೆ ಇಲ್ಲವಂತೆ!
ಕೃತಿ ಶೆಟ್ಟಿ ಬಗ್ಗೆ ಹೀಗೋಂದು ಗಾಸಿಪ್ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸಂದರ್ಶನ ಒಂದರಲ್ಲಿ ನಟಿ ಕೃತಿ ಶೆಟ್ಟಿ ಸ್ವತಃ ತಾನೆ ಬಾಲಿವುಡ್ ಆಫರ್‌ಗಳನ್ನು ತಿರಸ್ಕಾರ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರಂತೆ. " ನನಗೆ ಬಾಲಿವುಡ್‌ನಿಂದ ಅವಕಾಶಗಳು ಬರುತ್ತವೆ. ಆದರೆ ನಾನೇ ಅವುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನನ್ನ ವೃತ್ತಿ ಬದುಕಿಗೆ ಬೇಕಾದ ಎಲ್ಲವನ್ನೂ ನನಗೆ ಸೌತ್ ಚಿತ್ರರಂಗ ಕೊಟ್ಟಿದೆ". ಎಂದಿದ್ದಾರಂತೆ. ಕೃತಿಯ ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಕೃತಿ ಶೆಟ್ಟಿ ಬಗ್ಗೆ ಇಲ್ಲದ ಗಾಸಿಪ್!
ಇನ್ನು ನಟಿ ಕೃತಿ ಶೆಟ್ಟಿ ತನ್ನ ಬಗ್ಗೆ ಇಲ್ಲದ ಗಾಸಿಪ್‌ಗಳು ಹರಿದಾಡುವ ಬಗ್ಗೆ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಈ ಹಿಂದೆ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಪ್ರಭಾಸ್, ಮಹೇಶ್ ಮತ್ತು ಇತರ ದೊಡ್ಡ ಸ್ಟಾರ್ ಚಿತ್ರಗಳಲ್ಲಿ ಅವಕಾಶ ಪಡೆಯುವಂತೆ ತನ್ನ ಮ್ಯಾನೇಜರ್‌ಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಸ್ಟಾರ್ ಹೀರೊಗಳಿಂದ ತಿರಸ್ಕಾರದ ಉತ್ತರ ಸಿಕ್ಕಿದೆ ಎಂದು ಟಾಲಿವುಡ್ ಅಂಗಳದಲ್ಲಿ ವರದಿ ಆಗಿತ್ತು. ಈ ಬಗ್ಗೆ ಕೃತಿ ಬೇಸರ ವ್ಯಕ್ತಪಡಸಿದ್ದರು.

ಬಾಲಯ್ಯ ಚಿತ್ರದ ಬಗ್ಗೆಯೂ ಗಾಸಿಪ್!
ಈ ಹಿಂದೆ ಕೃತಿ ತಮ್ಮ ಬಗ್ಗೆ ಚಿತ್ರರಂಗದಲ್ಲಿ ಹಬ್ಬುತ್ತಿರುವ ಗಾಸಿಪ್ ಸುದ್ದಿಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಇಲ್ಲ ಸಲ್ಲದ ರೂಮರ್‌ಗಳನ್ನು ಹಬ್ಬಿಸ ಬೇಡಿ ಎಂದಿದ್ದರು. ಅದು ಬಿಟ್ಟರೆ ನಟ ಬಾಲಯ್ಯನ ಚಿತ್ರವನ್ನು ತಿರಸ್ಕರಿಸಿ ಸುದ್ದಿ ಆಗಿದ್ದರು. ಬಾಲಯ್ಯನ ವಯಸ್ಸಿನ ಕಾರಣಕ್ಕೆ ಕೃತಿ ಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿ ಆಗಿತ್ತು.