For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಆದಿಪುರುಷ್' ಚಿತ್ರಕ್ಕೆ ನಾಯಕಿ ಸಿಕ್ಕಳಂತೆ!

  |

  ಸೌತ್ ಸ್ಟಾರ್ ನಟ ಪ್ರಭಾಸ್ ನಟಿಸಲಿರುವ 'ಆದಿಪುರುಷ್' ಸಿನಿಮಾ ಪ್ರತಿ ಹಂತದಲ್ಲು ಸುದ್ದಿ ಮಾಡುತ್ತಾ ಸಾಗುತ್ತಿದೆ. ಪ್ರಭಾಸ್ ರಾಮನ ಪಾತ್ರ ನಿರ್ವಹಿಸುತ್ತಿದ್ದರೆ, ಸೈಫ್ ಅಲಿ ಖಾನ್ ರಾವಣನ ಪಾತ್ರ ಮಾಡುವುದು ಖಚಿತವಾಗಿದೆ.

  ಆದರೆ, ಸೀತೆ ಪಾತ್ರದಲ್ಲಿ ಯಾರು ನಟಿಸಬಹುದು ಎಂಬ ಪ್ರಶ್ನೆ ಹಲವು ದಿನಗಳಿಂದ ಕಾಡುತ್ತಲೆ ಇದೆ. ಮೊದ ಮೊದಲು ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಯ್ತು. ಬಟ್, ಅನುಷ್ಕಾ ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ, ಈ ಪ್ರಾಜೆಕ್ಟ್‌ನಲ್ಲಿ ಅನುಷ್ಕಾ ಇರಲ್ಲ ಎಂದು ತಿಳಿಯಿತು.

  'ಆದಿಪುರುಷ' ಚಿತ್ರದಲ್ಲಿ ಸೀತೆ ಯಾರು? ಕೀರ್ತಿ, ಕಿಯಾರಾ ಬಳಿಕ ಮತ್ತೊಂದು ಹೆಸರು

  ಕೈರಾ ಅಡ್ವಾಣಿಯ ಹೆಸರು ಸಹ ಕೇಳಿ ಬಂತು. ಅದ್ಯಾಕೋ ಆ ನಟಿ ಸಹ ಪಕ್ಕಾ ಇಲ್ಲ ಎಂಬ ವಿಚಾರ ಹೊರಬಿತ್ತು. ಕೀರ್ತಿ ಸುರೇಶ್ ಹೆಸರು ಸಹ ಚರ್ಚೆಯಲ್ಲಿತ್ತು. ಇದೀಗ, ಪ್ರಭಾಸ್ ಎದುರು ಕೃತಿ ಸನನ್ ಸೀತೆಯಾಗಲಿದ್ದಾರೆ ಎಂಬ ಲೇಟೆಸ್ಟ್ ವರದಿ ಹೇಳುತ್ತಿದೆ.

  ಈ ಬಗ್ಗೆಯೂ ಅಧಿಕೃತ ಮಾಹಿತಿ ಇಲ್ಲ. ಆದರೂ ಸೀತೆ ಪಾತ್ರಧಾರಿ ಕುರಿತು ದಿನಕ್ಕೊಂದು ಹೆಸರು ತೇಳಿ ಬರುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸುತ್ತಿದೆ.

  ಮತ್ತೊಂದೆಡೆ ಪ್ರಭಾಸ್ ನಟನೆಯ 'ರಾಧೇ ಶ್ಯಾಮ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದಾದ ಬಳಿಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಅಮಿತಾಭ್ ಬಚ್ಚನ್ ಸಹ ನಟಿಸಲಿದ್ದಾರೆ.

  ಆದಿಪುರುಷ್ ಚಿತ್ರವನ್ನು ಓಂ ರಾವತ್ ನಿರ್ದೇಶನ ಮಾಡುತ್ತಿದ್ದು, ಸುಮಾರು 500 ಕೋಟಿ ಬಜೆಟ್‌ನಲ್ಲಿ ತಯಾರಾಗಬಹುದು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಕಲಾವಿದರ ಆಯ್ಕೆಯಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಮುಂದಿನ ವರ್ಷಕ್ಕೆ ಸಿನಿಮಾ ಆರಂಭಿಸಲಿದೆ.

  English summary
  Latest Buzz: Bollywood actress Kriti sanon will be played sita role in Adipurush. but, it's not official.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X