Just In
Don't Miss!
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೋಹಕ ತಾರೆ ತ್ರಿಷಾ ಭಾವಿ ಪತಿಗೆ ಬೆದರಿಕೆ ಕರೆಗಳು
'ಪವರ್ ಸ್ಟಾರ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಮೋಹಕ ತಾರೆ ತ್ರಿಷಾ ಕೃಷ್ಣನ್ ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಉದ್ಯಮಿ ವರುಣ್ ಮಣಿಯನ್ ಅವರ ಕೈಹಿಡಿಯುತ್ತಿದ್ದಾರೆ ತ್ರಿಷಾ. ಜನವರಿ 23ರಂದು ಇವರಿಬ್ಬರ ನಿಶ್ಚಿತಾರ್ಥ ನೆರವೇರಿದ್ದು ಗೊತ್ತೇ ಇದೆ.
ಸದ್ಯಕ್ಕೆ ತ್ರಿಷಾ ಅವರು ಕನಸಿನ ಲೋಕದಲ್ಲಿ ತೇಲಾಡುತ್ತಿದ್ದಾರೆ. ಆದರೆ ಅವರ ಕನಸಿನಲ್ಲಿ ಒಬ್ಬ ವಿಲನ್ ಎಂಟ್ರಿ ಕೊಟ್ಟಿದ್ದಾನೆ. ಅವರ ಭಾವಿ ಪತಿ ವರುಣ್ ಮಣಿಯನ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ. [ಚೆನ್ನೈ ಸೂಪರ್ ಕಿಂಗ್ಸ್ ಒಡತಿಯಾಗುತ್ತಿದ್ದಾರೆ ತ್ರಿಷಾ]
ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಖರೀದಿಸುವ ಬಗ್ಗೆ ವರುಣ್ ಪ್ರಯತ್ನ ಮಾಡುತ್ತಿದ್ದಾರೆ. ಆ ಪ್ರಯತ್ನವನ್ನು ಕೂಡಲೆ ಕೈಬಿಡಬೇಕೆಂದು ವರುಣ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನುತ್ತಿವೆ ಮೂಲಗಳು.
ಇದರಿಂದ ಕಂಗಾಲಾಗಿರುವ ತ್ರಿಷಾ ಭಾವಿ ಪತಿ ಪೊಲೀಸರನ್ನು ಸಂಪರ್ಕಿಸಿರುವುದಾಗಿ ಸುದ್ದಿ. ಸದ್ಯಕ್ಕೆ ಪೊಲೀಸರು ಕೇಸು ದಾಖಲಿಸಿಕೊಂಡು ಕರೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇರಬಹುದು ಎಂಬುದು ಗೊತ್ತಾಗಿಲ್ಲ.
ತ್ರಿಷಾ ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಮೋಹ ಇದೆ. ಮೊದಲೇ ಮೋಹಕ ತಾರೆ, ಇನ್ನು ಕ್ರಿಕೆಟ್ ತಂಡದ ಒಡತಿಯಾದರೆ ಆ ತಂಡಕ್ಕೆ ಇನ್ನಷ್ಟು ಬಲಬರುವುದಂತೂ ಗ್ಯಾರಂಟಿ. ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ನ ಒಡೆತನದಲ್ಲಿದೆ. [ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ ಚಿತ್ರಸಂಪುಟ]
ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ತಂಡಗಳ ಬಳಿಕ ಐಪಿಎಲ್ ನ ಬಲು ದುಬಾರಿ ತಂಡ ಚೆನ್ನೈ ಸೂಪರ್ ಕಿಂಗ್ಸ್. 2012ರ ಪ್ರಕಾರ ಈ ಬ್ರ್ಯಾಂಡ್ ನ ಒಟ್ಟಾರೆ ಮೌಲ್ಯ 75.13 ದಶಲಕ್ಷ ಡಾಲರ್. (ಏಜೆನ್ಸೀಸ್)