Just In
Don't Miss!
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- News
ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚುಂಬನ ದೃಶ್ಯಗಳೆಂದರೆ ಹಂಸಿಕಾಗೆ ಯಾಕೆ ಭಯ?
ಬಾಲಿವುಡ್ ಹಾಗೂ ಹಾಲಿವುಡ್ ಗಷ್ಟೇ ಸೀಮಿತವಾಗಿದ್ದ ಲಿಪ್ ಲಾಕ್ ಸೀನ್ ಗಳು ಈಗ ಪ್ರತಿ ಸಿನಿಮಾದಲ್ಲೂ ಸರ್ವೇ ಸಾಮಾನ್ಯ ಎಂಬಂತೆ ಆಗಿವೆ. ಕಥೆ ಬಯಸಲಿ ಬಿಡಲಿ ಚುಂಬನ ದೃಶ್ಯವಂತೂ ಇದ್ದೇ ಇರುತ್ತದೆ.
ದಕ್ಷಿಣ ಚಿತ್ರರಂಗದಲ್ಲಾದರೆ ನಯನತಾರಾ, ಅನುಷ್ಕಾ, ಕಾಜಲ್ ನಂತಹ ಹಾಟ್ ಬೆಡಗಿಯರು ಚುಂಬನ ದೃಶ್ಯಗಳ ಮೂಲಕ ಬೆಳ್ಳಿತೆರೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಚುಂಬನ ದೃಶ್ಯಗಳಿಲ್ಲದೆ ಕಥೆ ಮುಂದಕ್ಕೆ ಹೋಗಲ್ಲ ಎಂಬಂತಹ ಸನ್ನಿವೇಶಗಳಿವೆ. [ತಮಿಳು ನಟನ ಜೊತೆ ನಟಿ ಹಂಸಿಕಾ ಚಮ್ಮಕ್ಕ್ ಚಲ್ಲೋ]
ಆದರೆ ಮತ್ತೊಬ್ಬ ಬ್ಯೂಟಿ ಹಂಸಿಕಾ ಮೋತ್ವಾನಿ ಮಾತ್ರ ಲಿಪ್ ಲಾಕ್, ಚುಂಬನ ಸನ್ನಿವೇಶಗಳಿಗೆ ಇನ್ನೂ ಮೀನಾಮೇಷ ಎಣಿಸುತ್ತಿದ್ದಾರೆ. ಕಥೆ ಆ ರೀತಿಯ ಸನ್ನಿವೇಶಗಳನ್ನು ಬಯಸಿದರೆ ತಾನು ರೆಡಿ ಎಂದು ಎಲ್ಲರಂತೆ ಗಿಣಿಪಾಠ ಒಪ್ಪಿಸುತ್ತಿದ್ದರೂ ಇನ್ನೂ ತುಟಿಗೆ ತುಟಿ ಬೆರೆಸುವ ಸಾಹಸವನ್ನು ಮಾತ್ರ ಮಾಡಿಲ್ಲ.
ಇದಕ್ಕೆ ಬಲವಾದ ಕಾರಣ ಏನಿರಬಹುದು ಎಂಬುದನ್ನು ಇದೀಗ ಬಾಯ್ಬಿಟ್ಟು ಹೇಳಿದ್ದಾರೆ ಹಂಸಿಕಾ. ತುಟಿಗೆ ತುಟಿ ಬೆರೆಸುವುದರಿಂದ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ. ಲಿಪ್ ಲಾಕ್ ಮಾಡಿದರೆ ಒಬ್ಬರಿಂದ ಮತ್ತೊಬ್ಬರಿಗೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಹಬ್ಬುತ್ತವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಗಾಗಿ ತಾವು ಇಷ್ಟು ದಿನ ಯಾವುದೇ ಚುಂಬನ ದೃಶ್ಯದಲ್ಲಿ ಅಭಿನಯಿಸಿಲ್ಲ. ಆ ರೀತಿಯ ಸನ್ನಿವೇಶಗಳನ್ನು ಮಾಡಲು ತಾವು ಒಪ್ಪಿಕೊಳ್ಳುತ್ತಲೂ ಇಲ್ಲ ಎಂದಿದ್ದಾರೆ. ಹಂಸಿಕಾ ಹೇಳುವುದರಲ್ಲಿ ತಪ್ಪೇನು ಇಲ್ಲ ಬಿಡಿ. ಇತ್ತೀಚೆಗಿನ ವರದಿಯೊಂದು ಚುಂಬನದ ಕಾರಣ ಕೆಲವು ಹಾನಿಕಾರಕ ಬ್ಯಾಕ್ಟೀರಿಯಾಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ ಎಂದು ಹೇಳಿದೆ.
ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಮಾರಣಾಂತಿಕ ಕಾಯಿಲೆಗಳೂ ಬರುವ ಅವಕಾಶವೂ ಇಲ್ಲದಿಲ್ಲ. ಈ ವಿಷಯ ತಮಗೆ ಗೊತ್ತಾಗಿ ಉಮ್ಮಾ ಎಂದರೆ ಗುಮ್ಮಾ ತರಹ ಕೇಳಿಸುತ್ತದಂತೆ. ಹಂಸಿಕಾ ಕಥೆಯೇನೋ ಕೇಳಲು ಚೆನ್ನಾಗಿದೆ. ಆದರೆ ಇದರಿಂದ ಅವರಿಗೇ ನಷ್ಟ. ಅವರು ಹೀಗೇ ಇದ್ದರೆ ಚುಂಬನ ದೃಶ್ಯವಿರುವ ಚಿತ್ರಗಳ ಅವಕಾಶಗಳು ಕೈತಪ್ಪುತ್ತವೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು. (ಏಜೆನ್ಸೀಸ್)