»   » ಮುಂಬೈ: ಮದ್ರಾಸ್ ಕೆಫೆ ಆರಂಭಕ್ಕೆ ಅಡ್ಡಿ

ಮುಂಬೈ: ಮದ್ರಾಸ್ ಕೆಫೆ ಆರಂಭಕ್ಕೆ ಅಡ್ಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟ ಜಾನ್ ಅಬ್ರಹಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್ ಬುಧವಾರ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ ಗುರುವಾರ ಮುಂಬೈನಲ್ಲಿ ಚಿತ್ರ ಬಿಡುಗಡೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದ ತಮಿಳು ಸಂಘಟನೆಗಳು, ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದವು.

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ, ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ ಈ ಸಂಬಂಧ ತಮಿಳುನಾಡು ಡಿಜಿಪಿ ಹಾಗೂ ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಸೆಪ್ಟೆಂಬರ್ 3ರೊಳಗೆ ನೋಟಿಸಿಗೆ ಉತ್ತರಿಸುವಂತೆ ಸೂಚಿಸಿದೆ.

'ಮದ್ರಾಸ್ ಕೆಫೆ' ಮೂಲತಃ ಶ್ರೀಲಂಕಾದಲ್ಲಿರುವ ತಮಿಳರ ಕುರಿತಾದ ಚಿತ್ರಕಥೆ ಹೊಂದಿದ್ದು, ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಆಧರಿಸಿ ಚಿತ್ರ ತಯಾರಿಸಲಾಗಿದೆ. ಚಿತ್ರವನ್ನು ಸುಜಿತ್ ಸರ್ಕಾರ್ ಅವರು ನಿರ್ದೇಶನ ಮಾಡಿದ್ದಾರೆ. ಮದ್ರಾಸ್ ಕೆಫೆ ವಿವಾದಗಳು ಡಿಕೋಡ್ ಇಲ್ಲಿದೆ ನೋಡಿ

ಬಿಜೆಪಿ ಪ್ರತಿಭಟನೆ

ಚೆನ್ನೈನಲ್ಲಿ ಚಿತ್ರಕ್ಕೆ ನಿರ್ಬಂಧ ವಿಧಿಸಿದ ರೀತಿಯಲ್ಲಿ ದೇಶದೆಲ್ಲೆಡೆ ಚಿತ್ರಕ್ಕೆ ನಿಷೇಧ ಹೇರಬೇಕು. ಎಲ್ ಟಿಟಿಇ ಮುಖಂಡ ದಿವಂಗತ ವಿ ಪ್ರಭಾಕರನ್ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ರಾಜೀವ್ ಗಾಂಧಿ ಹತ್ಯೆ ಕಥೆ ಹೊಂದಿರುವ ಈ ಚಿತ್ರದಲ್ಲಿ ತಮಿಳು ಸಂಘಟನೆಗಳನ್ನು ಉಗ್ರ ಸಂಘಟನೆಗಳಂತೆ ಬಿಂಬಿಸಲಾಗಿದೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಂಬೈ ಬಿಜೆಪಿ ಅಧ್ಯಕ್ಷ ಆಶೀಶ್ ಶೆಲಾರ್ ಹೇಳಿದ್ದಾರೆ.

ತಮಿಳರ ವಿರೋಧ

ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಈ) ಅನ್ನು ಅತ್ಯಂತ ಕೀಳುಮಟ್ಟದಲ್ಲಿ ತೋರಿಸಲಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು, ಆ.23ರಂದು ಬಿಡುಗಡೆಯಾಗಬೇಕಿರುವ ಬಾಲಿವುಡ್ ಚಿತ್ರ 'ಮದ್ರಾಸ್ ಕೆಫೆ' ವಿರುದ್ಧ ಪ್ರತಿಭಟನೆ ನಡೆಸಿದರು. ತಮಗೆ ವಿಶೇಷ ಪ್ರದರ್ಶನ ತೋರಿಸಿದ ನಂತರವೇ ಚಿತ್ರ ಬಿಡುಗಡೆ ಮಾಡಬೇಕೆಂದು ತಮಿಳು ಸಂಘಟನೆಯೊಂದು ಷರತ್ತು ಒಡ್ಡಿತ್ತು.

ಚಿತ್ರದ ಕಥೆ ಏನು?

1980ರ ದಶಕದಲ್ಲಿ ಶ್ರೀಲಂಕಾದಲ್ಲಿ ನಡೆದ ತಮಿಳು ಸಂಘರ್ಷದ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ಜಾನ್ ಅಬ್ರಹಾಂ ಹೇಳಿದ್ದು, ಚಿತ್ರಕಥೆ ಕಾಲ್ಪನಿಕವಾಗಿದೆ, ರಾಜೀವ್ ಗಾಂಧಿ ಹತ್ಯೆ, ಪ್ರಭಾಕರನ್ ಅವರ ಬಗ್ಗೆ ಕೀಳಾಗಿ ತೋರಿಸಿಲ್ಲ ಮತ್ತು ಯಾವ ಸಂಘಟನೆಯನ್ನೂ ಜರೆದಿಲ್ಲ. ಬೇಕಿದ್ದರೆ ಮತ್ತೊಮ್ಮೆ ಪ್ರಿವ್ಯೂ ಆಯೋಜಿಸುತ್ತೇವೆ ಎಂದು 40 ವರ್ಷದ ನಟ, ನಿರ್ಮಾಪಕ ಜಾನ್ ಭರವಸೆ ನೀಡಿದ್ದಾರೆ

ಚಿತ್ರ ಒಪ್ಪದ ತಮಿಳರು

ನಾಮ್ ತಮಿಳಗಾರ್ ಕಚ್ಚಿ ಎಂಬ ತಮಿಳು ಸಂಘಟನೆ ತಮಿಳು ಚಿತ್ರ ನಿರ್ದೇಶಕ ಸೀಮನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತ್ತು. ಕಳೆದ ವಾರ ಚೆಪಾಕ್ ನ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ ನಾಮ್ ತಮಿಳಗಾರ್ ಕಚ್ಚಿ ಸಂಘಟನೆ ಚಿತ್ರದಲ್ಲಿ, ತಮಿಳು ವಿರೋಧಿ ದೃಶ್ಯಗಳಿವೆ ಆದ್ದರಿಂದ ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದೆ.

ಬಾಲಿವುಡ್ ನಲ್ಲಿ ಪ್ರಶಂಸೆ

ಮದ್ರಾಸ್ ಕೆಫೆ ಹಿಂದಿ ಚಲನಚಿತ್ರದ ನಾಯಕ ನಟ ಹಾಗೂ ನಿರ್ಮಾಪಕರಾಗಿರುವ ಜಾನ್ ಅಬ್ರಹಾಂ ಅವರು ಚಿತ್ರರಂಗದ ತನ್ನ ಗೆಳೆಯರ ಬಳಗಕ್ಕೆ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಿದ್ದರು. ಅಭಿಷೇಕ್ ಬಚ್ಚನ್ ಸೇರಿದಂತೆ ಚಿತ್ರರಂಗದ ಹಲವು ಸ್ಟಾರ್ ಗಳು ನಿರ್ದೇಶಕ ಸುಜೀತ್ ಸರ್ಕಾರ್ ಹಾಗೂ ಜಾನ್ ಅವರಿಗೆ ಶುಭ ಹಾರೈಸಿದ್ದರು

ಬಿಜೆಪಿ ವಿರೋಧ ಏಕೆ?

ತಮಿಳು ಸಂಘಟನೆಯನ್ನು ಉಗ್ರ ಸಂಘಟನೆ ಎಂದರೆ ಬಿಜೆಪಿಗೆ ಏಕೆ ಉರಿ ಎಂದು ಟ್ವೀಟರ್ ನಲ್ಲಿ ಚರ್ಚೆ ಆರಂಭವಾಗಿದೆ.

ಇದೆಲ್ಲ ಬೇಕಿತ್ತಾ

ಚಿತ್ರ ಚೆನ್ನಾಗಿದ್ದರೆ ಓಡುತ್ತೆ. ಅನಗತ್ಯ ಪ್ರತಿಭಟನೆ, ವಿವಾದ ಪ್ರಚಾರ ಬೇಕಿತ್ತಾ/

ಸೆನ್ಸಾರ್ ಮಂಡಳಿ ಒಪ್ಪಿಗೆ

ಸೆನ್ಸಾರ್ ಮಂಡಳಿ ಪ್ರಮಾಣ ಸಿಕ್ಕಿರುವುದರಿಂದ ಹಿಂದಿ, ತಮಿಳು ಎರಡರಲ್ಲೂ ಬಿಡುಗಡೆಗೆ ಅಡ್ಡಿ ಇಲ್ಲ,ಚಿತ್ರಮಂದಿರಗಳು ಧೈರ್ಯ ಮಾಡಬೇಕು ಅಷ್ಟೇ

English summary
Its 'Madras Cafe against Chennai'; the scene is nothing less than a war-ridden city. Add to it, the protests and the sloganeering of the activists against the film.
Please Wait while comments are loading...