For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ! ಮಹೇಶ್ ಬಾಬು, ವಿಜಯ್ ದೇವರಕೊಂಡ ಸಂಭಾವನೆ ಎ‍ಷ್ಟೊಂದಾ?

  |

  ಪ್ಯಾನ್ ಇಂಡಿಯಾ ಸಿನಿಮಾಗಳು ಎನ್ನುವ ಕಾನ್ಸೆಪ್ಟ್‌ ಹೆಚ್ಚಾಗುತ್ತಿದೆ. ಅಂದರೆ ಒಂದು ಚಿತ್ರ ರಂಗದ ಸಿನಿಮಾ ಒಂದೇ ಭಾಷೆಯಲ್ಲಿ ತೆರೆಗೆ ಬಾರದೆ ಹಲವು ಭಾಷೆಗಳಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಾಗಾಗಿ ಸಿನಿಮಾ ತಾರೆಯರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಮೂರು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ ಎಂದಾಗ ಅದಕ್ಕೆ ತಕ್ಕಂತೆ, ಸಿನಿಮಾ ನಟರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ.

  ಸದ್ಯಕ್ಕೆ ತೆಲುಗಿನ ಸ್ಟಾರ್‌ ನಟರಾದ ಮಹೇಶ್‌ ಬಾಬು ಮತ್ತು ನಟ ವಿಜಯ್‌ ದೇವರ ಕೊಂಡ ಅವರ ಸಂಭಾವನೆ ಹೆಚ್ಚಾಗಿದೆ. ಸದ್ಯ ಈ ಇಬ್ಬರು ನಟರು ತಮ್ಮ ಮುಂದಿನ ಸಿನಿಮಾಗಳಿಗೆ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ಬಗ್ಗೆ ಸಿಕ್ಕಾ ಪಟ್ಟೆ ಚರ್ಚೆ ಆಗುತ್ತಿದೆ.

  ನಟ ಮಹೇಶ್‌ ಬಾಬು ಅವರ ಮುಂದಿನ ಸಿನಿಮಾ 'ಸರ್ಕಾರು ವಾರಿ ಪಾಠ' ಮತ್ತು ವಿಜಯ್‌ ದೇವರಕೊಂಡ ಅವರ ಮುಂದಿನ ಸಿನಿಮಾ ' ಲೈಗರ್'. ಈ ಎರಡು ಸಿನಿಮಾಗಳು ಕೂಡ ಈಗಾಗಲೇ ಸಿಕ್ಕಾ ಪಟ್ಟೆ ನಿರೀಕ್ಷೆ ಹುಟ್ಟು ಹಾಕಿವೆ. ಈಗ ಈ ಚಿತ್ರಗಳಿಗಾಗಿ ಇಬ್ಬರು ನಟರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಸಮಾಚಾರ ಹೊರ ಬಂದಿದೆ.

  70 ಕೋಟಿ ಸಂಭಾವನೆ ಪಡೆದ ಮಹೇಶ್‌ ಬಾಬು?!

  70 ಕೋಟಿ ಸಂಭಾವನೆ ಪಡೆದ ಮಹೇಶ್‌ ಬಾಬು?!

  ನಟ ಮಹೇಶ್‌ ಬಾಬು ಮುಂದಿನ ಸಿನಿಮಾ 'ಸರ್ಕಾರು ವಾರಿಪಾಠ'. ಈ ಚಿತ್ರಕ್ಕಾಗಿ ನಟ ಮಹೇಶ್‌ ಬಾಬು ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಮಹೇಶ್‌ ಬಾಬು ಬರೊಬ್ಬರಿ 70 ಕೋಟಿ ರೂ ಸಂಭಾವನೆ ಪಡೆದು ಕೊಂಡಿದ್ದಾರಂತೆ. ಈ ಸುದ್ದಿ ಟಾಲಿವುಡ್‌ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದೆ. ಸಾಲು ಸಾಲು ಹಿಟ್‌ ಸಿನಿಮಾಗಳನ್ನು ಮಹೇಶ್‌ ಬಾಬು ಕೊಡುತ್ತಿರುವ ಕಾರಣ ಅವರ ಸಂಭಾವನೆ ಹೆಚ್ಚಾಗಿದೆ. 100 ಕೋಟಿ ಸಂಭಾವನೆ ಪಡೆಯುಲು ನಟ ಮಹೇಶ್‌ ಬಾಬು ಅವರಿಗೆ ಹೆಚ್ಚಿನ ಸಮಯ ಬೇಕಾಗಿಲ್ಲ. ಬಹುಶಃ ಈ 'ಸರ್ಕಾರು ವಾರಿ ಪಾಠ' ಚಿತ್ರ ಹಿಟ್‌ ಲಿಸ್ಟ್ ಸೇರಿದರೆ ಮಹೇಶ್‌ ಬಾಹು ಸಂಭಾವನೆ 100 ಕೋಟಿ ಆಗುವ ಸಾಧ್ಯತೆ ಇದೆ.

  'ಸರ್ಕಾರು ವಾರಿಪಾಠ' ರಿಲೀಸ್ ಪೋಸ್ಟ್ ಪೋನ್!

  'ಸರ್ಕಾರು ವಾರಿಪಾಠ' ರಿಲೀಸ್ ಪೋಸ್ಟ್ ಪೋನ್!

  ಎಲ್ಲವೂ ಅಂದುಕೊಂಡತೆ ಆಗಿದ್ದರೆ ಈ ಚಿತ್ರಕ್ಕೆ ಇದೇ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರಿ ವಾರು ಪಾಠ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ ಕೊರೊನಾ ಮತ್ತು ಲಾಕ್‌ ಡೌನ್‌ನಿಂದಾಗಿ ಸಿನಿಮಾ ಶೂಟಿಂಗ್ ಇನ್ನೂ ಕೂಡ ಪೂರ್ಣಗೊಂಡಿಲ್ಲ. ಹಾಗಾಗಿ ಇದೇ ವರ್ಷ ಏಪ್ರಿಲ್ 1ರಂದು ಚಿತ್ರದ ರಿಲೀಸ್ ದಿನಾಂಕ ಫಿಕ್ಸ್‌ ಆಗಿದೆ. ಆದರೆ ಈಗ ಚಿತ್ರ ತಂಡದಲ್ಲಿ ಕೆಲವರಿಗೆ ಕೊರೊನಾ ಬಂದಿದೆ. ಹಾಗಾಗಿ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಲಾಗಿದೆ. ಹಾಗಾಗಿ ಚಿತ್ರೀಕರಣ ಮತ್ತಷ್ಟು ತಡ ಆಗುವ ಸಾಧ್ಯತೆ ಇದೆ. ಹಾಗಾಗಿ ಸಿನಿಮಾ ರಿಲೀಸ್‌ ಕೂಡ ಪೋಸ್ಟ್‌ ಪೋನ್‌ ಆಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಮಹೇಶ್‌ ಬಾಬು ಜೊತೆಗೆ ಕೀರ್ತಿ ಸುರೇಶ್‌ ಅಭಿನಯಿಸಿದ್ದು, ಗೀತಾ ಗೋವಿಂದಂ ಚಿತ್ರ ಖ್ಯಾತಿಯ ಪರಶುರಾಮ್ ನಿರ್ದೇಶನ ಇದೆ.

  ವಿಜಯ್‌ ದೇವರಕೊಂಡ ಸಂಭಾವನೆಯಲ್ಲಿ ಭಾರಿ ಹೆಚ್ಚಳ!

  ವಿಜಯ್‌ ದೇವರಕೊಂಡ ಸಂಭಾವನೆಯಲ್ಲಿ ಭಾರಿ ಹೆಚ್ಚಳ!

  ಇನ್ನು ತೆಲುಗಿನಲ್ಲಿ ಇದೀಗ ಮುನ್ನೆಲೆ ಬಂದಿರುವ ಸ್ಟಾರ್‌ ನಟ ಎಂದರೆ ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ನಟ ವಿಜಯ್‌ ದೇವರಕೊಂಡ ಅವರ ಸ್ಟಾರ್‌ ಗಿರಿ ಬದಲಾಯ್ತು. ವಿಜಯ್‌ ದೇವರಕೊಂಡ ಸ್ಟಾರ್‌ ನಟನಾಗಿ ಬೆಳೆದು ನಿಂತಿದ್ದಾರೆ. ವಿಜಯ್‌ ದೇವರಕೊಂಡ ಅವರ ಮುಂದಿನ ಸಿನಿಮಾ 'ಲೈಗರ್'. ಲೈಗರ್ ಸಿನಿಮಾಗಾಗಿ ವಿಜಯ್‌ ದೇವರಕೊಂಡ ಅವರು 35 ಕೋಟಿ ಸಂಭಾವನೆ ಪಡೆದು ಕೊಂಡಿದ್ದಾರೆ. ಲೈಗರ್‌ ಚಿತ್ರ ತೆಲುಗು ಮತ್ತು ಹಿಂದಿ ಎರಡು ಭಾಷೆಗಳಲ್ಲಿ ತೆರೆಗೆ ಬರ್ತಿದೆ.

  'ಲೈಗರ್' ಬಗ್ಗೆ ಹುಟ್ಟಿದೆ ಭಾರಿ ನಿರೀಕ್ಷೆ!

  'ಲೈಗರ್' ಬಗ್ಗೆ ಹುಟ್ಟಿದೆ ಭಾರಿ ನಿರೀಕ್ಷೆ!

  ವಿಜಯ್‌ ದೇವರಕೊಂಡ ಅಭಿನಯದ ಲೈಗರ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಈ ಚಿತ್ರದಲ್ಲಿನ ನಟ ವಿಜಯ್‌ ದೇವರ ಕೊಂಡ ಲುಕ್ ವಿಭಿನ್ನವಾಗಿದೆ. ಇನ್ನು ಚಿತ್ರದ ಮೊದಲ ಟೀಸರ್‌ ಕೂಡ ರಿಲೀಸ್‌ ಆಗಿದೆ. ಟೀಸರ್‌ನಲ್ಲಿ ಸಿನಿಮಾದ ಬಗ್ಗೆ ಒಂದಷ್ಟು ಸುಳಿವು ಬಿಟ್ಟು ಕೊಡಲಾಗಿದೆ. ಸಿನಿಮಾದಲ್ಲಿ ವಿಜಯ್ ಪಾತ್ರ ಹೇಗಿರಲಿದೆ ಎನ್ನುವುದನ್ನು ಟೀಸರ್‌ನಲ್ಲಿ ಪರಿಚಯ ಮಾಡಿಕೊಡಲಾಗಿದೆ. ಈ ಚಿತ್ರವನ್ನು ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್‌ 25ಕ್ಕೆ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್ ಆಗಿದೆ.

  English summary
  Mahesh Babu And Vijay Deverakonda Taking Huge Remuneration For Their Upcoming Movies, Here Is The Details
  Monday, January 17, 2022, 15:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X