For Quick Alerts
  ALLOW NOTIFICATIONS  
  For Daily Alerts

  ತ್ರಿವಿಕ್ರಮ್ ಚಿತ್ರಕ್ಕಾಗಿ ಹುಬ್ಬೇರಿಸುವ ಸಂಭಾವನೆ ಬೇಡಿಕೆಯಿಟ್ಟ ಮಹೇಶ್ ಬಾಬು

  |

  ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೊಂದು ಶುರುವಾಗಲಿದೆ. ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಪ್ರಿನ್ಸ್ ಮಹೇಶ್ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.

  'ಸ್ಪೈಡರ್' ಸಿನಿಮಾದ ಸೋಲಿನ ಬಳಿಕ ಮಹೇಶ್ ಬಾಬು ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದಾರೆ. ಭರತ್ ಅನೇ ನೇನು, ಮಹರ್ಷಿ, ಸರಿಲೇರು ನೀಕೆವ್ವರು ಚಿತ್ರಗಳ ಹ್ಯಾಟ್ರಿಕ್ ಸಕ್ಸಸ್ ಮೂಲಕ ಬಾಕ್ಸ್ ಆಫೀಸ್‌ ಕಿಂಗ್ ಎನಿಸಿಕೊಂಡಿದ್ದಾರೆ. ಸತತವಾಗಿ ಹಿಟ್ ಮೇಲೆ ಹಿಟ್ ಕೊಡ್ತಿರುವ ಮಹೇಶ್ ಬಾಬು ಮುಂದಿನ ಚಿತ್ರಕ್ಕಾಗಿ ಬೇಡಿಕೆಯಿಟ್ಟಿರುವ ಸಂಭಾವನೆ ಎಷ್ಟು? ಮುಂದೆ ಓದಿ...

  ಹೊಸ ನಿರ್ದೇಶಕನ ಜೊತೆ ಸಿನಿಮಾ

  ಹೊಸ ನಿರ್ದೇಶಕನ ಜೊತೆ ಸಿನಿಮಾ

  'ಸರಿಲೇರು ನೀಕೆವ್ವರು' ಸಿನಿಮಾದ ಗೆಲುವಿನ ನಂತರ ಮಹೇಶ್ ಬಾಬು ಪರುಶರಾಮ್ ಎಂಬ ಹೊಸ ನಿರ್ದೇಶನದ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ 'ಸರ್ಕಾರು ವಾರಿ ಪಾಟ' ಎಂದು ಹೆಸರಿಟ್ಟಿದ್ದು, ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಪ್ರಿನ್ಸ್' ಮಹೇಶ್ ಬಾಬು ಕುಟುಂಬದಿಂದ ಹೊಸ ನಟ ಎಂಟ್ರಿ'ಪ್ರಿನ್ಸ್' ಮಹೇಶ್ ಬಾಬು ಕುಟುಂಬದಿಂದ ಹೊಸ ನಟ ಎಂಟ್ರಿ

  'ಖಲೇಜಾ' ಬಳಿಕ ಪ್ರಿನ್ಸ್

  'ಖಲೇಜಾ' ಬಳಿಕ ಪ್ರಿನ್ಸ್

  ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದು 11 ವರ್ಷ ಆಗಿದೆ. ಇದಕ್ಕೂ ಮುಂಚೆ 2010ರಲ್ಲಿ 'ಖಲೇಜಾ' ಸಿನಿಮಾ ಬಂದಿತ್ತು. ಈಗ ದಶಕದ ಬಳಿಕ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಹಾಗಾಗಿ, ಈ ಕಾಂಬಿನೇಷನ್ ಮೇಲೆ ಕುತೂಹಲ ಹೆಚ್ಚಿದೆ.

  ಭಾರಿ ಸಂಭಾವನೆ ಬೇಡಿಕೆಯಿಟ್ಟ ನಟ

  ಭಾರಿ ಸಂಭಾವನೆ ಬೇಡಿಕೆಯಿಟ್ಟ ನಟ

  ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಜೋಡಿಯ ಚಿತ್ರವನ್ನು ಹಾರಿಕಾ ಹಾಸಿನ್ ಕ್ರಿಯೇಷನ್ಸ್ ನಿರ್ಮಾಣ ಮಾಡಲಿದೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು 55 ಕೋಟಿ ಆಫರ್ ಮಾಡಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಸದ್ಯದ ಯೋಜನೆ ಪ್ರಕಾರ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಶುರುವಾಗಲಿದೆಯಂತೆ.

  ತೆಲುಗಿನ ಸ್ಟಾರ್ ನಟನಾದರೂ ಮಹೇಶ್ ಬಾಬುಗೆ ತೆಲುಗು ಓದಲು, ಬರೆಯಲು ಬರಲ್ಲತೆಲುಗಿನ ಸ್ಟಾರ್ ನಟನಾದರೂ ಮಹೇಶ್ ಬಾಬುಗೆ ತೆಲುಗು ಓದಲು, ಬರೆಯಲು ಬರಲ್ಲ

  ಎನ್‌ಟಿಆರ್ ಜೊತೆ ಸಿನಿಮಾ

  ಎನ್‌ಟಿಆರ್ ಜೊತೆ ಸಿನಿಮಾ

  'ಅಲಾ ವೈಕುಂಠಪುರಂಲೋ' ಸಿನಿಮಾದ ಯಶಸ್ಸಿನ ಬಳಿಕ ಜೂನಿಯರ್ ಎನ್‌ಟಿಆರ್ ಜೊತೆ ತ್ರಿವಿಕ್ರಮ್ ಪ್ರಾಜೆಕ್ಟ್ ಟೇಕ್ ಆನ್ ಮಾಡಲಿದ್ದಾರೆ. ಈ ಸಿನಿಮಾ ಮುಗಿಸಿ ಮಹೇಶ್ ಬಾಬು ಜೊತೆಗಿನ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ.

  ರಾಜಮೌಳಿ ಜೊತೆ ಪ್ರಾಜೆಕ್ಟ್?

  ರಾಜಮೌಳಿ ಜೊತೆ ಪ್ರಾಜೆಕ್ಟ್?

  ಅಂದ್ಹಾಗೆ, ರಾಜಮೌಳಿ ಜೊತೆ ಪ್ರಿನ್ಸ್ ಸಿನಿಮಾ ಮಾಡಬೇಕಿತ್ತು. ಸದ್ಯಕ್ಕೆ ರಾಜಮೌಳಿಯ ಸಿನಿಮಾ ಅದ್ಯಾವಾಗೋ ಮುಗಿಯುತ್ತೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ. ಹಾಗಾಗಿ, ಕಾಯದ ಮಹೇಶ್ ಬಾಬು ತ್ರಿವಿಕ್ರಮ್ ಪ್ರಾಜೆಕ್ಟ್‌ಗೆ ಸಹಿ ಹಾಕಿದರು. ಬಹುಶಃ ಇದು ಮುಗಿದ ಮೇಲೆ ರಾಜಮೌಳಿ ಜೊತೆ ಪ್ರಾಜೆಕ್ಟ್ ಶುರು ಮಾಡಬಹುದು.

  English summary
  Tollywood Prince Mahesh Babu demanding huge remuneration for Trivikram Srinivas project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X