For Quick Alerts
  ALLOW NOTIFICATIONS  
  For Daily Alerts

  ನಂ.1 ತಾರಾ ಜೋಡಿ ಸಂಸಾರ ಛಿದ್ರ ಛಿದ್ರ

  By ಜೇಮ್ಸ್ ಮಾರ್ಟಿನ್
  |

  ಕರ್ನಾಟಕದ ಪಕ್ಕದ ರಾಜ್ಯ ಕೇರಳದ ಸಿನಿ ಪ್ರಪಂಚದ ಸುಂದರ ದಂಪತಿಗಳು ಎಂದೇ ಹೆಸರಾಗಿದ್ದ ಪ್ರತಿಭಾವಂತ ತಾರೆಯರಾದ ಮಂಜು ವಾರಿಯರ್ ಹಾಗೂ ದಿಲೀಪ್ ಸಂಸಾರದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ದಿಲೀಪ್ ಹಾಗೂ ಮಂಜು ಇಬ್ಬರು ಪರಸ್ಪರ ಒಪ್ಪಿಕೊಂಡು ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

  ಈಗಾಗಲೇ ಇಬ್ಬರು ದೂರವಾಗಿ ಬೇರೆ ಬೇರೆ ವಾಸಿಸುತ್ತಿದ್ದು, ಇನ್ನೇನಿದ್ದರೂ ಆಸ್ತಿ ಪಾಸ್ತಿ ಹಂಚಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ. ಆಸ್ತಿ ಹಂಚಿಕೆ ಹಾಗೂ ಕೌನ್ಸಿಲಿಂಗ್ ಬಾಕಿ ಇರುವುದರಿಂದ ವಿಚ್ಛೇದನ ನೀಡಿಕೆ ವಿಳಂಬವಾಗಿದೆ ಎಂದು ಮಾಲಿವುಡ್ ಬಾತ್ಮಿದಾರರು ಹೇಳಿದ್ದಾರೆ.

  ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರು ಪರಸ್ಪರ ಒಪ್ಪಿಕೊಂಡು ವಿಚ್ಚೇದನ ಪಡೆಯಲು ಸಿದ್ಧ ಎಂದಿದ್ದಾರೆ. ತ್ರಿಸ್ಸೂರ್ ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ. ತ್ರಿಸ್ಸೂರ್ ನಲ್ಲೇ ಮಂಜು ನೆಲೆಸಿದ್ದರೆ ದಿಲೀಪ್ ಅವರು ಅಲುವ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ.

  ಮಗು ಹಾಗೂ ಪ್ರೀತಿ ಕಳೆದುಕೊಂಡ ದಿಲೀಪ್: ಮಂಜು ವಾರಿಯರ್ ಹಾಗೂ ದಿಲೀಪ್ ರದ್ದು ಒಂದು ರೀತಿ ಸುಂದರ ಪ್ರೇಮಕಥೆ. ದಿಲೀಪ್ ಅವರು ನಟಿ ಮಂಜು ವಾರಿಯರ್ ಗೆ ಪ್ರಪೋಸ್ ಮಾಡುವ ಹೊತ್ತಿಗೆ ಮಂಜು ರಾಷ್ಟ್ರ, ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ವಿಜೇತ ನಟಿ ಎನಿಸಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದರು.

  ಕೇರಳದ ಟಾಪ್ ನಟಿಗೆ ದಿಲೀಪ್ ಪ್ರಪೋಸ್ ಮಾಡಿದ್ದು ಮೊದಲಿಗೆ ರಿಜೇಕ್ಟ್ ಆಗಿತ್ತಂತೆ. ಕೊನೆಗೂ ಮಂಜು ಒಪ್ಪಿ 1998ರಲ್ಲಿ ದಿಲೀಪ್ ರನ್ನು ವರಿಸಿದ್ದರು. ದಿಲೀಪ್ ಆಗಿನ್ನೂ ಚಿತ್ರರಂಗದಲ್ಲಿ ಯಶಸ್ಸಿನ ರುಚಿ ಕಾಣಲು ಹಂಬಲಿಸುತ್ತಿದ್ದರು. ನಂತರ ದಿಲೀಪ್ ಕೂಡಾ ಜನಪ್ರಿಯ ಸ್ಟಾರ್ ಆಗಿ ಮಮ್ಮೂಟಿ, ಮೋಹನ್ ಲಾಲ್ ಸಾಲಿಗೆ ಸೇರಿದ್ದು ಈಗ ಇತಿಹಾಸ.

  ದಿಲೀಪ್ ಹಾಗೂ ಮಂಜು ದಂಪತಿಗೆ 8ನೇ ತರಗತಿ ಓದುತ್ತಿರುವ ಮೀನಾಕ್ಷಿ ಎಂಬ ಮಗಳಿದ್ದಾಳೆ. ಮಗಳನ್ನು ತನ್ನ ಸುಪರ್ದಿಗೆ ಪಡೆಯುವಲ್ಲಿ ಮಂಜು ಯಶಸ್ವಿಯಾಗಿದ್ದಾರೆ. ತಂದೆ ದಿಲೀಪ್ ತನ್ನ ಮಗಳನ್ನು ಕಾಣಲು ಮಂಜು ಮನೆಗೆ ಹೋಗಿ ಬರಬಹುದಾಗಿದೆ. ಆದರೆ, ಸಮಯ, ಅವಧಿಯನ್ನು ಕೋರ್ಟ್ ನಿರ್ಧರಿಸಲಿದೆ.

  ಮಂಜು ಸಿನಿಮಾಗೆ ರೀ ಎಂಟ್ರಿ ಕಾರಣವೇ?: ದಿಲೀಪ್ ರನ್ನು ಮದುವೆಯಾಗುತ್ತಿದ್ದಂತೆ ಜನಪ್ರಿಯ ನಟಿ ಮಂಜುರನ್ನು ಕೇರಳ ಚಿತ್ರರಂಗ ಕಳೆದುಕೊಂಡಿತ್ತು. ಸಿನಿಮಾದಲ್ಲಿ ನಟಿಸುವುದು ಬೇಡ ಎಂದು ದಿಲೀಪ್ ಖಡಾಖಂಡಿತವಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ ಕಲ್ಯಾಣ್ ಜ್ಯುವೆಲ್ಲರ್ಸ್ ಜಾಹೀರಾತು, ಕೆಲವು ಸಿನಿಮಾಗಳನ್ನು ಮಂಜು ಒಪ್ಪಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

  ಮಂಜು ಮತ್ತೊಮ್ಮೆ ಜನಪ್ರಿಯತೆ ಗಳಿಸುವುದು ದಿಲೀಪ್ ಗೆ ಇರಸು ಮುರಸು ಉಂಟು ಮಾಡಿದೆ ಎನ್ನಲಾಗಿದ್ದು, ಹೀಗಾಗಿ ಇಬ್ಬರು ಬೇರೆ ಬೇರೆ ನೆಲೆಸಿದ್ದರು. ಆದರೆ, ಕುತೂಹಲದ ಸಂಗತಿ ಎಂದರೆ, ಮಂಜು ಚಿತ್ರರಂಗಕ್ಕೆ ಹೌ ಓಲ್ಡ್ ಆರ್ ಯೂ?' ಎಂಬ ಚಿತ್ರ ರೋಷನ್ ನಿರ್ದೇಶನದ ಚಿತ್ರದ ಮೂಲಕ ರೀ ಎಂಟ್ರಿ ಕೊಡುತ್ತಿದ್ದು ಇದರ ನಾಯಕ ಆಕೆ ಪತಿ ದಿಲೀಪ್ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

  English summary
  Putting a full stop for all the noisy speculations, Manju and Dileep are finally divorcing! The case is now in its final stage where only dividing their property is left to be resolved. Only because of the last two stages (dividing property and counseling), their divorce is getting postponed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X