ಮೇ 5ರಂದು ಬ್ರಿಟನ್ ಚೆಲುವೆ ಆಮಿ ಜಾಕ್ಸನ್ ನಿಶ್ಚಿತಾರ್ಥ.!
ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಬ್ರಿಟನ್ ಮೂಲದ ನಟಿ ಕಮ್ ಮಾಡೆಲ್ ಆಮಿ ಜಾಕ್ಸನ್ ಈಗ ಸರ್ಪ್ರೈಸ್ ಸುದ್ದಿಯೊಂದನ್ನ ನೀಡಿದ್ದಾರೆ. ಮೇ 5 ರಂದು ತಮ್ಮ ಗೆಳೆಯ ಜಾರ್ಜ್ ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ.
ಮದುವೆಗೆ ಮುನ್ನವೇ ನಟಿ ಆಮಿ ಜಾಕ್ಸನ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಮಾರ್ಚ್ 31ರಂದು ಈ ಬಗ್ಗೆ ಸುಳಿವು ಕೊಟ್ಟಿದ್ದ ಆಮಿ ಜಾಕ್ಸನ್, ಪರೋಕ್ಷವಾಗಿ ತಾನು ಗರ್ಭಿಣಿ ಎಂಬ ವಿಷ್ಯವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

2019ರ ಜನವರಿ ತಿಂಗಳಲ್ಲಿ ಜಾರ್ಜ್ ಜೊತೆ ಎಂಗೇಜ್ ಮಾಡಿಕೊಂಡಿದ್ದು, 2020ರಲ್ಲಿ ಮದುವೆಯಾಗುವ ಪ್ಲಾನ್ ಮಾಡಲಾಗಿದೆಯಂತೆ. ಈ ನಡುವೆ ಮೇ 5 ರಂದು ಲಂಡನ್ ನಲ್ಲಿ ಅಧಿಕೃತವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.
ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದರು. ರಜನಿಕಾಂತ್ ಅಭಿನಯದ '2.0' ಚಿತ್ರದಲ್ಲಿ ಕೊನೆಯದಾಗಿ ಆಮಿ ಅಭಿನಯಿಸಿದ್ದರು.
ಅದಕ್ಕೂ ಮುಂಚೆ ವಿಕ್ರಂ ಅಭಿನಯದ 'ಐ', ಯವಡು, ಥೇರಿ, ಗೀತು, ಸಿಂಗ್ ಈಸ್ ಬ್ಲಿಂಗ್, ತಂಗ ಮಗನ್ ಸಿನಿಮಾಗಳಲ್ಲಿ ಆಮಿ ನಟಿಸಿದ್ದಾರೆ.


Click it and Unblock the Notifications











