For Quick Alerts
ALLOW NOTIFICATIONS  
For Daily Alerts

  ವಿಶೇಷ ವರದಿ: ನ್ಯೂಸ್ ಚಾನೆಲ್ ವರದಿಗಾರರ ಗೋಳು ಕೇಳೋರು ಯಾರು.?

  By ನೊಂದ ಸುದ್ದಿ ವಾಹಿನಿ ಪತ್ರಕರ್ತ
  |

  ಸ್ಟೈಲ್ ಆಗಿ ರೆಡಿ ಆಗಿ, ಕೈಯಲ್ಲಿ ಸುದ್ದಿ ವಾಹಿನಿ ಲೋಗೋ ಹಿಡಿದುಕೊಂಡು, ಯಾವುದಾದರೂ ಸುದ್ದಿ ವರದಿ ಮಾಡೋಕೆ ಅಂತ ಹೋದರೆ, ಮಾಧ್ಯಮ ವರದಿಗಾರರಿಗೆ ಸಿಗುವ ಮರ್ಯಾದೆ ಅಷ್ಟರಲ್ಲೇ.! ಬೇಕಾದ್ರೆ, ನಿನ್ನೆ ಆದ ಒಂದು ಘಟನೆ ಬಗ್ಗೆ ಡೀಟೇಲ್ ಆಗಿ ಹೇಳ್ತೀವಿ, ಕೇಳಿ.....

  ನಿನ್ನೆ (ಮೇ 30) ರಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಗಾಂಧಿನಗರದ ಭೂಮಿಕಾ ಚಿತ್ರಮಂದಿರದಲ್ಲಿ 'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತು. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

  ಹೇಳಿ ಕೇಳಿ, ಗ್ರಾಫಿಕ್ಸ್ ಬಳಕೆ ಮೂಲಕ ಸಾಹಸಸಿಂಹ ಡಾ.ವಿಷ್ಣುವರ್ಧನ್ ಮಿಂಚಲಿರುವ 201ನೇ ಸಿನಿಮಾ ಅದು. ಅದರಲ್ಲೂ, ಲಕ್ಕಿ ಸ್ಟಾರ್ ರಮ್ಯಾ 'ನಾಗಿಣಿ' ಅವತಾರದಲ್ಲಿ ಕಾಣಿಸಿಕೊಳ್ಳುವ ಚಿತ್ರ ಅಂತ 'ನಾಗರಹಾವು' ಟೀಸರ್ ಲಾಂಚ್ ಕಾರ್ಯಕ್ರಮ ಕವರ್ ಮಾಡೋಕೆ ಎಲ್ಲಾ ದಿನಪತ್ರಿಕೆಗಳ, ಸುದ್ದಿ ವಾಹಿನಿಗಳ ವರದಿಗಾರರು ಹಾಗೂ ಆನ್ ಲೈನ್ ಪತ್ರಕರ್ತರು ಭೂಮಿಕಾ ಚಿತ್ರಮಂದಿರಕ್ಕೆ ಧಾವಿಸಿದ್ರು.

  ಭೂಮಿಕಾ ಥಿಯೇಟರ್ ನಲ್ಲಿ ವಿಷ್ಣು ಅಭಿಮಾನಿಗಳು ತುಂಬಿ ತುಳುಕುತ್ತಿದ್ರು. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು ಅಂದ್ರೆ ನೀವೇ ಊಹಿಸಿಕೊಳ್ಳಿ ಜನರ ಸಂಖ್ಯೆ ಎಷ್ಟಿರಬಹುದು ಅಂತ.!

  ಜನರ ಕಿರುಚಾಟ, ಘೋಷವಾಕ್ಯ, ಜೈಕಾರದ ನಡುವೆ 'ನಾಗರಹಾವು' ಟೀಸರ್ ಬಿಡುಗಡೆ ಆಯ್ತು. ಕಾರ್ಯಕ್ರಮಕ್ಕೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಕೋಡಿ ರಾಮಕೃಷ್ಣ ಬಂದಿದ್ರು.

  ಟೀಸರ್ ನೋಡಿದ ರಮ್ಯಾ 'ನಾಗರಹಾವು' ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಏನು ಹೇಳ್ತಾರೆ ಕೇಳೋಣ ಅಂತ ಮಾಧ್ಯಮ ಪ್ರತಿನಿಧಿಗಳೆಲ್ಲಾ ಎಕ್ಸಿಟ್ ಕಡೆ ಕರೆದುಕೊಂಡು ಬಂದ್ರು (ಒಳಗಡೆ ಜನರ ಗದ್ದಲದ ನಡುವೆ ರಮ್ಯಾ ಮಾತನಾಡುವುದು ಕೇಳಿಸುತ್ತಿರಲಿಲ್ಲ).

  ಹೊರಗಡೆ ಬರುತ್ತಿದ್ದಂತೆ, ಕೆಲವರು ರಮ್ಯಾ ಮೇಲೆ ಬೀಳಲು ಶುರು ಮಾಡಿದರು. ಅಂಥವರನ್ನು ಪಕ್ಕಕ್ಕೆ ತಳ್ಳಿದ ಮೀಡಿಯಾ ಕ್ಯಾಮರಾಮೆನ್ ಫ್ರೇಮ್ ಫಿಕ್ಸ್ ಮಾಡಿದ್ರು. ರಮ್ಯಾ ಮಾತನಾಡಲು ಶುರು ಮಾಡುತ್ತಿದ್ದಂತೆ, ಸಿಕ್ಕಿದ್ದೇ ಚಾನ್ಸ್ ಅಂತ ಕಿಡಿಗೇಡಿಗಳು (ಅಂಥವರನ್ನ ವಿಷ್ಣು ಅಭಿಮಾನಿಗಳು ಅನ್ಬೇಕಾ?) ತಮ್ಮ ಕೈಚಳಕ ತೋರಿಸಿದರು.!

  ಪ್ರಜಾ ಟಿವಿ ಸಿನಿಮಾ ವರದಿಗಾರರ ಜೇಬಿಗೆ ಕತ್ತರಿ ಬಿತ್ತು. ಸಮಯ ಟಿವಿ ಲೋಗೋ ಅಬೇಸ್ ಆಯ್ತು. ಸುವರ್ಣ ಸುದ್ದಿ ವಾಹಿನಿ ಕ್ಯಾಮರಾ ಟ್ರೈಪಾಡ್ ಮುರಿದು ಬಿತ್ತು. ಎಲ್ಲದಕ್ಕಿಂತ ದುರಂತ ಅಂದ್ರೆ, ಇದನ್ನೆಲ್ಲಾ ಕಣ್ಣಾರೆ ನೋಡುತ್ತಿದ್ದ 'ನಾಗರಹಾವು' ಚಿತ್ರತಂಡ ನಿಯೋಜಿಸಿದ್ದ ಬೌನ್ಸರ್ಸ್ ''ಬೋ**ಕ್ಕ* ಮೀಡಿಯಾದವರಿಂದ ಎಲ್ಲಾ ಹಾಳಾಯ್ತು'' ಅಂದಿದ್ದು.

  ಅಲ್ಲ ಸ್ವಾಮಿ, ಮೀಡಿಯಾ/ಪತ್ರಿಕಾ ವರದಿಗಾರರಿಂದ ಹಾಳಾಗಿದ್ದಾದರೂ ಏನು? ಫಸ್ಟ್ ಆಫ್ ಆಲ್, ಇಡೀ ಕಾರ್ಯಕ್ರಮದ ಆಯೋಜನೆಯೇ ನೆಟ್ಟಗಿರಲಿಲ್ಲ. ಪ್ರೆಸ್ ಹಾಗೂ ಅಭಿಮಾನಿಗಳನ್ನ ಮಿಕ್ಸ್ ಮಾಡಲು ಹೋಗಿ ಎಡವಟ್ಟು ಮಾಡಿದ್ದು ನಿಮ್ಮ ಚಿತ್ರತಂಡ.

  ಅಭಿಮಾನಿಗಳನ್ನ ನಿಭಾಯಿಸುವ ತಾಕತ್ತು ಇದ್ರೆ, ಇಂತಹ ಕಾರ್ಯಕ್ರಮ ಮಾಡಿ. ಇಲ್ಲ ಅಂದ್ರೆ ಮೀಡಿಯಾದವರ ಮೇಲೆ ಗೂಬೆ ಯಾಕೆ ಕೂರಿಸ್ತೀರಾ? ಅಷ್ಟಕ್ಕೂ, ನಿಮ್ಮ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಂದ ಎಷ್ಟು ಜನ ಮೀಡಿಯಾದವರಿಗೆ ಕೂರಲು ಕುರ್ಚಿ ಖಾಲಿ ಇತ್ತು? ನಿಮ್ಮ ಸಿನಿಮಾದ ಈವೆಂಟ್ ಕವರ್ ಮಾಡೋಕೆ ಬಂದ ಸುದ್ದಿ ವಾಹಿನಿಯವರಿಗೆ ಕ್ಯಾಮರಾ ಫ್ರೇಮ್ ಫಿಕ್ಸ್ ಮಾಡಲು ಜಾಗ ಎಲ್ಲಿ ಮೀಸಲು ಇಟ್ಟಿದ್ರಿ.? ಜನ ಜಂಗುಳಿ ಮಧ್ಯೆ ಎಲ್ಲಾ ಕ್ಯಾಮರಾಮೆನ್ ಗಳು ಸರ್ಕಸ್ ಮಾಡ್ಬೇಕಾಯ್ತು.

  ಹೋಗಲಿ, ರಮ್ಯಾ ಬೈಟ್ ಗಾಗಿ ನಿಮ್ಮ ಚಿತ್ರತಂಡದವರೇ ಅರೇಂಜ್ ಮಾಡಬಹುದಿತ್ತಲ್ವಾ.? ನಿಮ್ಮ ಕಡೆಯಿಂದ ಯಾಕೆ ಯಾರೂ ಮುಂದೆ ಬರ್ಲಿಲ್ಲ.? ನಿಮ್ಮ ಚಿತ್ರಕ್ಕೆ ಪ್ರಚಾರ ಕೊಡಲು ಬಂದ ಪತ್ರಕರ್ತರಿಗೆ ಕೊಡುವ ಮರ್ಯಾದೆ ಇದೇನಾ.?

  'ನಾಗರಹಾವು' ಚಿತ್ರತಂಡ ನಿಯೋಜಿಸಿದ್ದ ಬೌನ್ಸರ್ಸ್ ನಡವಳಿಕೆಯಿಂದ ಮೀಡಿಯಾದವರಿಗೆ ರೋಷ ಉಕ್ಕಿ ಬಂದಿದ್ದು ಒಂದ್ಕಡೆ ಆದ್ರೆ, ಇನ್ನೊಂದ್ಕಡೆ ಆಫೀಸ್ ನಲ್ಲಿ ಏನಾಗುತ್ತೋ ಎಂಬ ಭೀತಿ ಬೇರೆ.

  ''ಏನೇ ಆದರೂ, ನಮ್ದ್ರಲ್ಲೇ ಎಕ್ಸ್ ಕ್ಲೂಸಿವ್ ಬರ್ಬೇಕು'' ಎಂಬ ಒತ್ತಡ ಎಲ್ಲಾ ವರದಿಗಾರರ ಮೇಲೆ.! ಅಂಥದ್ರಲ್ಲಿ, ಲೋಗೋ ಮಿಸ್ ಮಾಡಿ, ಟ್ರೈಪಾಡ್ ಮುರಿದುಕೊಂಡು ಹೋದ್ರೆ, ಆಫೀಸ್ ನಲ್ಲಿ ಕಾರಣ ಕೇಳೋರು ಯಾರು? ಮುಲಾಜಿಲ್ದೆ, ಕ್ಯಾಮರಾಮೆನ್ ಹಾಗೂ ರಿಪೋರ್ಟರ್ ಗೆ ಸಂಬಳದಲ್ಲಿ ಕತ್ರಿ ಖಾತ್ರಿ.

  ಮೊದಲೇ ಮಾಧ್ಯಮ ವರದಿಗಾರರಿಗೆ ಸಿಗುವ ಸಂಬಳ ಅಷ್ಟರಲ್ಲೇ ಬಿಡಿ. ಅದರಲ್ಲೂ ಕತ್ರಿ ಅಂದ್ರೆ, ತಿಂಗಳು ತೂಗುವುದು ಹೇಗೆ.? ಅವರನ್ನೇ ನಂಬಿರುವ ಕುಟುಂಬದ ಗತಿ ಏನು.? ನಿಮ್ಮ ಚಿತ್ರತಂಡ ಅದನ್ನ ಭರಿಸಿಕೊಡುತ್ತಾ.? ಇಲ್ಲ, ಮಾಡಬೇಕಿರುವ ಕೆಲಸ ಮರೆತು ದೌಲತ್ತಿನ ಮಾತಾಡಿದ ಆ ಬೌನ್ಸರ್ ನಷ್ಟ ಭರಿಸುತ್ತಾರಾ.?

  ಇದಕ್ಕೆಲ್ಲಾ ಉತ್ತರ ಕೊಡೋಕೆ ಅಲ್ಲಿ ಯಾರೂ ಇರ್ಲಿಲ್ಲ..! ಪ್ರಶ್ನೆಯನ್ನ ಪ್ರಶ್ನೆಯಾಗೇ ಇಟ್ಕೊಂಡು, ಸಪ್ಪೆ ಮೋರೆ ಹಾಕೊಂಡು ಎಲ್ಲಾ ಸುದ್ದಿ ವಾಹಿನಿ ವರದಿಗಾರರು ವಾಪಸ್ ತೆರಳಿದರು. ಚಾನೆಲ್ ಗಳ ಟಿ.ಆರ್.ಪಿ ಗುದ್ದಾಟದಲ್ಲಿ, ವರದಿಗಾರರೂ ಈಗ ಬೀದಿಯಲ್ಲಿ ಬಡಿದಾಡುವ ಪರಿಸ್ಥಿತಿ ಬಂದುಬಿಟ್ಟಿದೆ. ಪಾಪ....ಅವರ ಗೋಳು ಯಾರಿಗ್ಹೇಳೋಣ.?

  'ಕಿಡಿಗೇಡಿ'ಗಳಿಗೆ ಕೊನೆಯದಾಗಿ ಒಂದು ಮಾತು: ವಿಷ್ಣು ಅಭಿಮಾನಿಗಳು ಅಂತ ಹೇಳ್ಕೊಂಡು ಪಿಕ್ ಪಾಕೆಟ್ ಮಾಡಿ, ಕಲಾವಿದರ ಹೆಸರಿಗೆ, ಮತ್ತವರ ಅಭಿಮಾನಿಗಳ ಮುಖಕ್ಕೆ ಮಸಿ ಬಳಿಯಬೇಡಿ.

  English summary
  For the First time in India, CGI Created version of Legendary Actor Dr.Vishuvardhan's 201st movie 'Nagarahavu' teaser launch was held yesterday (May 30th) in Bhoomika Theatre, Bengaluru. At this event, Media personnel were annoyed with 'So Called' Vishnuvardhan Fans and Bouncers employed for the event. Here is an article written by Frustrated Media Reporter.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more