For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಯುವರಾಜ್'ಗಾಗಿ ಬಂದಳು ಮಿಸ್‌ವರ್ಲ್ಡ್ ಮಾನುಷಿ ಚಿಲ್ಲರ್!

  |

  ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದಂತಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳ ನಿರ್ಮಾಣಕ್ಕೆ ಹೊಂಬಾಳೆ ಮುಂದಾಗಿದೆ. ಸಾಕಷ್ಟು ನಿರೀಕ್ಷಿತ ಸಿನಿಮಾಗಳನ್ನೆ ಮಾಡುತ್ತಿದೆ ಹೊಂಬಾಳೆ ಸಂಸ್ಥೆ. ಅವುಗಳಲ್ಲಿ ಯುವರಾಜ್ ಕುಮಾರ್ ಸಿನಿಮಾ ಕೂಡ ಒಂದು.

  ಈಗ ವಿಶ್ವಸುಂದರಿ ಮಾನುಷಿ ಚಿಲ್ಲರ್ ಜೊತೆಗೆ ಹೊಂಬಾಳೆ ಕೈ ಜೋಡಿಸಿದಂತೆ ಇದೆ. ಮಾನುಷಿ ಚಿಲ್ಲರ್ ನಿರ್ಮಾಪಕ ವಿಜಯ್ ಕಿರಂಗಂದೂರು ಅವರನ್ನು ಭೇಟಿ ಮಾಡಿದ್ದು ಈ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಯುವರಾಜ್ ಕುಮಾರ್ ಚಿತ್ರದ ಶೂಟಿಂಗ್‌ಗೆ ದಿನಾಂಕ ನಿಗದಿ!ಯುವರಾಜ್ ಕುಮಾರ್ ಚಿತ್ರದ ಶೂಟಿಂಗ್‌ಗೆ ದಿನಾಂಕ ನಿಗದಿ!

  ಅಷ್ಟಕ್ಕೂ ಮಾನುಷಿ ಚಿಲ್ಲರ್ ಇಲ್ಲಿ ತನಕ ಹೊಂಬಾಳೆ, ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಹೊಂಬಾಳೆ ನಿರ್ಮಾಪಕರನ್ನು ಭೇಟಿ ಮಾಡಿರುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಯುವರಾಜ್ ಸಿನಿಮಾ ಎನ್ನಲಾಗಿದೆ.

  ಹೊಂಬಾಳೆ ಕಚೇರಿಯಲ್ಲಿ ಮಾನುಷಿ ಚಿಲ್ಲರ್!

  ಮಾನುಷಿ ಚಿಲ್ಲರ್ ಸದ್ಯ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅದು ಕೂಡ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎನ್ನುವುದು ವಿಶೇಷ. ಹಾಗಂತ ಅಚಾನಕ್ಕಾಗಿ ನಿರ್ದೇಶಕ ವಿಜಯ್ ಕಿರಗಂದೂರುಗೆ ಮಾನುಷಿ ಚಿಲ್ಲರ್ ಸಿಕ್ಕಿದ್ದಲ್ಲ. ಬದಲಿಗೆ ಮಾನುಷಿ ಚಿಲ್ಲರ್ ಬೆಂಗಳೂರಿನಲ್ಲಿರುವ ಹೊಂಬಾಳೆ ನಿರ್ಮಾಣ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಮಾನಸಿಗೆ ಹೂ ಗುಚ್ಛವನ್ನು ಕೊಟ್ಟು ಸ್ವಾಗತಿಸಿ ಮಾತುಕತೆ ನಡೆಸಿದ್ದಾರೆ. ಅವರ ಭೇಟಿಯ ಫೋಟೋವನ್ನು ಕೂಡ ಹೊಂಬಾಳೆ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.

  ಯುವ ರಾಜ್‌ಕುಮಾರ್, ಶ್ರೀದೇವಿ ಮದುವೆಗೆ 3ನೇ ವರ್ಷ: ಪುನೀತ್ ಸಮಾಧಿಗೆ ದಂಪತಿ ಭೇಟಿ!ಯುವ ರಾಜ್‌ಕುಮಾರ್, ಶ್ರೀದೇವಿ ಮದುವೆಗೆ 3ನೇ ವರ್ಷ: ಪುನೀತ್ ಸಮಾಧಿಗೆ ದಂಪತಿ ಭೇಟಿ!

  ಯುವರಾಜ್‌ಗೆ ಮಾನುಷಿ ಚಿಲ್ಲರ್ ನಾಯಕಿ!

  ಯುವರಾಜ್‌ಗೆ ಮಾನುಷಿ ಚಿಲ್ಲರ್ ನಾಯಕಿ!

  ಮಾನುಷಿ ಚಿಲ್ಲರ್ ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ ಹಿನ್ನೆಲೆ, ಹೊಂಬಾಳೆ ನಿರ್ಮಾಣದ ಸಿನಿಮಾದಲ್ಲಿ ಮಾನುಷಿ ಅಭಿನಯಿಸುತ್ತಾರೆ ಎನ್ನಲಾಗುತ್ತಿದೆ. ಸದ್ಯ ಹೊಂಬಾಳೆ ಸಿನಿಮಾ ಕೈಗೆತ್ತಿಕೊಂಡಿರುವ ಚಿತ್ರಗಳಲ್ಲಿ ಬಹುನಿರೀಕ್ಷೆಯ ಮತ್ತು ಹೆಚ್ಚಿನ ಆದ್ಯತೆ ಪಡೆದುಕೊಂಡಿರುವ ದೊಡ್ಡ ಸಿನಿಮಾ ಎಂದರೆ ಅದು ಯುವರಾಜ್ ಕುಮಾರ್‌ಗಾಗಿ ಹೊಂಬಾಳೆ ಮಾಡುತ್ತಿರುವ ಸಿನಿಮಾ. ಈ ಚಿತ್ರಕ್ಕಾಗಿ ರಾಘವೇಂದ್ರ ರಾಜಕುಮಾರ್ ಪುತ್ರ, ರಾಜ್ ಕುಟುಂಬದ ಕುಡಿ ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹಾಗಾಗಿ ಯುವರಾಜ್ ಕುಮಾರ್ ಜೊತೆಗೆ ನಟಿಸುವ ನಾಯಕಿ ಯಾರು ಎನ್ನುವ ಕುತೂಹಲ ಇತ್ತು. ಅದಕ್ಕೀಗ ಮಾನುಷಿ ಚಿಲ್ಲರ್ ಉತ್ತರವಾಗಿದ್ದಾರೆ. ಯುವರಾಜ್ ಕುಮಾರ್ ಮೊದಲ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎನ್ನಲಾಗುತ್ತಿದೆ.

  ಮಾನುಷಿ ಚಿಲ್ಲರ್ ಗೆ 2ನೇ ಚಿತ್ರ!

  ಮಾನುಷಿ ಚಿಲ್ಲರ್ ಗೆ 2ನೇ ಚಿತ್ರ!

  ಮಾನುಷಿ ಚಿಲ್ಲರ್ 2017ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಬಳಿಕ ಕೊಂಚ ತಡವಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲು ಬಾಲಿವುಡ್ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ಅಭಿನಯಿಸಿದ್ದಾರೆ. ಅಕ್ಷಯ್ ಕುಮಾರ್ ಜೊತೆಗೆ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದ ಮಾನುಷಿ ಚಿಲ್ಲರ್ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಈಗ ಇವರು ಕನ್ನಡಕ್ಕೆ ಬರುತ್ತಿದ್ದಾರೆ ಕನ್ನಡದಲ್ಲಿ ಎರಡನೇ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದ.

  ಯುವರಾಜ್ ಕುಮಾರ್‌ಗೆ ಡಾಲಿ ಧನಂಜಯ್ ವಿಲನ್?ಯುವರಾಜ್ ಕುಮಾರ್‌ಗೆ ಡಾಲಿ ಧನಂಜಯ್ ವಿಲನ್?

  ಬಾಲಿವುಡ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ!

  ಬಾಲಿವುಡ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ!

  ಇದೇ ವರ್ಷ ಮಾನುಷಿ ಚಿಲ್ಲರ್ ಅಭಿನಯದ ಮೊದಲ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್' ರಿಲೀಸ್ ಆಯ್ತು. ಆದರೆ ಅಂದುಕೊಂಡ ಮಟ್ಟಿಗೆ ಸಿನಿಮಾ ಯಶಸ್ಸು ಪಡೆಯಲಿಲ್ಲ. ಮಾನುಷಿ ಮೊದಲ ಚಿತ್ರವೇ ಸೋತಿದೆ. ಹಾಗಾಗಿ ಮಾನುಷಿ ಚಿಲ್ಲರ್ ಮುಂದಿನ ಆಯ್ಕೆ ಉತ್ತಮವಾಗಿರುವುದು ಮತ್ತು ಯಶಸ್ಸು ಕಾಣುವ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಮಾನುಷಿ ಚಿಲ್ಲರ್ ಕನ್ನಡಕ್ಕೆ ಬರುತ್ತಿದ್ದಾರೆ. ಈ ಮೂಲಕ ಹೊಂಬಾಳೆ ನಿರ್ಮಾಣ ಸಂಸ್ಥೆಯ ಜೊತೆಗೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡವೇ ನೀಡಬೇಕಿದೆ.

  English summary
  Miss World Manushi Chillar At Hombale Office In Bengaluru, Manushi Casting With Yuvaraj Kumar,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X