»   » 'ಕುರುಕ್ಷೇತ್ರ' ಚಿತ್ರಕ್ಕಾಗಿ ಕನ್ನಡಕ್ಕೆ ಬಂದ 'ಮಿಸ್ ಇಂಡಿಯಾ' ಅದಿತಿ

'ಕುರುಕ್ಷೇತ್ರ' ಚಿತ್ರಕ್ಕಾಗಿ ಕನ್ನಡಕ್ಕೆ ಬಂದ 'ಮಿಸ್ ಇಂಡಿಯಾ' ಅದಿತಿ

Posted By:
Subscribe to Filmibeat Kannada

ದರ್ಶನ್ ಅಭಿನಯಿಸುತ್ತಿರುವ 50ನೇ ಸಿನಿಮಾ 'ಕುರುಕ್ಷೇತ್ರ' ಭರದಿಂದ ಚಿತ್ರೀಕರಣ ಮಾಡುತ್ತಿದೆ. ದರ್ಶನ್, ರವಿಚಂದ್ರನ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ರವಿಶಂಕರ್, ಸಾಯಿ ಕುಮಾರ್ ಹೀಗೆ ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಸ್ನೇಹ, ಹರಿಪ್ರಿಯಾ, ರೆಜಿನಾ ಅಂತಹ ನಟಿಯರು ಬಣ್ಣ ಹಚ್ಚಿದ್ದಾರೆ.

ಇವರ ಸಾಲಿಗೆ ಈಗ ಮತ್ತೋರ್ವ ನಟಿ ಸೇರಿಕೊಂಡಿದ್ದಾರೆ. ಈಕೆ ಮಾಡಲ್ ಕಮ್ ನಟಿಯಾಗಿದ್ದು, 2015ರಲ್ಲಿ ಮಿಸ್ ಫೆಮಿನಾ ಮಿಸ್ ಇಂಡಿಯಾ ವಿಜೇತರಾಗಿದ್ದಾರೆ.

ಹಾಗಿದ್ರೆ, ಈ ನಟಿ ಯಾರು? ಕುರುಕ್ಷೇತ್ರದಲ್ಲಿ ಯಾವ ಪಾತ್ರ ನಿರ್ವಹಿಸಿಲಿದ್ದಾರೆ ಮತ್ತು ಯಾರಿಗೆ ಜೋಡಿಯಾಗಲಿದ್ದಾಳೆ ಎಂಬುದು ತಿಳಿದುಕೊಳ್ಳಲು ಮುಂದೆ ಓದಿ......

'ಕುರುಕ್ಷೇತ್ರ'ಕ್ಕೆ ಕಾಲಿಟ್ಟ ಅದಿತಿ ಆರ್ಯ

'2015ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್‌' ವಿಜೇತೆ ಹಾಗೂ 2015ರಲ್ಲಿ 'ಮಿಸ್ ವರ್ಲ್ಡ್‌' ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಅದಿತಿ ಆರ್ಯ ಕನ್ನಡದ 'ಕುರುಕ್ಷೇತ್ರ'ದಲ್ಲಿ ಅಭಿನಯಿಸಲಿದ್ದಾರಂತೆ.

'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?

ಯಾವ ಪಾತ್ರ?

ಕನ್ನಡದ ಕುರುಕ್ಷೇತ್ರ ಚಿತ್ರದ ನಟಿ ಅದಿತಿ ಆರ್ಯ 'ಉತ್ತರೆ' ಪಾತ್ರವನ್ನ ನಿರ್ವಹಿಸಲಿದ್ದಾರೆ.

ಕುರುಕ್ಷೇತ್ರದಲ್ಲಿ 'ದ್ರೌಪದಿ ವಸ್ತ್ರಾಪಹರಣ' ಮಾಡುವ ದುಶ್ಯಾಸನ ಯಾರು?

ಯಾರು ಈ 'ಉತ್ತರೆ'?

'ವಿರಾಟ' ರಾಜನ ಮಗಳು 'ಉತ್ತರೆ'. ಅಭಿಮನ್ಯುವಿನ ಮಡದಿ. ಅಂದ್ರೆ, 'ಕುರುಕ್ಷೇತ್ರ'ದಲ್ಲಿ ಅದಿತಿ, ಅಭಿಮನ್ಯುಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕುರುಕ್ಷೇತ್ರ'ದ ಮೇಕಿಂಗ್ ಫೋಟೋ ಲೀಕ್, ದರ್ಶನ್, ಹರಿಪ್ರಿಯಾ ಹೊಸ ಲುಕ್

ನಿಖಿಲ್ ಕುಮಾರ್ ಅಭಿಮನ್ಯು

ದರ್ಶನ್ ಕುರುಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅದಿತಿ ಆರ್ಯ, ನಿಖಿಲ್ ಗೆ ಜೋಡಿಯಾಗಲಿದ್ದಾರೆ.

'ಮುನಿರತ್ನ ಕುರುಕ್ಷೇತ್ರ' ಸೃಷ್ಟಿಯಾಗಿದ್ದು ಇದೇ ಕಾರಣದಿಂದ.!

ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದಾರೆ

ಅದಿತಿ ಆರ್ಯ ಅವರಿಗೆ ಕನ್ನಡದಲ್ಲಿ ಮೊದಲ ಸಿನಿಮಾ. ಆದ್ರೆ, ಇದಕ್ಕು ಮುಂಚೆ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನ 'ಇಜಂ' ಚಿತ್ರದಲ್ಲಿ ಅದಿತಿ ನಾಯಕಿ ಆಗಿ ಅಭಿನಯಿಸಿದ್ದಾರೆ.

English summary
miss india in world 2015 Aditi Arya marks her Kannada debut opposite Nikhil Kumar who plays the role of Abhimanyu in Darshan's Kurukshetra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada