»   » ಅರ್ಜುನ್-ಧನಂಜಯ್ ಗಲಾಟೆ, ಬಡವಾದ 'ರಾಟೆ'

ಅರ್ಜುನ್-ಧನಂಜಯ್ ಗಲಾಟೆ, ಬಡವಾದ 'ರಾಟೆ'

By: ಜೀವನರಸಿಕ
Subscribe to Filmibeat Kannada

'ರಾಟೆ' ಚಿತ್ರ ಮಾರ್ಚ್ 20ಕ್ಕೆ ತೆರೆ ಕಾಣುತ್ತಿದೆ. ನಿರ್ದೇಶಕ ಅರ್ಜುನ್ ಬಗ್ಗೆ ಮಾತ್ರ ಅಪಾರ ಗುಲ್ಲೆದ್ದಿದೆ. ನಿರ್ದೇಶಕ ಅರ್ಜುನ್ ತಾನು ಹೇಳಿದಂತೇ ನಡೆಯಬೇಕು. ಇಡೀ ಚಿತ್ರತಂಡ ತನ್ನ ನಿಯಂತ್ರಣದಲ್ಲಿರಬೇಕು ಅನ್ನೋ ವರ್ತಿಸ್ತಿರೋದು ಇದಕ್ಕೆಲ್ಲಾ ಕಾರಣ ಅಂತಿದ್ದಾರೆ ಅರ್ಜುನ್ ಡೈರೆಕ್ಷನ್ ಹತ್ತಿರದಿಂದ ಬಲ್ಲವರು.

ಇತ್ತೀಚೆಗೆ ನಡೆದ 'ರಾಟೆ' ಚಿತ್ರದ ರಿಲೀಸ್ ಪತ್ರಿಕಾಗೋಷ್ಠಿಗೂ ಬಂದಿರಲಿಲ್ಲ ಅರ್ಜುನ್. ಎಂತಹಾ ಕೋಪಗಳೇ ಇದ್ರೂ ನಿರ್ದೇಶಕನಿಗೆ ತನ್ನ ಸಿನಿಮಾ ಅನ್ನೋ ಪ್ರೀತಿ ಇರುತ್ತೆ. ಅದು ಮಗುವಿನಮೇಲೆ ತಾಯಿಗೆ ಇರೋ ಪ್ರೀತಿ. [ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]


Movie 'Raate' get out of director AP Arjun's hand

ಅದ್ರಲ್ಲೂ ರಿಲೀಸ್ ಹಿಂದಿನ ಪ್ರೆಸ್ ಮೀಟ್ ನ ನಿರ್ದೇಶಕರು ತಪ್ಪಿಸಿಕೊಳ್ಳೋದೇ ಇಲ್ಲ. ಯಾಕಂದ್ರೆ ಚಿತ್ರದ ಬಗ್ಗೆ ಚಿತ್ರತಂಡ ಕೊಡೋ ಕೊನೆಯ ಮತ್ತು ನಿಖರ ಮಾಹಿತಿ ಅದಾಗಿರುತ್ತೆ. ಅದ್ರಿಂದಾನೇ ಜನರನ್ನ ಥಿಯೇಟರ್ ಕಡೆ ಸೆಳೇಯೋಕೆ ಸಾಧ್ಯ.


ಅದರಲ್ಲೂ ನಿರ್ದೇಶಕ ಇಡೀ ತಂಡದ ಬಗ್ಗೆ ಮತ್ತು ಚಿತ್ರದ ಬಗ್ಗೆ ಕೊಡಬಹುದಾದ ಸಮಗ್ರ ಮಾಹಿತಿಯನ್ನ ಚಿತ್ರತಂಡದಲ್ಲಿ ಬೇರ್ಯಾರೂ ಕೊಡೋಕೆ ಸಾಧ್ಯವಿಲ್ಲ. ಆದ್ರೆ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಅರ್ಜುನ್ ಇರಲೇ ಇಲ್ಲ. ಇದಕ್ಕೆ ಹರಿಕೃಷ್ಣ ಕೊಟ್ಟ ಕಾರಣ 'ಐರಾವತ' ಶೂಟಿಂಗ್.


Movie 'Raate' get out of director AP Arjun's hand

ಆದ್ರೆ ಒಳಗೊಳಗೇ ಅರ್ಜುನ್ ಮತ್ತು ಧನಂಜಯ್ ನಡುವೆ ನಡೆದಿರೋ ಕರಾಟೆಯನ್ನ ನಾವು ಈ ಹಿಂದೇನೇ ನಿಮ್ಮ ಮುಂದೆ ಇಟ್ಟಿದ್ವಿ. ಧನಂಜಯ್ ಇದ್ದಲ್ಲಿ ತಾನು ಬರೋದಿಲ್ಲ ಅನ್ನೋ ನಿರ್ಧಾರವನ್ನ ಅರ್ಜುನ್ ಮಾಡಿದ್ದಾರೆ ಅಂತಿದೆ ಗಾಂಧಿನಗರದ ನಂಬಲರ್ಹ ಮೂಲ. ['ರಾಟೆ' ಧನಂಜಯ್ - ಅರ್ಜುನ್ ನಡುವೆ ಕರಾಟೆ]


ಅತ್ತ ಕಡೆ ನೋಡಿದ್ರೆ 'ಐರಾವತ' ಚಿತ್ರೀಕರಣದಲ್ಲಿ ಅರ್ಜುನ್ ಒಂದೂ ಶಾಟ್ ತೆಗೆಯಲ್ಲ ಅಂತಿದೆ ದರ್ಶನ್ ಅಧಿಕೃತ ಆನ್ ಲೈನ್ ಟೀಂ 'ಡಿ' ಕಂಪೆನಿ. ಅರ್ಜುನನಿಗೆ ನೆನಪಿರಬೇಕು, ಚಿತ್ರರಂಗದಲ್ಲಿ ಈ ಎರಡು ವರ್ಷಗಳಲ್ಲೇ 10 ಬಬ್ರುವಾಹನ ಸಾಮರ್ಥ್ಯದ ನಿರ್ದೇಶಕರು ಹುಟ್ಟಿಕೊಂಡಿದ್ದಾರೆ ಅನ್ನೋದು.

English summary
Much expected Kannada movie Raate slated for release on 20th of March. But the friction between director AP Arjun and actor Dhananjay became cake not worth the candle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada