»   » ಉಪ್ಪಿ ಹುಟ್ಟುಹಬ್ಬಕ್ಕೆ 'ಮುಕುಂದ ಮುರಾರಿ' ರಿಲೀಸ್.?

ಉಪ್ಪಿ ಹುಟ್ಟುಹಬ್ಬಕ್ಕೆ 'ಮುಕುಂದ ಮುರಾರಿ' ರಿಲೀಸ್.?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದಾಗಿ ಕಾಣಿಸಿಕೊಂಡಿರುವ 'ಮುಕುಂದ ಮುರಾರಿ' ಚಿತ್ರದ ಕೆಲಸಗಳು ಭರಭರನೇ ಸಾಗುತ್ತಿದ್ದು, ಇದೀಗ ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಚಿತ್ರತಂಡ ಬಿಜಿಯಾಗಿದೆ.

ಇನ್ನು ವಿಶೇಷವಾಗಿ, ಈ ಚಿತ್ರದಲ್ಲಿ ಒಂದಾಗಿ ತೆರೆ ಹಂಚಿಕೊಂಡಿರುವ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮದ ದಿನದಂದು, ಈ ಚಿತ್ರದ ಆಡಿಯೋ ಮತ್ತು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಲಕ್ಷಾನುಗಟ್ಟಲೇ ಬೆಲೆಬಾಳುವ ಸ್ಟೈಲಿಷ್ ಬೈಕ್ ನಲ್ಲಿ ಕಿಚ್ಚನ ಜಾಲಿ ರೈಡ್]


'Mukunda Murrari' audion on September 2nd and movie release on September 18th

ಅಂದಹಾಗೆ ಚಿತ್ರದ ಬಹುತೇಕ ಕೆಲಸಗಳು ಈಗಾಗಲೇ ಮುಗಿದಿದ್ದು, ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸೆಪ್ಟೆಂಬರ್ 2, ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು 'ಮುಕುಂದ ಮುರಾರಿ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ನಿರ್ದೇಶಕ ನಂದಕಿಶೋರ್ ಪ್ಲ್ಯಾನ್ ಮಾಡಿದ್ದಾರೆ.


ತದನಂತರ ಸೆಪ್ಟೆಂಬರ್ 18, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆ ಮಾಡಲು ನಂದಕಿಶೋರ್ ಅವರು ನಿರ್ಧಾರ ತಳೆದಿದ್ದಾರೆ. ಹಿಂದಿ ನಟ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರು ಕಾಣಿಸಿಕೊಂಡಿದ್ದ 'ಓ ಮೈ ಗಾಡ್' ಹಿಂದಿ ಚಿತ್ರದ ರೀಮೇಕ್ ಆಗಿರುವ 'ಮುಕುಂದ ಮುರಾರಿ' ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕಥೆ.['ಓ ಮೈ ಗಾಡ್' ಕಿಚ್ಚ-ಉಪ್ಪಿ ಚಿತ್ರದ ಟೈಟಲ್ ಮತ್ತೆ ಬದಲಾಯಿತಾ?]


'Mukunda Murrari' audion on September 2nd and movie release on September 18th

ಈ ಚಿತ್ರದಲ್ಲಿ ನಟ ಉಪೇಂದ್ರ ಅವರ ಪತ್ನಿಯ ಪಾತ್ರದಲ್ಲಿ ನಟಿ ನಿಖಿತಾ ತುಕ್ರಾಲ್ ಅವರು ಮಿಂಚಿದ್ದು, ಪರಮಾತ್ಮ ಶ್ರೀಕೃಷ್ಣನ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಿಸಿದ್ದಾರೆ. ನಿರ್ಮಾಪಕರಾದ ಜಯಶ್ರೀ ದೇವಿ ಮತ್ತು ಎಂ.ಎನ್ ಕುಮಾರ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.[ರಿಯಲ್ ಉಪ್ಪಿ ಹೆಂಡ್ತಿ ಆಗ್ತಾರಂತೆ ನಿಖಿತಾ ತುಕ್ರಾಲ್]


'Mukunda Murrari' audion on September 2nd and movie release on September 18th

ಅಂತೂ ಇಂತೂ 'ಕಲ್ಪನಾ 2' ಮತ್ತು 'ಕೋಟಿಗೊಬ್ಬ 2' ಬಂದು ಹೋದ ಬೆನ್ನಲ್ಲೇ, ಮತ್ತೆ ಮುಂದಿನ ತಿಂಗಳು ಸುದೀಪ್ ಮತ್ತು ಉಪ್ಪಿಯನ್ನು ತೆರೆಯ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆ.

English summary
Kannada Actor Upendra and Kannada Actor Sudeep starrer Kannada Movie 'Mukunda Murari'is almost complete and the team of the film is planning to release the audio on Sudeep's birthday (September 02nd), while the film's release is scheduled for Upendra's birthday (September 18th). The movie is directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada