For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.!

  By Harshitha
  |

  ಸ್ವಲ್ಪ ಗ್ಯಾಪ್ ತೆಗೆದುಕೊಂಡರೂ, ನಿರ್ಮಾಪಕ ಮುನಿರತ್ನ ಸಿನಿಮಾ ಮಾಡಲು ಹೊರಟರೆ ಕಮ್ಮಿ ಬಜೆಟ್ ನಲ್ಲಂತೂ ಬೇಕಾಬಿಟ್ಟಿ ಚಿತ್ರ ಮಾಡಿ ಮುಗಿಸುವುದಿಲ್ಲ. ನಿಧಾನ ಆದರೂ ಪರ್ವಾಗಿಲ್ಲ ಎಂದು ಬಿಗ್ ಬಜೆಟ್ ಚಿತ್ರಕ್ಕೆ ಮುನ್ನುಡಿ ಬರೆಯುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಅಂದ್ರೆ 'ರಕ್ತ ಕಣ್ಣೀರು' ಮತ್ತು 'ಕಠಾರಿವೀರ ಸುರಸುಂದರಾಂಗಿ'.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

  ವರ್ಷಗಳ ಬಳಿಕ ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಮುನಿರತ್ನ 'ಕುರುಕ್ಷೇತ್ರ' ಚಿತ್ರಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ನಟರನ್ನೆಲ್ಲ ಒಟ್ಟಿಗೆ ಸೇರಿಸುವ ಪ್ರಯತ್ನದಲ್ಲಿರುವ ನಿರ್ಮಾಪಕ ಮುನಿರತ್ನ ರವರಿಗೆ ಒಂದು ದೊಡ್ಡ ಆಸೆ ಇದೆ. ಅದನ್ನ ಕಿಚ್ಚ ಸುದೀಪ್ ನೆರವೇರಿಸಬೇಕಿದೆ.

  ನಿರ್ಮಾಪಕ ಮುನಿರತ್ನಗಿರುವ ಆಸೆ ಏನು.?

  ನಿರ್ಮಾಪಕ ಮುನಿರತ್ನಗಿರುವ ಆಸೆ ಏನು.?

  'ಕುರುಕ್ಷೇತ್ರ' ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿರುವ ನಿರ್ಮಾಪಕ ಮುನಿರತ್ನ ರವರಿಗೆ ಕಿಚ್ಚ ಸುದೀಪ್ 'ಕರ್ಣ'ನ ಪಾತ್ರ ನಿರ್ವಹಿಸಬೇಕು ಎಂಬುದೇ ಬಹುದೊಡ್ಡ ಆಸೆ.['ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ]

  ಕಿಚ್ಚ ಸುದೀಪ್ 'ತಥಾಸ್ತು' ಎನ್ನುತ್ತಾರಾ.?

  ಕಿಚ್ಚ ಸುದೀಪ್ 'ತಥಾಸ್ತು' ಎನ್ನುತ್ತಾರಾ.?

  ಮುನಿರತ್ನ ರವರ ಆಸೆಯನ್ನ ಕಿಚ್ಚ ಸುದೀಪ್ ನೆರವೇರಿಸುತ್ತಾರಾ.? 'ಕರ್ಣ'ನ ಪಾತ್ರ ನಿರ್ವಹಿಸಲು ಸುದೀಪ್ 'ತಥಾಸ್ತು' ಎನ್ನುತ್ತಾರಾ.? ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ. ಅದಕ್ಕೂ ಒಂದು ಕಾರಣ ಇದೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

  ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'

  ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'

  ಮೆಗಾ ಬಜೆಟ್ ಸಿನಿಮಾ 'ಕುರುಕ್ಷೇತ್ರ' ಹೇಳಿ ಕೇಳಿ ದರ್ಶನ್ ರವರ 50ನೇ ಚಿತ್ರ. ಈ ಸಿನಿಮಾದಲ್ಲಿ ದುರ್ಯೋಧನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಂಚಲಿದ್ದಾರೆ. ಹೀಗಿರುವಾಗ ಇದೇ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಅನೇಕರ ತಲೆಯಲ್ಲಿ ಕಾಡುತ್ತಿದೆ.

  ಮೊನ್ನೆಯಷ್ಟೇ 'ಸೂರ್ಯ-ಚಂದ್ರ' ಕಥೆ ಹೇಳಿದ್ದ ಸುದೀಪ್.!

  ಮೊನ್ನೆಯಷ್ಟೇ 'ಸೂರ್ಯ-ಚಂದ್ರ' ಕಥೆ ಹೇಳಿದ್ದ ಸುದೀಪ್.!

  ''ಸುದೀಪ್-ದರ್ಶನ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನಮ್ಮ ಆಸೆ. ಆ ಆಸೆ ಈಡೇರುತ್ತಾ.?'' ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಸುದೀಪ್ ''ಸೂರ್ಯ-ಚಂದ್ರ'' ಕಥೆ ಹೇಳಿದ್ರು.![ಇದನ್ನ ಸುದೀಪ್ ರವರಿಂದ ಯಾರೂ ನಿರೀಕ್ಷಿಸಿರಲಿಲ್ಲ.! ಅದು ದರ್ಶನ್ ಕುರಿತಾಗಿ.!]

  ಏನದು 'ಸೂರ್ಯ-ಚಂದ್ರ' ಕಥೆ

  ಏನದು 'ಸೂರ್ಯ-ಚಂದ್ರ' ಕಥೆ

  ''ನಾನು ಚಿಕ್ಕವನಾಗಿ ಇರುವಾಗ, ನನಗೆ ನನ್ನ ಅಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನೇ ಕೇಳಿದ್ರೂ ನನ್ನ ತಾಯಿ ನನಗೆ ಕೊಡಿಸುತ್ತಿದ್ದರು. ನನ್ನ ತಾಯಿಗೆ ನಾನು ಒಮ್ಮೆ ಕೇಳಿದೆ, ''ಅಮ್ಮ... ಸೂರ್ಯ, ಚಂದ್ರ ಯಾಕೆ ಒಟ್ಟಾಗಿ ಕಾಣಿಸಿಕೊಳ್ಳುವುದಿಲ್ಲ'' ಅಂತ. ಆಗ ನನ್ನ ತಾಯಿ ಹೇಳಿದ್ರು, ''ಏನ್ ಮಾಡ್ಲಿ ಕಂದ.. ಸೂರ್ಯ ಬಂದಾಗ ಬೆಳಕಾಗುತ್ತೆ. ಚಂದ್ರ ಬಂದಾಗ ಕತ್ತಲಾಗುತ್ತೆ. ಅದಲ್ಲೇ ಸರಿ, ಇದಿಲ್ಲೇ ಸರಿ. ಹಾಗೇ ಬಿಟ್ಟು ಬಿಡೋಣ'' ಅಂತ ಸುದೀಪ್ ಹೇಳಿದ್ದರು.

  ಅಲ್ಲಿಗೆ....

  ಅಲ್ಲಿಗೆ....

  ಅಲ್ಲಿಗೆ, ಸುದೀಪ್-ದರ್ಶನ್ ಒಂದೇ ಸಿನಿಮಾದಲ್ಲಿ ನಟಿಸುವುದು ಡೌಟು ಎಂದು ಅನೇಕರು ಭಾವಿಸಿದ್ದಾರೆ.

  ಹಾಗಾದ್ರೆ, ಮುನಿರತ್ನ ಆಸೆ.?

  ಹಾಗಾದ್ರೆ, ಮುನಿರತ್ನ ಆಸೆ.?

  ಸುದೀಪ್ 'ಸೂರ್ಯ-ಚಂದ್ರ' ಕಥೆ ಹೇಳಿ ಇನ್ನೂ ವಾರ ಕಳೆದಿಲ್ಲ. ಅದರ ಬೆನ್ನಲ್ಲೇ ಮುನಿರತ್ನ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸುದೀಪ್ ಏನು ಹೇಳುತ್ತಾರೋ.. ಕಾದು ನೋಡಬೇಕು.

  ಮನಸ್ಸು ಬದಲಾಯಿಸಿದರೆ...

  ಮನಸ್ಸು ಬದಲಾಯಿಸಿದರೆ...

  ಒಂದ್ವೇಳೆ ಸುದೀಪ್ ಮನಸ್ಸು ಬದಲಾಯಿಸಿದರೆ, ಅಭಿಮಾನಿಗಳಿಗೆ ಇದಕ್ಕಿಂತ ಸಂತಸದ ವಿಚಾರ ಮತ್ತೊಂದಿಲ್ಲ.

  ತಾರಾಗಣ ಇನ್ನೂ ಪಕ್ಕಾ ಆಗಿಲ್ಲ.!

  ತಾರಾಗಣ ಇನ್ನೂ ಪಕ್ಕಾ ಆಗಿಲ್ಲ.!

  'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ನಟಿಸುವುದು ಪಕ್ಕಾ ಆಗಿದೆ. ಉಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ. 'ಕುರುಕ್ಷೇತ್ರ' ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ.

  English summary
  Producer Muniratna wants Kiccha Sudeep to play 'Karna' in Darshan starrer 50th movie 'Kurukshetra'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X