For Quick Alerts
  ALLOW NOTIFICATIONS  
  For Daily Alerts

  ಸ್ಯಾಮ್-ನಾಗ್ ದಾಂಪತ್ಯ ಕಲಹ: 50 ಕೋಟಿ ಪರಿಹಾರ, ಅಕ್ಟೋಬರ್ 7ಕ್ಕೆ ಘೋಷಣೆ!

  |

  ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಇವರಿಬ್ಬರ ದಾಂಪತ್ಯದಲ್ಲಿ ಕಲಹ ಉಂಟಾಗಿದ್ದು, ಡಿವೋರ್ಸ್ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ನಿಜಕ್ಕೂ ಅಘಾತ ತಂದಿದ್ದು, ಏನಾಯ್ತು ಈ ಜೋಡಿಗೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ.

  ಒಂದು ಸಮಯದಲ್ಲಿ ಈ ಇಬ್ಬರನ್ನು ನೋಡಿ, 'ವಾಹ್ ಎಂತಹ ಜೋಡಿ' ಎಂದು ಮಾತನಾಡಿಕೊಳ್ಳುತ್ತಿದ್ದವರು ಈಗ ಅವರ ದಾಂಪತ್ಯದ ಸುದ್ದಿ ಕೇಳಿ 'ಹೌದಾ' ಎಂದು ಅಚ್ಚರಿಯಿಂದ ನೋಡುವಂತಾಗಿದೆ. ಕಳೆದ ಹಲವು ದಿನಗಳಿಂದ ನಾಗ್ ಮತ್ತು ಸ್ಯಾಮ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಮಂತಾ ಒಂಟಿಯಾಗಿ ತನ್ನ ಸ್ನೇಹಿತರ ಜೊತೆ ಸುತ್ತಾಡುತ್ತಿದ್ದಾರೆ. ಆ ಕಡೆ ನಾಗಚೈತನ್ಯ ತಮ್ಮ ಸಿನಿಮಾ ಹಾಗೂ ಇನ್ನಿತರ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಇದೆಲ್ಲವೂ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿರುವುದನ್ನು ಸತ್ಯ ಎಂದು ಹೇಳುತ್ತಿದೆ.

  ನಾಗಾರ್ಜುನಗೆ ಸಮಂತಾ ಮಾಡಿದ ಟ್ವೀಟ್ ವೈರಲ್: ಕಾರಣ?ನಾಗಾರ್ಜುನಗೆ ಸಮಂತಾ ಮಾಡಿದ ಟ್ವೀಟ್ ವೈರಲ್: ಕಾರಣ?

  ಈ ಬಗ್ಗೆ ಸಮಂತಾ ಅಥವಾ ನಾಗಚೈತನ್ಯ ಯಾರೊಬ್ಬರು ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಸಮಂತಾ ಮಾತ್ರ ಪರೋಕ್ಷವಾಗಿ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎಂದೆನಿಸುತ್ತಿದೆ. ಟ್ವಿಟ್ಟರ್‌ನಲ್ಲಿ ಸರ್‌ನೇಮ್ ತೆಗೆದು ಹಾಕಿದರು. 'ಅಕ್ಕಿನೇನಿ' ಹೆಸರು ತೆಗೆದು 'ಎಸ್' ಎಂದು ಉಳಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಾಗಾರ್ಜುನ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಇತ್ತು. ಈ ಕಾರ್ಯಕ್ರಮದಲ್ಲಿಯೂ ಸ್ಯಾಮ್ ಪಾಲ್ಗೊಂಡಿಲ್ಲ.

  ಟಾಲಿವುಡ್‌ನ ಹಲವು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ ಸಮಂತಾ ಮತ್ತು ನಾಗ್ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಸಮಂತಾ ದೊಡ್ಡ ಮೊತ್ತವನ್ನು ಪರಿಹಾರವಾಗಿ ಕೇಳುತ್ತಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

  ಮಗ-ಸೊಸೆಯನ್ನು ಒಂದು ಮಾಡಲು ಹರಸಾಹಸ ಪಡುತ್ತಿದ್ದಾರಂತೆ ನಾಗಾರ್ಜುನಮಗ-ಸೊಸೆಯನ್ನು ಒಂದು ಮಾಡಲು ಹರಸಾಹಸ ಪಡುತ್ತಿದ್ದಾರಂತೆ ನಾಗಾರ್ಜುನ

  ಅಕ್ಟೋಬರ್ 7ಕ್ಕೆ ಡಿವೋರ್ಸ್ ಅಧಿಕೃತ

  ಅಕ್ಟೋಬರ್ 7ಕ್ಕೆ ಡಿವೋರ್ಸ್ ಅಧಿಕೃತ

  ತೆಲುಗು ಫಿಲ್ಮಿಬೀಟ್ (ಇಂಗ್ಲಿಷ್) ವರದಿ ಮಾಡಿರುವಂತೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಸುದ್ದಿಯನ್ನು ಅಕ್ಟೋಬರ್ 7 ರಂದು ಅಧಿಕೃತಪಡಿಸಲು ತೀರ್ಮಾನಿಸಿದ್ದಾರಂತೆ. ಏಕಂದ್ರೆ, ಆ ದಿನ ನಾಗ್-ಸ್ಯಾಮ್ ಮದುವೆಯಾದ ದಿನ. ಬಹುಶಃ ಅದೇ ದಿನವೇ ಡಿವೋರ್ಸ್ ಘೋಷಣೆ ಮಾಡುವ ಸಾಧ್ಯತೆ ಎಂದು ಹೇಳಲಾಗಿದೆ. 2017ರ ಅಕ್ಟೋಬರ್ 7 ರಂದು ಸ್ಯಾಮ್ ಮತ್ತು ನಾಗ್ ವೈವಾಹಿಕ ಬದುಕು ಆರಂಭಿಸಿದ್ದರು. ಈಗ ಮೂರು ವರ್ಷ ತುಂಬಿದೆ.

  ಬೋಲ್ಡ್ ಆಗಿದ್ದು ಬೇಸರ ಉಂಟು ಮಾಡಿದೆ

  ಬೋಲ್ಡ್ ಆಗಿದ್ದು ಬೇಸರ ಉಂಟು ಮಾಡಿದೆ

  ಇಬ್ಬರ ನಡುವಿನ ಮನಸ್ತಾಪಕ್ಕೆ ನಿಜವಾದ ಕಾರಣ ಏನು ಎನ್ನುವುದು ತಿಳಿದಿಲ್ಲ. ಆದರೆ, ಇ-ಟೈಮ್ಸ್ ವರದಿಯಂತೆ ಇತ್ತೀಚಿನ ದಿನಗಳಲ್ಲಿ ಸಮಂತಾ ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುವುದು ನಾಗ್ ಕುಟುಂಬಕ್ಕೆ ಮುಜುಗರ ಉಂಟು ಮಾಡಿದೆಯಂತೆ. ಫೋಟೋಶೂಟ್ ಮತ್ತು ಸಿನಿಮಾಗಳಲ್ಲಿಯೂ ಸಮಂತಾ ಹಾಟ್ ಹಾಗೂ ಬೋಲ್ಡ್ ಆಗಿ ನಟಿಸುತ್ತಿರುವುದು ಕುಟುಂಬಕ್ಕೆ ಇರುಸು ಮುರುಸು ಉಂಟು ಮಾಡಿದೆ ಎನ್ನಲಾಗಿದೆ.

  50 ಕೋಟಿ ಪರಿಹಾರ ಪಡೆದ ಸ್ಯಾಮ್

  50 ಕೋಟಿ ಪರಿಹಾರ ಪಡೆದ ಸ್ಯಾಮ್

  ಸದ್ಯದ ಮಾಹಿತಿ ಪ್ರಕಾರ, ನಾಗ್ ಜೊತೆಗಿನ ದಾಂಪತ್ಯ ಕೊನೆಗೊಳಿಸಿಕೊಳ್ಳಲು 50 ಕೋಟಿ ಪರಿಹಾರ ಪಡೆದುಕೊಂಡಿದ್ದಾರಂತೆ. ಡಿವೋರ್ಸ್‌ಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಮೂರು ಅಥವಾ ನಾಲ್ಕು ತಿಂಗಳಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಈ ಸಂಬಂಧ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಹಲವು ಬಾರಿ ಇಬ್ಬರಿಗೂ ಸಲಹೆ ನೀಡಲಾಗಿದೆಯಂತೆ.

  'ಲವ್ ಸ್ಟೋರಿ' ಬಿಡುಗಡೆ

  'ಲವ್ ಸ್ಟೋರಿ' ಬಿಡುಗಡೆ

  ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾ ಇದೇ ತಿಂಗಳು 24 ರಂದು ತೆರೆಗೆ ಬರ್ತಿದೆ. 'ಫಿದಾ' ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿರುವ ಈ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದ್ದು, ಬಿಡುಗಡೆಗೂ ಮುಂಚೆಯೇ ಮೋಡಿ ಮಾಡುತ್ತಿದೆ. ಇದರ ಜೊತೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ನಾಗಾರ್ಜುನ ಜೊತೆ ಬಂಗಾರರಾಜು, ಥ್ಯಾಂಕ್ ಯೂ ಎನ್ನುವ ಸಿನಿಮಾವೊಂದರಲ್ಲಿಯೂ ನಾಗ್ ನಟಿಸುತ್ತಿದ್ದಾರೆ.

  ಇನ್ನು ಸಮಂತಾ ತೆಲುಗಿನಲ್ಲಿ ಶಕುಂತಲಂ ಎನ್ನುವ ಚಿತ್ರ ಮಾಡ್ತಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ನಟಿಸುತ್ತಿರುವ ತಮಿಳು ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

  English summary
  Telugu actor Naga chaitanya and samantha to announce their divorce on october 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X