»   » ಅಭಿಮಾನಿಗಳ ಹುಚ್ಚು ಪ್ರೀತಿಗೆ ಬೆಚ್ಚಿಬಿದ್ದಳು ನಮಿತಾ!

ಅಭಿಮಾನಿಗಳ ಹುಚ್ಚು ಪ್ರೀತಿಗೆ ಬೆಚ್ಚಿಬಿದ್ದಳು ನಮಿತಾ!

Posted By: Staff
Subscribe to Filmibeat Kannada


ರವಿಚಂದ್ರನ್ ಜೊತೆ 'ನೀಲಕಂಠ'ಚಿತ್ರದಲ್ಲಿ ನಮಿತಾ ಕಾಣಿಸಿಕೊಂಡ ಸಂಗತಿ ಪಡ್ಡೆಗಳಿಗೆ ಚೆನ್ನಾಗಿ ನೆನಪಿದೆ. ಈ ದಕ್ಷಿಣ ಭಾರತದ ಶೃಂಗಾರ ಪ್ರವೀಣೆಯನ್ನು ಅಭಿಮಾನಿಗಳು ಸುತ್ತುವರಿದು, ಮತ್ತೆ ಗೋಳು ಹೊಯ್ದುಕೊಂಡಿದ್ದಾರೆ. ಹುಚ್ಚು ಅಭಿಮಾನಿಗಳ ಪ್ರೀತಿಗೆ ಬೆಚ್ಚಿದ ನಮಿತಾ, ಭಯದಿಂದ ಕೂಗಿದ್ದಾಳೆ!

ಇದೆಲ್ಲಾ ನಡೆದದ್ದು ನಮ್ಮ ಬೆಂಗಳೂರು ವಿಮಾನ ನಿಲ್ದಾಣದಲ್ಲೆ. ಗುರುವಾರ (ಸೆ.20) ಈಯಮ್ಮ ವಿಮಾನ ಇಳಿದು ಬರುತ್ತಿರಬೇಕಾದರೆ, ಅಲ್ಲೆ ಇದ್ದ ಅಭಿಮಾನಿಗಳಿಗೆ ಶಾನೇ ಅಭಿಮಾನ ಉಕ್ಕಿ ಹರಿಯಿತು! ತಮ್ಮ ನೆಚ್ಚಿನ ತಾರೆಯ ಅಭಿನಯವನ್ನು ಪ್ರಶಂಸಿಸಿ ಬೆನ್ನು ತಟ್ಟಲು ಮುಗಿಬಿದ್ದರು. ಇದನ್ನು ಕಂಡು ಹೌಹಾರಿದ ನಮಿತಾ, ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ರಕ್ಷಣೆಗೆ ಬರುವಂತೆ ಕೂಗು ಹಾಕಿದರು. ಆನಂತರ ಅವರು ಬಂದು ಸುತ್ತ ನಿಂತರು. ಪೊಲೀಸ್ ಗೋಡೆ ಮರೆಯಲ್ಲಿ ನಮಿತಾ ಉಸ್ಸಪ್ಪಾ ಅಂದರು!

ಎಲ್ಲಾ ಆದ ಮೇಲೆ ಪೋಲೀಸರು ಬರುವ ರೀತಿ, ಇಲ್ಲಿ ಸಿನಿಮಾ ಸಿಬ್ಬಂದಿ ಬಂದರು. ಅವರನ್ನು ಹಿಗ್ಗಾಮುಗ್ಗಾ ಬೈದ ನಮಿತಾ ಕೋಪ ತಣ್ಣಗಾದ ನಂತರ ಚಿತ್ರೀಕರಣಕ್ಕೆ ಅಣಿಯಾದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada