»   » ವಿಚ್ಛೇದಿತೆಗೆ ಗುಟ್ಟಾಗಿ ತಾಳಿಭಾಗ್ಯ ಕಲ್ಪಿಸಿದ ನಟರತ್ನ

ವಿಚ್ಛೇದಿತೆಗೆ ಗುಟ್ಟಾಗಿ ತಾಳಿಭಾಗ್ಯ ಕಲ್ಪಿಸಿದ ನಟರತ್ನ

By: ರವಿಕಿಶೋರ್
Subscribe to Filmibeat Kannada
Actor Tarakaratna
ಎನ್ಟಿಆರ್ ಮೊಮ್ಮಗ ಹಾಗೂ ನಟ ಜೂನಿಯರ್ ಎನ್ಟಿಆರ್ ಗಾರಿ ಸಹೋದರ ನಂದಮೂರಿ ತಾರಕರತ್ನ ಎಂಬ ನಟ ವಿಚ್ಛೇದಿತ ಮಹಿಳೆಯೊಬ್ಬರಿಗೆ ತಾಳಿಭಾಗ್ಯ ಕಲ್ಪಿಸಿದ್ದಾರೆ. ಹೈದರಾಬಾದಿನ ಹೊರವಲಯದಲ್ಲಿರುವ ಸಂಘಿ ದೇವಾಲಯದಲ್ಲಿ ಇವರಿಬ್ಬರ ಮದುವೆ ರಹಸ್ಯವಾಗಿ ನಡೆದಿದೆ.

ಈ ವಿವಾಹಕ್ಕೆ ತಾರಕರತ್ನ ಕುಟುಂಬಿಕರು ಯಾರೂ ಬಂದು ಆಶೀರ್ವದಿಸಿಲ್ಲ. ಕೇವಲ ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಅನಂತಪುರಂ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿ ಅಲೇಖ್ಯಾ ಅವರ ಕೈಹಿಡಿದಿದ್ದಾರೆ ತಾರಕರತ್ನ.

ಪ್ರಸ್ತುತ ಈಕೆ ಹೈದರಾಬಾದಿನಲ್ಲೇ ನೆಲೆಸಿದ್ದಾರೆ. ಇವರಿಬ್ಬರೂ ಸುದೀರ್ಘ ಸಮಯದಿಂದ ಒಬ್ಬರನ್ನು ಪ್ರೀತಿಸಿಕೊಳ್ಳುತ್ತಿದ್ದರಂತೆ. ತಾರಕರತ್ನ ಮುಖ್ಯಭೂಮಿಕೆಯಲ್ಲಿದ್ದ 'ನಂದೀಶ್ವರಡು' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು ಎನ್ನುತ್ತವೆ ಟಾಲಿವುಡ್ ಮೂಲಗಳು.

'ಒಕಟೋ ನಂಬರ್ ಕುರ್ರೋಡು' ಎಂಬ ಚಿತ್ರದ ಮೂಲಕ ತೆಲುಗು ಬೆಳ್ಳಿತೆರೆಗೆ ಅಡಿಯಿಟ್ಟ ಈ ನಟ ಬಳಿಕ ಒಮ್ಮೆಲೆ 9 ಚಿತ್ರಗಳಿಗೆ ಸಹಿ ಹಾಕಿ ಹೊಸ ದಾಖಲೆ ನಿರ್ಮಿಸಿದ್ದರು. ಈತನ ತಿಕ್ಕಲಾಟ ನೋಡಿದ ಪ್ರೇಕ್ಷಕರು ಮೂಲೆಗೆ ತಳ್ಳಿದ್ದರು. ಈತ ಅಭಿನಯಿಸಿದ ಯಾವೊಂದು ಚಿತ್ರವೂ ಬಾಕ್ಸಾಫೀಸರಲ್ಲಿ ಗಟ್ಟಿಯಾಗಿ ಕಚ್ಚಿಕೊಳ್ಳದೆ ಎಲ್ಲವೂ ತೋಪೆದ್ದು ಹೋಗಿದ್ದವು.

ಎನ್ಟಿಆರ್ ಕುಟುಂಬದ ಕುಡಿಗಳಾದ ಬಾಲಕೃಷ್ಣ, ಹರಿಕೃಷ್ಣ, ನಂದಮೂರಿ ಕಲ್ಯಾಣರಾಮ್, ಜೂ.ಎನ್ಟಿಆರ್ ಇವರೆಲ್ಲಾ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ತಾರಕರತ್ನ ಮಾತ್ರ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ಈಗ ಕುಟುಂಬಿಕರ ಕಣ್ಣು ತಪ್ಪಿಸಿ ಗುಟ್ಟಾಗಿ ಮದುವೆಯಾಗಿದ್ದಾನೆ. (ಏಜೆನ್ಸೀಸ್)

English summary
Tarakaratna Nandamuri the grandson of Veteran Telugu actor N.T. Rama Rao has secretly married his girl friend. His marriage was kept very secretly with limited no of invitees (mostly his well-wishers) in Sanghi Temple at Hyderabad with his girlfriend Alekheya who tends to be niece of Nellore Telugu Desam’s woman leader.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada