For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ 'ಪವಿತ್ರ ಪ್ರೇಮಕಥೆ'? ನಾಯಕ- ನಾಯಕಿಯಾಗಿ ನರೇಶ್- ಪವಿತ್ರಾ ಲೋಕೇಶ್!

  |

  ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ವೈಯಕ್ತಿಕ ವಿಚಾರ ಹಾದಿ ರಂಪ ಬೀದಿ ರಂಪ ಆಗಿದ್ದು ಗೊತ್ತೇಯಿದೆ. ಇದೀಗ ಈ ಜೋಡಿ ಒಂದೇ ಸಿನಿಮಾಗಳಲ್ಲಿ ಹೀರೊ- ಹೀರೊಯಿನ್ ಆಗಿ ನಟಿಸೋಕೆ ಮುಂದಾಗಿದ್ದಾರೆ. ತಮ್ಮದೇ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ ಎನ್ನುವ ಸುದ್ದಿ ಫಿಲ್ಮ್‌ ನಗರ್‌ನಲ್ಲಿ ಚಕ್ಕರ್ ಹೊಡೀತಿದೆ.

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರೆ. ಸಹಜೀವನ ನಡೆಸುತ್ತಿದ್ದಾರೆ ಹೀಗೆ ಇಬ್ಬರ ಬಗ್ಗೆ ಸಾಕಷ್ಟು ಸುದ್ದಿ ಕೇಳಿಬಂದಿತ್ತು. ನನ್ನ ಹಾಗೂ ನರೇಶ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ನಟಿ ಪವಿತ್ರಾ ಲೋಕೇಶ್ ಕಾರಣ ಎಂದು ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಆದರೆ ಇಬ್ಬರು ಈ ವಿಚಾರವನ್ನು ಅಲ್ಲಗೆಳೆದಿದ್ದರು. ನಾವಿಬ್ಬರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ, ಆತ್ಮೀಯ ಸ್ನೇಹಿತರು ಅಷ್ಟೆ ಎಂದು ಇಬ್ಬರು ಪ್ರತಿಕ್ರಿಯಿಸಿದ್ರು. ಇದೆಲ್ಲದರ ಬೆನ್ನಲ್ಲೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್‌ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ದೊಡ್ಡ ಚರ್ಚೆ ಹುಟ್ಟಾಕಿತ್ತು.

  "ರಾತ್ರಿಯಿಂದ ಬಹಳ ಖುಷಿ ಆಗ್ತಿದೆ": ಪವಿತ್ರಾ ಲೋಕೇಶ್ ಭುಜದ ಮೇಲೆ ಕೈಹಾಕಿ ನರೇಶ್ ವಿಡಿಯೋ

  ಠಾಣೆ ಮೆಟ್ಟಿಲನ್ನು ಏರಿದ್ದ ಈ ವಿವಾದ ಈಗ ಕೊಂಚ ತಣ್ಣಗಾಗಿದೆ. ಪವಿತ್ರಾ ಲೋಕೇಶ್ ಸದ್ಯ ಹೈದರಾಬಾದ್‌ನಲ್ಲೇ ನೆಲೆಸಿದ್ದಾರೆ. ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಈ ಜೋಡಿ ಹೊಸ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

  ನರೇಶ್- ಪವಿತ್ರಾ ಮೆಚೂರ್ಡ್ ಲವ್‌ ಸ್ಟೋರಿ

  ನರೇಶ್- ಪವಿತ್ರಾ ಮೆಚೂರ್ಡ್ ಲವ್‌ ಸ್ಟೋರಿ

  ಪವಿತ್ರಾ ಲೋಕೇಶ್ ಹಾಗೂ ನರೇಶ್ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಕಲಾವಿದರರಾಗಿ ನಟಿಸಿದ್ದಾರೆ. ಇದೀಗ ಲೀಡ್ ರೋಲ್‌ಗಳಲ್ಲಿ ನಟಿಸೋಕೆ ಹೊರಟಿದ್ದಾರೆ. ತಮ್ಮಿಬ್ಬರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಂಗತಿಗಳನ್ನೇ ಚಿತ್ರದಲ್ಲಿ ಹೇಳಲಿದ್ದಾರಂತೆ. ಪರ್ಸನಲ್, ಪ್ರೋಫೆಷನಲ್ ಲೈಫ್‌ನಲ್ಲಿ ಎದುರಿಸಿದ ಸವಾಲುಗಳನ್ನು ಸೇರಿಸಿ ಸಿನಿಮಾ ಮಾಡುತ್ತಾರಂತೆ. ಈಗಾಗಲೇ ಕಥೆ ಸಿದ್ಧವಾಗಿದ್ದು, ಅಷ್ಟಕ್ಕೂ ಏನು ನಡೀತು? ಯಾಕೆ ಈ ನಿರ್ಧಾರ ಕೈಗೊಳ್ಳಲಾಯಿತು ಎನ್ನುವುದರ ಬಗ್ಗೆ ಕ್ಲಾರಿಟಿ ನೀಡಲಿದ್ದಾರಂತೆ.

  'ಅಂದರೂ ಬಾಗುಂಡಾಲಿ' ಚಿತ್ರದಲ್ಲಿ ನಟನೆ

  'ಅಂದರೂ ಬಾಗುಂಡಾಲಿ' ಚಿತ್ರದಲ್ಲಿ ನಟನೆ

  ಇತ್ತೀಚೆಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದ 'ಅಂದರೂ ಬಾಗುಂಡಾಲಿ ಅಂದುಲೋ ನೆನುಂಡಾಲಿ' ಸಿನಿಮಾ ಓಟಿಟಿಗೆ ಬಂದಿತ್ತು. ಹಾಸ್ಯ ನಟ ಆಲಿ ಲೀಡ್‌ ರೋಲ್‌ನಲ್ಲಿ ನಟಿಸಿದ್ದ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿರಲಿಲ್ಲ. ಓಟಿಟಿಯಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದರೆ ನರೇಶ್, ಪವಿತ್ರಾ ಲೋಕೇಶ್ ಸ್ಪೆಷಲ್ ವಿಡಿಯೋ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು.

  ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ಜೋಡಿ

  ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ಜೋಡಿ

  'ಅಂದರೂ ಬಾಗುಂಡಾಲಿ ಅಂದುಲೋ ನೆನುಂಡಾಲಿ' ಚಿತ್ರದ ಸಕ್ಸಸ್ ಬಗ್ಗೆ ಮಾತನಾಡುತ್ತಾ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ನಟಿ ಪವಿತ್ರಾ ಭುಜದ ಮೇಲೆ ಕೈ ಹಾಕಿ ರೊಮ್ಯಾಂಟಿಕ್ ಆಗಿ ದರ್ಶನ ಕೊಟ್ಟಿದ್ದರು. ತಮ್ಮಿಬ್ಬರ ರಿಲೇಶನ್‌ಶಿಪ್‌ ಬಗ್ಗೆ ಪರೋಕ್ಷವಾಗಿ ಕ್ಲಾರಿಟಿ ಕೊಡಲು ಇಬ್ಬರು ಈ ರೀತಿ ಮಾಡಿದ್ದಾರೆ ಎನ್ನಲಾಗಿತ್ತು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.

  ಡೇಟಿಂಗ್‌ಗಾಗಿ ಇಬ್ಬರ ಮಧ್ಯೆ ಒಪ್ಪಂದ?

  ಡೇಟಿಂಗ್‌ಗಾಗಿ ಇಬ್ಬರ ಮಧ್ಯೆ ಒಪ್ಪಂದ?

  ಇನ್ನು ಪವಿತ್ರಾ ಲೋಕೇಶ್ ಹಾಗೂ ನರೇಶ್ ಡೇಟಿಂಗ್ ಬಗ್ಗೆ ಸಾಕಷ್ಟು ರೂಮರ್ಸ್ ಕೇಳಿಬಂದಿತ್ತು. ನರೇಶ್ ತಿಂಗಳಿಗೆ 25 ಲಕ್ಷ ರೂ. ಹಣವನ್ನು ಪವಿತ್ರಾ ಲೋಕೇಶ್‌ಗೆ ನೀಡುತ್ತಿದ್ದಾರೆ, ಒಂದು ವೇಳೆ ಪವಿತ್ರಾ ಲೋಕೇಶ್‌ಗೆ ಕೈ ಕೊಟ್ಟರೆ 50 ಕೋಟಿ ರೂ. ನೀಡಲು ಒಪ್ಪಂದ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಕೆಲವರು ಇದೆಂತಹ ಡೇಟಿಂಗ್ ಒಪ್ಪಂದ ಎಂದು ಶಾಕ್ ಆಗಿದ್ದರು. ಸದ್ಯ ಹೊಸ ಸಿನಿಮಾದಲ್ಲಿ ಈ ಬಗ್ಗೆ ಚರ್ಚೆಸುತ್ತಾರಾ ಕಾದು ನೋಡಬೇಕು.

  English summary
  Naresh and Pavithra Lokesh Doing A film Together Based on their Personal Lives and Bonding. Naresh & Pavitra Lokesh to act as hero And heroine. Know more.
  Sunday, November 20, 2022, 12:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X