»   » ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?

ಅರೆ.. ನಟಿ ನಯನತಾರಾ ಹೀಗ್ಯಾಕೆ ಹೇಳಿದ್ರು.? ಯಾರು 'ಆ' ಮನ್ಮಥ.?

Posted By:
Subscribe to Filmibeat Kannada

ನಟ, ನೃತ್ಯ ಸಂಯೋಜಕ, ನಿರ್ದೇಶಕ ಪ್ರಭುದೇವ ಜೊತೆಗಿನ ಪ್ರೀತಿ ಮುರಿದು ಬಿದ್ಮೇಲೆ, ಮರಳಿ ಬಣ್ಣದ ಬದುಕಿನಲ್ಲಿ ನಟಿ ನಯನತಾರಾ ತಲ್ಲೀನರಾದರು. ಕಹಿ ಘಟನೆಯನ್ನ ಮರೆಯಲು ಭಿನ್ನ-ವಿಭಿನ್ನ ಪಾತ್ರ ಪೋಷಿಸಲು ಮುಂದಾದರು.

ಒಂಟಿಯಾಗಿದ್ದ ನಯನತಾರಾ ಬದುಕಿನಲ್ಲಿ ಇದೀಗ ಮತ್ತೆ ತಂಗಾಳಿ ಬೀಸಲಾರಂಭಿಸಿದೆ. ಒಮ್ಮೆ ಕಹಿ ಅನುಭವ ಆಗಿದ್ದರೂ, ಮತ್ತೆ ಪ್ರೀತಿಯ ಸುಳಿಯಲ್ಲಿ ನಟಿ ನಯನತಾರಾ ಸಿಲುಕಿರುವ ಹಾಗಿದೆ. ನಿರ್ದೇಶಕ ವಿಘ್ನೇಶ್ ಶಿವನ್ ರನ್ನ ನಟಿ ನಯನತಾರಾ ಲವ್ ಮಾಡ್ತಿದ್ದಾರೆ ಎಂಬ ಗುಸು ಗುಸು ಈಗ ಕೇವಲ ಗಾಸಿಪ್ ಆಗಿ ಉಳಿದಿಲ್ಲ.

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಈಗಾಗಲೇ ನ್ಯೂಯಾರ್ಕ್ ಟ್ರಿಪ್ ಕೂಡ ಮುಗಿಸಿಕೊಂಡು ಬಂದಿದ್ದಾರೆ. ಒಟ್ಟಿಗೆ ಹಾಲಿಡೇ ಟೂರ್ ಮಾಡುತ್ತಿರುವ ಇವರಿಬ್ಬರ ಮಧ್ಯೆ ಏನೋ ಇದೆ ಅಂತ ಮಾತನಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಹೀಗಿರುವಾಗಲೇ, ತಾನು ಮದುವೆ ಆಗುವ ರಾಜಕುಮಾರನ ಬಗ್ಗೆ ನಟಿ ನಯನತಾರಾ ಮಾತನಾಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ನಯನತಾರಾ ಮಾತು

ಇತ್ತೀಚೆಗಷ್ಟೇ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ನಟಿ ನಯನತಾರಾ ಭಾಗವಹಿಸಿದ್ದರು. ಮನರಂಜನಾ ಜಗತ್ತಿನಲ್ಲಿ ತಮ್ಮ ಸೇವೆಯನ್ನ ಪರಿಗಣಿಸಿ ನೀಡಲಾದ ಪ್ರಶಸ್ತಿಯನ್ನು ಸ್ವೀಕರಿಸಿದ ನಟಿ ನಯನತಾರಾ ವೇದಿಕೆ ಮೇಲೆ ಕೆಲ ಮಾತುಗಳನ್ನಾಡಿದರು.

ಚಿತ್ರಗಳು: ನಟಿ ನಯನತಾರಾ ನ್ಯೂಯಾರ್ಕ್ ಗೆ ಹಾರಿದ ಗುಟ್ಟು ರಟ್ಟು.!

ನಯನತಾರಾ ಹೇಳಿದ್ದೇನು.?

ಪ್ರಶಸ್ತಿಯನ್ನು ಸ್ವೀಕರಿಸಿದ ಮೇಲೆ, ''ಪ್ರತಿ ಹೆಜ್ಜೆಯಲ್ಲೂ ನನಗೆ ಸಪೋರ್ಟ್ ಮಾಡಿದ ನನ್ನ ತಾಯಿ, ತಂದೆ, ಸಹೋದರ ಹಾಗೂ ನಾನು ಮದುವೆ ಆಗುವ ಹುಡುಗ (ಫಿಯಾನ್ಸೆ)ನಿಗೆ ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ'' ಎಂದು ನಯನತಾರಾ ಹೇಳಿದರು.

ನಯನತಾರಾ ಮದುವೆ ಆಗುವ ಹುಡುಗ ಯಾರು.?

''ನನ್ನ ಫಿಯಾನ್ಸೆಗೆ ಧನ್ಯವಾದ ಹೇಳುತ್ತೇನೆ'' ಎಂದು ನಯನತಾರಾ ಹೇಳಿದರೆ ಹೊರತು, ತಾನು ಮದುವೆ ಆಗುವ ಗಂಡು ಯಾರು ಎಂಬ ಗುಟ್ಟನ್ನ ನಯನತಾರಾ ಬಿಟ್ಟುಕೊಟ್ಟಿಲ್ಲ. ಆದ್ರೆ, ನಿರ್ದೇಶಕ ವಿಘ್ನೇಶ್ ಶಿವನ್ ರನ್ನೇ ನಯನತಾರಾ ಮದುವೆ ಆಗುತ್ತಾರೆ ಎಂಬ ಊಹಾಪೋಹ ಸಿನಿ ಲೋಕದಲ್ಲಿ ಶುರು ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ತುಂಬಿ ತುಳುಕುತ್ತಿರುವ ಫೋಟೋಗಳು

ತಾವಿಬ್ಬರು ಪ್ರೀತಿ ಮಾಡುತ್ತಿರುವ ಬಗ್ಗೆ ನಯನತಾರಾ ಆಗಲಿ, ವಿಘ್ನೇಶ್ ಶಿವನ್ ಆಗಲಿ ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಆದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇಬ್ಬರ ಫೋಟೋಗಳು ತುಂಬಿ ತುಳುಕುತ್ತಿವೆ.

ಸದ್ಯದಲ್ಲೇ ಮದುವೆ.?

ಗಾಸಿಪ್ ಪಂಡಿತರ ಪ್ರಕಾರ, ಸದ್ಯದಲ್ಲೇ ನಯನತಾರಾ-ವಿಘ್ನೇಶ್ ಶಿವನ್ ಮದುವೆ ನಡೆಯಲಿದೆ.

English summary
Actress Nayanatara thanked her fiance, at a recent Awards show. Does this mean marriage is on the cards.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X