»   » ಸ್ಯಾಂಡಲ್ ವುಡ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರಾ ಮಲ್ಲು ನಟಿ ನಜ್ರಿಯಾ?

ಸ್ಯಾಂಡಲ್ ವುಡ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರಾ ಮಲ್ಲು ನಟಿ ನಜ್ರಿಯಾ?

Posted By:
Subscribe to Filmibeat Kannada
ನಟಿ ನಜ್ರಿಯಾ ಸ್ಯಾಂಡಲ್ ವುಡ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರಾ ? | Filmibeat Kannada

ಮಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಹಿಟ್ ಸಿನಿಮಾಗಳನ್ನು ನೀಡಿರುವ, ಅದಾಗಲೇ ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗಿರುವ ನಜ್ರಿಯಾ ನಜೀಂ ಸದ್ಯದಲ್ಲೇ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರಂತೆ.

ನಜ್ರಿಯಾ ನಜೀಂ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಹೊರಟಿರುವುದು ಮಾಲಿವುಡ್ ನಲ್ಲೋ, ಕಾಲಿವುಡ್ ನಲ್ಲೋ ಅಲ್ಲ. ಬದಲಾಗಿ ಸ್ಯಾಂಡಲ್ ವುಡ್ ನಲ್ಲಿ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ.

ನಜ್ರಿಯಾ ನಜೀಂ ರವರನ್ನ ಸ್ಯಾಂಡಲ್ ವುಡ್ ಗೆ ಕರೆತರಲು ಮನಸ್ಸು ಮಾಡಿರುವುದು ಆರ್.ವೆಂಕಟೇಶ್ ಬಾಬು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ನಜ್ರಿಯಾ ರನ್ನ ನಾಯಕಿ ಮಾಡಲು ಆರ್.ವೆಂಕಟೇಶ್ ಬಾಬು ಓಡಾಡುತ್ತಿದ್ದಾರೆ. ಮುಂದೆ ಓದಿರಿ...

'ಕಿರಿಕ್ ಪಾರ್ಟಿ' ಹುಡುಗ ಹೀರೋ

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಫ್ರೆಂಡ್ಸ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಚಂದನ್ ಆಚಾರ್ ಇದೀಗ ಹೀರೋ ಪಟ್ಟಕ್ಕೆ ಬಡ್ತಿ ಪಡೆದಿರುವುದು ಆರ್.ವೆಂಕಟೇಶ್ ಬಾಬು ನಿರ್ದೇಶನದ ಚೊಚ್ಚಲ ಚಿತ್ರದಲ್ಲಿಯೇ. ಇದೇ ಸಿನಿಮಾಗೆ ನಜ್ರಿಯಾರನ್ನ ಕರೆತರುವ ಪ್ರಯತ್ನ ನಡೆಯುತ್ತಿದೆ.

'ಕಿರಿಕ್ ಪಾರ್ಟಿ' ಚಂದನ್ ಆಚಾರ್ ಈಗ ಹೀರೋ ಕಣ್ರೀ.!

ನಜ್ರಿಯಾ ಪರ್ಫೆಕ್ಟ್ ಚಾಯ್ಸ್

ಇನ್ನೂ ಹೆಸರಿಡದ ಈ ಚಿತ್ರದ ನಾಯಕಿ ಪಾತ್ರ ನಜ್ರಿಯಾಗೆ ಪಕ್ಕಾ ಪರ್ಫೆಕ್ಟ್ ಆಯ್ಕೆ ಅಂತೆ. ಅದಕ್ಕೆ ಅವರನ್ನೇ ಸ್ಯಾಂಡಲ್ ವುಡ್ ಗೆ ಕರೆತರಬೇಕು ಎಂಬುದು ಆರ್.ವೆಂಕಟೇಶ್ ಬಾಬು ಬಯಕೆ.

ನಜ್ರಿಯಾಗೆ ಕಥೆ ಇಷ್ಟ ಆಗಿದೆ

ಈಗಾಗಲೇ ನಜ್ರಿಯಾ ಜೊತೆಗೆ ಮಾತುಕತೆ ಕೂಡ ಮಾಡಲಾಗಿದ್ಯಂತೆ. ಕಥೆ ಕೇಳಿ ನಜ್ರಿಯಾ ಇಷ್ಟ ಪಟ್ಟಿದ್ದಾರೆ. ಪತಿಯ ಒಪ್ಪಿಗೆ ಪಡೆದ ಬಳಿಕ ಫೈನಲ್ ಮಾಡುವೆ ಅಂತ ನಜ್ರಿಯಾ ಹೇಳಿದ್ದಾರಂತೆ. ಸದ್ಯ ನಜ್ರಿಯಾ ರಿಂದ ಗ್ರೀನ್ ಸಿಗ್ನಲ್ ಗಾಗಿ ಚಿತ್ರತಂಡ ಕಾಯುತ್ತಿದೆ.

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರಾ ನಜ್ರಿಯಾ.?

ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಚಂದನ್ ಆಚಾರ್ ಗೆ ನಜ್ರಿಯಾ ನಾಯಕಿ ಆಗಲಿದ್ದಾರೆ. 2014 ರಲ್ಲಿ ಮಲಯಾಳಂ ನ ಖ್ಯಾತ ನಟ ಫಹಾದ್ ಫಾಸಿಲ್ ಜೊತೆ ಮದುವೆ ಆದ ನಜ್ರಿಯಾ, ಬಳಿಕ ಗಂಡ, ಮನೆ, ಮಗು ಅನ್ನೋದ್ರಲ್ಲೇ ಬಿಜಿ ಆದರು. ಈಗ ಕನ್ನಡದ ಈ ಚಿತ್ರಕ್ಕೆ ನಜ್ರಿಯಾ ಸಹಿ ಹಾಕಿದರೆ, ಸ್ಯಾಂಡಲ್ ವುಡ್ ನಿಂದ ಆಕೆಯ ಸೆಕೆಂಡ್ ಇನ್ನಿಂಗ್ಸ್ ಶುರು ಆದಂತೆ.

English summary
According to the latest reports, Mollywood Actress Nazriya Nazim to pair opposite Kannada Actor Chandan Achar in R.Venkatesh Babu's directorial debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada