»   » ಕನ್ನಡಕ್ಕೆ ಬರ್ತಾರಂತೆ ಬಾಲಿವುಡ್ ನ ಸ್ಟಾರ್ ಹೀರೋ.! ಯಾರವರು.?

ಕನ್ನಡಕ್ಕೆ ಬರ್ತಾರಂತೆ ಬಾಲಿವುಡ್ ನ ಸ್ಟಾರ್ ಹೀರೋ.! ಯಾರವರು.?

Posted By:
Subscribe to Filmibeat Kannada

ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ಜೆನಿಲಿಯಾ ಡಿಸೋಜಾ ಸೇರಿದಂತೆ ಹಲವಾರು ನಟ-ನಟಿಯರು ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟು ಚಂದನವನದ ಬೆಳ್ಳಿತೆರೆ ಮೇಲೆ ಮಿಂಚು ಹರಿಸಿದ್ದಾರೆ. 'ಬಿಗ್ ಬಿ' ಅಮಿತಾಬ್ ಬಚ್ಚನ್ ಕೂಡ 'ಅಮೃತಧಾರೆ' ಚಿತ್ರದಲ್ಲಿ ಹೀಗೆ ಬಂದು ಹಾಗೆ ಹೋಗಿದ್ದು ನಿಮಗೆ ಗೊತ್ತಿರಲೇಬೇಕು.

ಬಾಲಿವುಡ್ ನಟರ ಸ್ಯಾಂಡಲ್ ವುಡ್ ಪಯಣದ ಬಗ್ಗೆ ನಾವು ಈಗ ನೆನಪು ಮಾಡಿಕೊಳ್ಳಲು ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ಕನ್ನಡ ಚಿತ್ರವೊಂದರಲ್ಲಿ ನಟಿಸಲು ಬಾಲಿವುಡ್ ನಟರೊಬ್ಬರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಯಾರು 'ಆ' ಬಾಲಿವುಡ್ ನಟ.?

ಸ್ಯಾಂಡಲ್ ವುಡ್ ಅಂಗಳಕ್ಕೆ ಬರಲು ಒಪ್ಪಿಗೆ ನೀಡಿರುವ ಬಾಲಿವುಡ್ ನಟ ಇವರೇ.. ನೀಲ್ ನಿತಿನ್ ಮುಖೇಶ್.

ಬಾಲಿವುಡ್ ನಲ್ಲಿ ನೀಲ್ ನಿತಿನ್ ಮುಖೇಶ್

ಬಾಲಿವುಡ್ ನಲ್ಲಿ 'ಆ ದೇಖೇ ಝರಾ', 'ನ್ಯೂಯಾರ್ಕ್', 'ಪ್ಲೇಯರ್ಸ್', 'ಪ್ರೇಮ್ ರತನ್ ಧನ್ ಪಾಯೋ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನೀಲ್ ನಿತಿನ್ ಮುಖೇಶ್ ಇದೀಗ ಕನ್ನಡದಲ್ಲೂ ಅಭಿನಯಿಸಲಿದ್ದಾರಂತೆ.

ಯಾವ ಕನ್ನಡ ಚಿತ್ರದಲ್ಲಿ.?

ಕೋಮಲ್ ಅಭಿನಯದ ಮುಂದಿನ ಚಿತ್ರದಲ್ಲಿ (ಚಿತ್ರದ ಶೀರ್ಷಿಕೆ ಬಹಿರಂಗವಾಗಿಲ್ಲ) ನಟಿಸಲು ನೀಲ್ ನಿತಿನ್ ಮುಖೇಶ್ ಒಪ್ಪಿಕೊಂಡಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.[ಕೋಮಲ್ ಗೆ ಸಿಕ್ಕಾಪಟ್ಟೆ ಬೇಜಾರ್ ಆಗ್ಬಿಟಿದ್ಯಂತೆ.! ಯಾಕ್ ಗೊತ್ತಾ?]

ವಿಲನ್ ಪಾತ್ರದಲ್ಲಿ ನೀಲ್ ನಿತಿನ್ ಮುಖೇಶ್

ಕೋಮಲ್ ಅಭಿನಯದ ಚಿತ್ರದಲ್ಲಿ ಖತರ್ನಾಕ್ ಕೇಡಿ ಪಾತ್ರದಲ್ಲಿ ನೀಲ್ ನಿತಿನ್ ಮುಖೇಶ್ ಕಾಣಿಸಿಕೊಳ್ಳಲಿದ್ದಾರಂತೆ.[ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್]

ದಕ್ಷಿಣದಲ್ಲಿ ಇದು ಮೂರನೇ ಸಿನಿಮಾ.!

ಈಗಾಗಲೇ ಕಾಲಿವುಡ್ ನ 'ಕತ್ತಿ' ಚಿತ್ರದಲ್ಲಿ ವಿಲನ್ ಆಗಿ ನೀಲ್ ನಿತಿನ್ ಮುಖೇಶ್ ಅಭಿನಯಿಸಿದ್ದರು. ಸದ್ಯ ಟಾಲಿವುಡ್ ನಟ ಪ್ರಭಾಸ್ ಅಭಿನಯಿಸಲು ಒಪ್ಪಿಕೊಂಡಿರುವ 'ಸಾಹೋ' ಚಿತ್ರದಲ್ಲೂ ನೀಲ್ ನಿತನ್ ಮುಖೇಶ್ ಗೆ ವಿಲನ್ ಪಾತ್ರ ಫಿಕ್ಸ್ ಆಗಿದೆ. ಅದು ಬಿಟ್ಟರೆ, ಸ್ಯಾಂಡಲ್ ವುಡ್ ನ ಕೋಮಲ್ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್ ಆಕ್ಟ್ ಮಾಡಲು ಒಪ್ಪಿಕೊಂಡಿದ್ದಾರೆ.

English summary
Bollywood Actor Neil Nitin Mukesh is all set to make Sandalwood Debut with Kannada Actor Komal's next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada