»   » ಶೀಘ್ರವೇ ನೇಪಾಳದಲ್ಲಿ ಹೃತಿಕ್‌ ಚಿತ್ರಗಳ ಮೇಲಿನ ನಿರ್ಬಂಧ ತೆರವು

ಶೀಘ್ರವೇ ನೇಪಾಳದಲ್ಲಿ ಹೃತಿಕ್‌ ಚಿತ್ರಗಳ ಮೇಲಿನ ನಿರ್ಬಂಧ ತೆರವು

Posted By: Staff
Subscribe to Filmibeat Kannada

ಕಠ್ಮಂಡು : ಬೆಂಗಳೂರಿನಲ್ಲಿ ಮದುವೆಯಾಗಿ ಭಾರಿ ಸುದ್ದಿ ಮಾಡಿದ ಬಾಲಿವುಡ್‌ ಕನಸಿನ ರಾಜ ಹೃತಿಕ್‌ ರೋಷನ್‌ ನೇಪಾಳದಲ್ಲಿ ನಡೆದ ಗಲಭೆಗಳಿಂದ ಮತ್ತೆ ಸುದ್ದಿಯಾಗಿದ್ದರು. ನೇಪಾಳದ ಜನತೆಯ ಭಾವನಾತ್ಮಕ ಸಂಬಂಧಕ್ಕೆ ದಕ್ಕೆಯಾಗುವಂತಹ ಹೇಳಿಕೆ ನೀಡದರು ಎಂಬ ಆರೋಪದ ಮೇಲೆ ಗಲಭೆಗಳು ನಡೆದು, ಹೃತಿಕ್‌ ಚಿತ್ರಗಳ ಪ್ರದರ್ಶನವನ್ನೇ ರದ್ದು ಮಾಡಲಾಗಿತ್ತು.

ಈಗ ಹೃತಿಕ್‌ ಚಿತ್ರಗಳ ಮೇಲಿನ ನಿಷೇಧವನ್ನು ಕೈಬಿಡಲು ನೇಪಾಳ ಸರಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೃತಿಕ್‌ ಅವರು ನಟಿಸಿರುವ ಚಿತ್ರಗಳು ಇನ್ನು ಕೆಲವೇ ದಿನದಲ್ಲಿ ಮತ್ತೆ ತೆರೆಕಾಣಲಿವೆ ಎಂದು ನೇಪಾಳ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಜೈಪ್ರಕಾಶ್‌ ಗುಪ್ತಾ ಬುಧವಾರ ತಿಳಿಸಿದ್ದಾರೆ.

ಗಲಭೆ, ಗೋಲಿಬಾರ್‌ಗಳ ನಂತರ ಈಗ ನೇಪಾಳದ ಪರಿಸ್ಥಿತಿ ಬದಲಾಗಿದೆ. ಸತ್ಯ ಏನೆಂಬುದನ್ನು ನೇಪಾಳದ ಜನತೆ ಮನಗಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೃತಿಕ್‌ ಚಿತ್ರಗಳ ಮೇಲಿನ ನಿರ್ಬಂಧದ ನಿರ್ಧಾರವನ್ನು ಪುನರ್ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹೃತಿಕ್‌ ನೇಪಾಳದ ಜನತೆಯ ಮನಸ್ಸಿಗೆ ನೋವುಂಟಾಗುವಂತಹ ಹೇಳಿಕೆ ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆದ ಗಲಭೆಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.(ಸುದ್ದಿ ಸಂಸ್ಥೆಗಳು)

Read more about: bollywood, isi, bangalore, karnataka
English summary
Ban on Hrithik movies in nepal likely to be lifted
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada