For Quick Alerts
  ALLOW NOTIFICATIONS  
  For Daily Alerts

  ಸಮಂತಾ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ? ಫೋಟೊಗಳು ಫುಲ್ ವೈರಲ್

  |

  ನಟಿ ಸಮಂತಾ ಬಹಳ ದಿನಗಳ ನಂತರ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಆದರೆ ಸ್ಯಾಮ್ ಹೊಸ ಅವತಾರ ನೋಡಿದವರು ಬೆರಗಾಗಿದ್ದಾರೆ. ಚೆನ್ನೈ ಚೆಲುವೆ ನಿಜಕ್ಕೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸಮಂತಾ ಹೊಸ ಜಾಹೀರಾತು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

  ಕಳೆದ ಕೆಲ ತಿಂಗಳುಗಳಿಂದ ಸಮಂತಾ ಸೈಲೆಂಟ್ ಆಗಿಬಿಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಯಾವುದೇ ಪೋಸ್ಟ್ ಮಾಡುತ್ತಿರಲಿಲ್ಲ. ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದರ ನಡುವೆ ಸಮಂತಾ ಆರೋಗ್ಯದ ಬಗ್ಗೆ ಗಾಳಿಸುದ್ದಿ ಹರಿದಾಡಲು ಶುರುವಾಗಿತ್ತು. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ಸಮಂತಾ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಇದೆಲ್ಲಾ ಸುಳ್ಳು ಎಂದು ಆಕೆಯ ಮ್ಯಾನೇಜರ್ ಹೇಳಿದ್ದರು.

  ಸಮಂತಾ ಸ್ಯಾಂಡಲ್‌ವುಡ್ ಎಂಟ್ರಿಗೆ ಸಾಥ್ ಕೊಡಲು ಸಜ್ಜಾದ ರಕ್ಷಿತ್ ಶೆಟ್ಟಿ!ಸಮಂತಾ ಸ್ಯಾಂಡಲ್‌ವುಡ್ ಎಂಟ್ರಿಗೆ ಸಾಥ್ ಕೊಡಲು ಸಜ್ಜಾದ ರಕ್ಷಿತ್ ಶೆಟ್ಟಿ!

  ಸಮಂತಾ ಸದ್ಯ 'ಡ್ರೂಲ್ಸ್' ಎನ್ನುವ ಡಾಗ್ ಫುಡ್‌ಗೆ ಸಂಬಂಧಿಸಿದ ಜಾಹಿರಾತಿನಲ್ಲಿ ಮಿಂಚಿದ್ದಾರೆ. ಬ್ಲ್ಯಾಕ್ ಕಲರ್ ಟಾಪ್ ಹಾಗೂ ಜೀನ್ಸ್‌ನಲ್ಲಿ ಬಿಂದಾಸ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಆದರೆ ಅದರಲ್ಲಿ ಸ್ಯಾಮ್ ಲುಕ್ ನೋಡಿದವರಿಗೆ ಗೊಂದಲ ಶುರುವಾಗಿದೆ.

  ಸ್ಯಾಮ್ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಚರ್ಚೆ

  ಸ್ಯಾಮ್ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಚರ್ಚೆ

  ಜಾಹೀರಾತಿನಲ್ಲಿ ಸಮಂತಾ ಮುಖ ನೋಡಲು ಮೊದಲಿನಂತೆ ಇಲ್ಲ. ಏನೋ ವಿಭಿನ್ನವಾಗಿ ಕಾಣುತ್ತಿದೆ. ಸಮಂತಾ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ? ಅದಕ್ಕೆ ಇಷ್ಟು ದಿನ ಎಲ್ಲೂ ಕಾಣಿಸಿಕೊಳ್ಳಲಿಲ್ವಾ? ಸೋಶಿಯಲ್ ಮೀಡಿಯಾದಿಂದಲೂ ದೂರ ಇದ್ದರಾ? ಪ್ಲಾಸ್ಟಿಕ್ ಸರ್ಜರಿಗಾಗಿ ವಿದೇಶಕ್ಕೆ ಹೋಗಿದ್ದರಾ? ಎಂದು ಕೆಲವರು ಚರ್ಚೆ ನಡೆಸುತ್ತಿದ್ದಾರೆ. ಸಮಂತಾ ಹೊಸ ಜಾಹೀರಾತಿನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಹಾಟ್ ಲುಕ್‌ನಲ್ಲಿ ಸಮಂತಾ ಮೋಡಿ

  ಹಾಟ್ ಲುಕ್‌ನಲ್ಲಿ ಸಮಂತಾ ಮೋಡಿ

  ಡೈವೋರ್ಸ್ ನಂತರ ಸಮಂತಾ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. ಡೈವೋರ್ಸ್ ಬೆನ್ನಲ್ಲೇ 'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿದ್ದರು. ನಂತರ ಒಂದಷ್ಟು ಫೋಟೊಶೂಟ್‌ಗಳಲ್ಲೂ ಹಾಟ್ ಹಾಟ್ ಆಗಿ ದರ್ಶನ ಕೊಟ್ಟಿದ್ದರು. ಇದೀಗ ಹೊಸ ಜಾಹೀರಾತಿನಲ್ಲಿ ಕ್ಲಿವೇಜ್ ತೋರಿಸುತ್ತಾ ಪಡ್ಡೆ ಹುಡುಗಳ ನಿದ್ದೆ ಕದ್ದಿದ್ದಾರೆ.

  ದಿಢೀರ್ ಸಂಭಾವನೆ ಹೆಚ್ಚಿಸಿದ ಸಮಂತಾ

  ದಿಢೀರ್ ಸಂಭಾವನೆ ಹೆಚ್ಚಿಸಿದ ಸಮಂತಾ

  ನಟಿ ಸಮಂತಾ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿರುವಂತೆ ಕಾಣುತ್ತಿದೆ. ಸ್ಯಾಮ್ ನಟನೆಯ ಮಹಿಳಾ ಪ್ರಧಾನ ಸಿನಿಮಾಗಳಾಗಿ 'ಶಾಕುಂತಲಂ' ಹಾಗೂ 'ಯಶೋಧ' ಎರಡೂ ಕೂಡ 5 ಭಾಷೆಗಳಲ್ಲಿ ಪ್ರೇಕ್ಷಕರು ಮುಂದೆ ಬರ್ತಿದೆ. ಇನ್ನು ಚಿತ್ರವೊಂದಕ್ಕೆ ಸಮಂತಾ 3ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

  ಸ್ಯಾಮ್ 'ಯಶೋದಾ' ಚಿತ್ರಕ್ಕೆ ರಕ್ಷಿತ್ ಬೆಂಬಲ

  ಸ್ಯಾಮ್ 'ಯಶೋದಾ' ಚಿತ್ರಕ್ಕೆ ರಕ್ಷಿತ್ ಬೆಂಬಲ

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಯಶೋದಾ' ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ನಾಳೆ ಸಂಜೆ ಚಿತ್ರದ ಕನ್ನಡ ವರ್ಷನ್ ಟ್ರೈಲರ್ ಅನ್ನು ರಕ್ಷಿತ್ ರಿಲೀಸ್ ಮಾಡಲಿದ್ದಾರೆ. ನವೆಂಬರ್ 11ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಇದೀಗ ಸಿನಿಮಾ ಪ್ರಚಾರ ಆರಂಭಿಸಲು ಚಿತ್ರತಂಡ ಮುಂದಾಗಿದೆ. ಚಿತ್ರದಲ್ಲಿ ಸ್ಯಾಮ್ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದು ಟೀಸರ್ ಈಗಾಗಲೇ ಗಮನ ಸೆಳೆದಿದೆ.

  English summary
  Netizens Say Samantha ruth prabhu Has Undergone A Face plastic Surgery. Know More.
  Wednesday, October 26, 2022, 15:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X