»   » ದೊಡ್ಡ ಚರ್ಚೆಯಾಗ್ತಿದೆ ನಿತ್ಯಾ ಮೆನನ್ ಕೈಗೊಂಡಿರುವ ಈ ನಿರ್ಧಾರ

ದೊಡ್ಡ ಚರ್ಚೆಯಾಗ್ತಿದೆ ನಿತ್ಯಾ ಮೆನನ್ ಕೈಗೊಂಡಿರುವ ಈ ನಿರ್ಧಾರ

Posted By:
Subscribe to Filmibeat Kannada
ನಿತ್ಯ ಮೆನನ್ ಮುಂದಿನ ಚಿತ್ರಕ್ಕಾಗಿ ಮಾಡುತ್ತಿರುವ ಪಾತ್ರ ಎಲ್ಲರ ಹುಬ್ಬೇರಿಸಿದೆ | Oneindia Kannada

ಆಗೊಂದು ಈಗೊಂದು ಕನ್ನಡ ಸಿನಿಮಾ ಮಾಡುವ ಮೂಲಕ ಅಪಾರ ಕನ್ನಡ ಅಭಿಮಾನಿಗಳನ್ನ ಸಂಪಾದಸಿರುವ ನಿತ್ಯಾ ಮೆನನ್ ಗೆ ಚಾಲೆಂಜಿಂಗ್ ಪಾತ್ರಗಳು ಮಾಡೋದ್ರಲ್ಲಿ ಹೆಚ್ಚು ಆಸಕ್ತಿ. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗೋದಕ್ಕು ಸೈ, ಪ್ರಯೋಗಾತ್ಮಕ ಚಿತ್ರಗಳಲ್ಲಿ ವಿಭಿನ್ನ ಪಾತ್ರ ನಿರ್ವಹಿಸಲು ಸೈ.

ಸ್ವಲ್ಪ ಹೈಟ್ ಕಮ್ಮಿ ಎನ್ನುವುದು ಬಿಟ್ಟರೇ, ಅದನ್ನೇ ಅಸ್ತ್ರವಾಗಿ ಬಳಿಸಿಕೊಂಡಿರುವ ಈ ನಟಿ ದಕ್ಷಿಣದ ಬಹುತೇಕ ಸ್ಟಾರ್ ಗಳ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಷ್ಟೇ ಯಾಕೆ ಆರಡಿ ಕಟೌಟ್ ಕಿಚ್ಚ ಸುದೀಪ್ ಜೊತೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಹೊಸ ಹೊಸ ಪಾತ್ರಗಳ ಮೂಲಕ ಮೋಡಿ ಮಾಡುವ ನಿತ್ಯಾ ಮೆನನ್ ಈಗೊಂದು ಹೊಸ ಸಿನಿಮಾ ಮೂಲಕ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮಾಡಲಿರುವ ಪಾತ್ರ ದೊಡ್ಡ ಡಿಬೇಟ್ ಆಗ್ತಿದೆ. ಯಾವ ಪಾತ್ರ? ಯಾಕೆ ಚರ್ಚೆ ಎಂದು ಮುಂದೆ ಓದಿ......

ಸಲಿಂಗ ಪ್ರೇಮಿ ಪಾತ್ರದಲ್ಲಿ ನಿತ್ಯಾ

ಮೂಲಗಳ ಪ್ರಕಾರ ಬಹುಭಾಷಾ ನಟಿ ನಿತ್ಯಾ ಮೆನನ್ ತೆಲುಗಿನ ಹೊಸ ಚಿತ್ರದಲ್ಲಿ ಸಲಿಂಗ ಪ್ರೇಮಿ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಚಿತ್ರದ ಕಥೆ ಇಷ್ಟವಾಗಿರುವುದರಿಂದ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

'ಯು-ಟರ್ನ್' ರಿಮೇಕ್ ನಿಂದ ಹಿಂದೆಸರಿದ ಸಮಂತಾ: ಹೊಸ ನಟಿ ಸೇರ್ಪಡೆ!

ಮತ್ತೊಬ್ಬ ಸ್ಟಾರ್ ನಾಯಕಿ

ಅಂದ್ಹಾಗೆ, ನಿತ್ಯಾ ಮೆನನ್ ಅಭಿನಯಿಸಲಿರುವ ಈ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ನಾಯಕಿ ಕಾಣಿಸಿಕೊಳ್ಳಲಿದ್ದಾರಂತೆ. ಅವರದ್ದು ಕೂಡ ಅದೇ ರೀತಿಯ ಸಲಿಂಗ ಪ್ರೇಮಿ ಪಾತ್ರವಂತೆ. ಆದ್ರೆ, ಯಾರು ಎಂಬುದು ಬಹಿರಂಗವಾಗಿಲ್ಲ.

ರೊಮ್ಯಾಂಟಿಕ್ ದೃಶ್ಯಗಳಿರಲಿವೆ

ವಿಶೇಷ ಅಂದ್ರೆ, ಈ ಇಬ್ಬರು ನಟಿಯರ ನಡುವೆ ರೊಮ್ಯಾಂಟಿಕ್ ದೃಶ್ಯಗಳು ಕೂಡ ಇರಲಿದೆಯಂತೆ. ಚುಂಬಿಸುವ ದೃಶ್ಯವೂ ಇರಲಿದೆ ಎನ್ನುವುದು ಫಿಲ್ಮ ನಗರಿಯಲ್ಲಿ ಹರಿದಾಡುತ್ತಿದೆ.

'ಆ' ಚಿತ್ರದಲ್ಲಿ ನಟಿಸುತ್ತಿದ್ದಾರೆ

ಸದ್ಯ, ನಿತ್ಯಾ ಮೆನನ್ ತೆಲುಗಿನ 'ಆ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿತ್ಯಾ ಮೆನನ್ ಜೊತೆಯಲ್ಲಿ ಕಾಜಲ್ ಅಗರ್ವಾಲ್ ಮತ್ತು ರೆಜಿನಾ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹುಶಃ ನಿತ್ಯಾ ಸಲಿಂಗ ಪಾತ್ರವನ್ನ ನಿರ್ವಹಿಸುತ್ತಿರುವ ಸಿನಿಮಾ ಇದೇ ಇರಬಹುದಾ ಎಂಬ ಕುತೂಹಲ ಕಾಡುತ್ತಿದೆ. ಆದ್ರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ನಿತ್ಯಾ ಗಮನ ಸೆಳೆದ ಪಾತ್ರಗಳು

ಕನ್ನಡದ 'ಮೈನಾ' ಚಿತ್ರದಲ್ಲಿ ಅಂಗವಿಕಲೆಯಾಗಿ ನಿತ್ಯಾ ಅಭಿನಯಿಸಿದ್ದರು. ತಮ್ಮ ಅಭಿನಯದ ಮೂಲಕ ಇಡೀ ಕನ್ನಡ ಕಲಾಭಿಮಾನಿಗಳ ಮನಗೆದ್ದಿದ್ದರು. ತಮಿಳಿನ 'ಕಾಂಚನ' ಚಿತ್ರದಲ್ಲೂ ಪೊಲೀಯೋಗೆ ತುತ್ತಾಗಿದ್ದ ಪಾತ್ರದಲ್ಲಿ ಮಾಡಿ ಭೇಷ್ ಎನಿಸಿಕೊಂಡಿದ್ದರು.

'ಹೂನ ಹೂನ' ಅಂತ ಸುದೀಪ್ ಜೊತೆ ನಿತ್ಯಾ ಮೆನನ್ ಕಿಲಕಿಲ

English summary
South Actress Nithya Menon has given consent for an experimental movie. As per source, Nitya will play lesbian roli in her upcoming movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X