Don't Miss!
- Technology
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- News
ಹುಬ್ಬಳ್ಳಿ: ಆನ್ಲೈನ್ ಗೇಮ್ಸ್ನಲ್ಲಿ 11 ಕೋಟಿ ರೂ ಗೆದ್ದವನನ್ನೂ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ಆದಿಪುರುಷ್' 250 ಕೋಟಿ ರೂ. ಡೀಲ್ ನಿಜಾನಾ? ಪ್ರಭಾಸ್ ಅಭಿಮಾನಿಗಳು ದಿಲ್‌ಖುಷ್!
ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಪ್ರಭಾಸ್ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಾರೆ. ಸದ್ಯ ಯಂಗ್ ರೆಬಲ್ ಸ್ಟಾರ್ ನಟನೆಯ 'ಆದಿಪುರುಷ್' ಸಿನಿಮಾ ಡಿಜಿಟಲ್ ರೈಟ್ಸ್ 250 ಕೋಟಿ ರೂ.ಗೆ ಮಾರಾಟವಾಗಿದೆ ಅನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
ಓಂ ರಾವುತ್ ನಿರ್ದೇಶನದ ಪೌರಾಣಿಕ ಕಥಾಹಂದರದ ಸಿನಿಮಾ 'ಆದಿಪುರುಷ್'. 500 ಕೋಟಿ ರೂ. ವೆಚ್ಚದ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸೀತಾಮಾತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಟಿ-ಸೀರಿಸ್ ಹಾಗೂ ರೆಟ್ರೊಫ್ಲಿಸ್ ಸಂಸ್ಥೆಗಳು ಚಿತ್ರವನ್ನು ನಿರ್ಮಾಣ ಮಾಡಿವೆ.
ಬಾಹುಬಲಿ
ಪ್ರಭಾಸ್‌ಗೆ
ಲಂಡನ್ನಲ್ಲಿ
ಸರ್ಜರಿ;
ಅಂಥದ್ದೇನಾಯ್ತು?
'ಬಾಹುಬಲಿ' ಸರಣಿ ನಂತರ ಪ್ರಭಾಸ್ ನಟಿಸಿದ 'ಸಾಹೋ' ಹಾಗೂ 'ರಾಧ್ಯೆಶ್ಯಾಮ್' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ಪ್ರಭಾಸ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈಗಾಗಲೇ 'ಆದಿಪುರುಷ್' ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಶುರುವಾಗಿದ್ದು, ಭಾರೀ ಡೀಲ್‌ಗಳು ನಡೆಯುತ್ತಿದೆಯಂತೆ. ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಎಲ್ಲಾ ಭಾಷೆಗಳ ಒಟಿಟಿ ಹಕ್ಕುಗಳನ್ನು 250 ಕೋಟಿ ರೂ.ಗೆ ಕೊಂಡುಕೊಂಡಿದೆ ಅನ್ನುವ ಗುಸು ಗುಸು ಕೇಳಿ ಬರುತ್ತಿದೆ. ಈ ಸುದ್ದಿ ಕೇಳಿ ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ.

ಪ್ರಭಾಸ್‌ಗೆ ಬಹಳ ಸ್ಪೆಷಲ್ 'ಆದಿಪುರುಷ್'
'ಬಾಹುಬಲಿ' ರೀತಿಯ ಕಾಸ್ಟ್ಯೂಮ್ ಡ್ರಾಮಾದಲ್ಲಿ ನಟಿಸಿದ್ದ ಪ್ರಭಾಸ್, ಈಗ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದಾರೆ ಅನ್ನುವ ವಿಚಾರವೇ ಬಹಳ ಕುತೂಹಲ ಕೆರಳಿಸಿದೆ. ಶ್ರೀರಾಮನ ಪಾತ್ರದಲ್ಲಿ ನೆಚ್ಚಿನ ನಟನನ್ನು ಕಲ್ಪಿಸಿಕೊಂಡು ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
'ಬಾಹುಬಲಿ'
ಬಳಿಕ
ಮತ್ತೆ
ಒಂದಾಗ್ತಾರೆ
ಪ್ರಭಾಸ್
ಹಾಗೂ
ಅನುಷ್ಕಾ
ಶೆಟ್ಟಿ:
ಸಿನಿಮಾ
ಯಾವುದು?

ಸಖತ್ ಜೋರಾಗಿದೆ 'ಆದಿಪುರುಷ್' ಕ್ರೇಜ್
ಸಾಮಾನ್ಯವಾಗಿ ಸಿನಿಮಾಗಳ ಫಸ್ಟ್ ಲುಕ್, ಟೀಸರ್, ಟ್ರೈಲರ್ ರಿಲೀಸ್ ಆದಮೇಲೆ ಬಝ್ ಕ್ರಿಯೇಟ್ ಆಗುತ್ತದೆ. ಆದರೆ ಫಸ್ಟ್ ಲುಕ್ ಸಹ ಇನ್ನು ರಿವೀಲ್ ಆಗಿಲ್ಲ. ಆದರೂ ಸಿನಿಮಾ ಸಖತ್ ಕ್ರೇಜ್ ಹುಟ್ಟಾಕ್ಕಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇದೇ ತಿಂಗಳು ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ.

1000 ಕೋಟಿ ರೂ. ಪ್ರೀ ರಿಲೀಸ್ ಬ್ಯುಸಿನೆಸ್?
ಡಿಜಿಟಲ್ ರೈಟ್ಸ್ 250 ಕೋಟಿ ರೂಪಾಯಿ ಆದರೆ ಎಲ್ಲಾ ಭಾಷೆಗಳ ಥ್ರಿಯೇಟ್ರಿಕಲ್ ರೈಟ್ಸ್, ಆಡಿಯೋ ರೈಟ್ಸ್ ಸೇರಿ ರಿಲೀಸ್‌ಗೂ ಮೊದಲೇ ಸಿನಿಮಾ 1000 ಕೋಟಿ ರೂ. ಪ್ರೀ ರಿಲೀಸ್ ಬ್ಯುಸಿನೆಸ್ ಮಾಡುವ ಲೆಕ್ಕಾಚಾರ ನಡೀತಿದೆ. ಪ್ರಭಾಸ್ ಸಿನಿಮಾ ಆಗಿರುವುದರಿಂದ ಇದು ಕಷ್ಟವಾಗಲ್ಲ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಕೆ
'ಆದಿಪುರುಷ್'
ಮಾಮೂಲಿ
ಸಿನಿಮಾ
ಅಲ್ಲ.
ಬದಲಿಗೆ
ಮೋಷನ್
ಕ್ಯಾಪ್ಚರ್
ತಂತ್ರಜ್ಞಾನ
ಬಳಸಿ
ಓಂ
ರಾವುತ್
ಸಿನಿಮಾ
ಸೆರೆ
ಹಿಡಿದಿದ್ದಾರೆ.
ಹಾಲಿವುಡ್‌ನ
'ಸಿನ್ಬಾದ್',
'ಅವತಾರ್'
ಸಿನಿಮಾಗಳಲ್ಲಿ
ಹೆಚ್ಚು
ಕಡಿಮೆ
ಇಂಥದ್ದೇ
ತಂತ್ರಜ್ಞಾನ
ಅಳವಡಿಸಿಕೊಳ್ಳಲಾಗಿತ್ತು.
ರಾಮಾಯಣ
ಮಹಾಕಾವ್ಯದ
ಕಥೆನು
ಮೋಷನ್
ಕ್ಯಾಪ್ಚರ್‌ನಲ್ಲಿ
ತೆರೆಮೇಲೆ
ಹೇಗೆ
ಅನಾವರಣ
ಆಗುತ್ತೋ
ಅನ್ನುವ
ನಿರೀಕ್ಷೆ
ಪ್ರೇಕ್ಷಕರಲ್ಲಿದೆ.