For Quick Alerts
  ALLOW NOTIFICATIONS  
  For Daily Alerts

  'ಪಿಂಕ್' ರೀಮೇಕ್ ಗಾಗಿ ಪವನ್ ಕಲ್ಯಾಣ್ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಕಣ್ಣರಳಿಸುತ್ತೀರಾ.!

  |

  'ಅಜ್ಞಾತವಾಸಿ' ಚಿತ್ರದ ಬಳಿಕ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೊಸ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೇ 'ಪಿಂಕ್' ರೀಮೇಕ್. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ 'ಪಿಂಕ್' ಸಿನಿಮಾ ಇದೀಗ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ.

  ಹಿಂದಿಯ 'ಪಿಂಕ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದ ಪಾತ್ರಕ್ಕೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಜೀವ ತುಂಬಲಿದ್ದಾರೆ. ಲಾಯರ್ ಆಗಿ ಕಪ್ಪು ಕೋಟು ಧರಿಸಲಿರುವ ಪವನ್ ಕಲ್ಯಾಣ್, ಪಾತ್ರಕ್ಕಾಗಿ ಗಡ್ಡ ಕೂಡ ಬಿಟ್ಟಿದ್ದಾರೆ.

  ಈ ಚಿತ್ರಕ್ಕೋಸ್ಕರ ಸಕಲ ತಯಾರಿ ಮಾಡಿಕೊಂಡಿರುವ ಪವನ್ ಕಲ್ಯಾಣ್ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂತ ಗೊತ್ತಾದರೆ ಖಂಡಿತ ನೀವು ಕಣ್ಣರಳಿಸುತ್ತೀರಾ.!

  ಪವನ್ ಕಲ್ಯಾಣ್ ಸಂಭಾವನೆ ಎಷ್ಟು.?

  ಪವನ್ ಕಲ್ಯಾಣ್ ಸಂಭಾವನೆ ಎಷ್ಟು.?

  'ಪಿಂಕ್' ಚಿತ್ರದ ತೆಲುಗು ಅವತರಣಿಕೆಯಲ್ಲಿ ಅಭಿನಯಿಸಲು ಪವನ್ ಕಲ್ಯಾಣ್ ಬರೋಬ್ಬರಿ 60 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ. ಕಡಿಮೆ ದಿನಗಳ ಕಾಲ್ ಶೀಟ್ ಕೊಟ್ಟಿದ್ದರೂ, ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಂತೆ ನಟ ಪವನ್ ಕಲ್ಯಾಣ್.

  ಅತ್ಯಾಚಾರಿಗಳನ್ನು ಗಲ್ಲಿಗೇರಿಸಬಾರದು ಎಂದ ಪವನ್ ಕಲ್ಯಾಣ್ ವಿರುದ್ಧ ಭುಗಿಲೆದ್ದ ಆಕ್ರೋಶಅತ್ಯಾಚಾರಿಗಳನ್ನು ಗಲ್ಲಿಗೇರಿಸಬಾರದು ಎಂದ ಪವನ್ ಕಲ್ಯಾಣ್ ವಿರುದ್ಧ ಭುಗಿಲೆದ್ದ ಆಕ್ರೋಶ

  ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಯಬೇಕು.!

  ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಯಬೇಕು.!

  'ಪಿಂಕ್' ಚಿತ್ರದ ತೆಲುಗು ರೀಮೇಕ್ ಗಾಗಿ ಕೇವಲ 26 ದಿನಗಳ ಕಾಲ್ ಶೀಟ್ ಕೊಟ್ಟಿದ್ದಾರೆ ನಟ ಪವನ್ ಕಲ್ಯಾಣ್. ಕೋರ್ಟ್ ನಲ್ಲಿ ನಡೆಯುವ ಸನ್ನಿವೇಶಗಳ ಚಿತ್ರೀಕರಣ ಇರುವುದರಿಂದ ಫೆಬ್ರವರಿಯಲ್ಲಿ ತಮ್ಮ ಭಾಗದ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಲು ಚಿತ್ರತಂಡಕ್ಕೆ ನಟ ಪವನ್ ಕಲ್ಯಾಣ್ ಹೇಳಿದ್ದಾರೆ.

  ಆಂಧ್ರ ಪಾಲಿಟಿಕ್ಸ್: ಪವನ್ ಕಲ್ಯಾಣ್ ರಾಜಕೀಯದಲ್ಲಿ ಟ್ವಿಸ್ಟ್ಆಂಧ್ರ ಪಾಲಿಟಿಕ್ಸ್: ಪವನ್ ಕಲ್ಯಾಣ್ ರಾಜಕೀಯದಲ್ಲಿ ಟ್ವಿಸ್ಟ್

  ಬೋನಿ ಕಪೂರ್ ನಿರ್ಮಾಣ

  ಬೋನಿ ಕಪೂರ್ ನಿರ್ಮಾಣ

  'ಪಿಂಕ್' ಚಿತ್ರದ ತೆಲುಗು ಅವತರಣಿಕೆಗೆ ದಿಲ್ ರಾಜು ಜೊತೆಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹಾಕಿದ್ದಾರೆ. ಶ್ರೀರಾಮ್ ವೇಣು ನಿರ್ದೇಶಿಸುತ್ತಿರುವ ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಇತ್ತೀಚೆಗೆಷ್ಟೇ ಸೆಟ್ಟೇರಿದ ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ.

  'ಪಿಂಕ್' ಚಿತ್ರದ ಕುರಿತು

  'ಪಿಂಕ್' ಚಿತ್ರದ ಕುರಿತು

  ಅಮಿತಾಬ್ ಬಚ್ಚನ್, ತಾಪ್ಸಿ, ಕೀರ್ತಿ, ವಿಜಯ್ ವರ್ಮ, ಅಂಗದ್ ಬೇಡಿ ಅಭಿನಯದ ಸೋಷಿಯಲ್ ಥ್ರಿಲ್ಲರ್ ಸಿನಿಮಾ 'ಪಿಂಕ್'. ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸಿದ್ದ 'ಪಿಂಕ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಕಡಿಮೆ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಖತ್ ಕಲೆಕ್ಷನ್ ಮಾಡಿತ್ತು.

  English summary
  Power Star Pawan Kalyan charges Rs 60 crore for Pink Telugu remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X