twitter
    For Quick Alerts
    ALLOW NOTIFICATIONS  
    For Daily Alerts

    ಪೊಲೀಸರಿಗೆ ತೋರಿಸಿದ ಮೇಲಷ್ಟೇ ಈ ಚಿತ್ರ ರಿಲೀಸ್

    By ಜೀವನರಸಿಕ
    |

    ಸ್ಯಾಂಡಲ್ ವುಡ್ ನಲ್ಲಿ ವಿವಾದಗಳನ್ನೇ ಮೈಗೆ ಮೆತ್ತಿಕೊಂಡ ಸಿನಿಮಾ ಅದು. ಟೈಟಲ್ ಇಟ್ಟ ದಿನದಿಂದಲೇ ವಿವಾದಗಳು ಶುರುವಾದವು. ವಿವಾದಗಳು ದೂರವಾಗಿದ್ರೆ ಚಿತ್ರ ಐದಾರು ತಿಂಗಳ ಹಿಂದೇನೇ ರಿಲೀಸ್ ಆಗಬೇಕಿತ್ತು. ಚಿತ್ರದ ಹೆಸರು 'ಕರ್ನಾಟಕ ಅಯೋಧ್ಯೆಪುರಂ'.

    ಈ ಚಿತ್ರದ ನಿರ್ದೇಶಕ ಲವ ಅವರಿಗೆ ಈಗ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ಜೋಶ್ ರಾಕೇಶ್-ಪ್ಯಾಟೆ ಹುಡ್ಗಿ ನಯನಾ ಜೋಡಿಯಾಗಿರೋ ಸಿನಿಮಾದಲ್ಲಿ ಹಲವು ವಿವಾದಾತ್ಮಕ ಅಂಶಗಳಿವೆ ಅನ್ನೋ ಕಾರಣಕ್ಕೆ ಚಿತ್ರಕ್ಕೆ ಕನ್ನಡ ಕಲ್ಪತರು ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. [ಅಯೋಧ್ಯೆಪುರಂ ಶೀರ್ಷಿಕೆಗೆ ಮುಸ್ಲಿಂರ ವಿರೋಧ]

    ಆ ನಂತರ ಕರ್ನಾಟಕ ನವ ನಿರ್ಮಾಣ ಸೇನೆ, ಇತ್ತೀಚೆಗೆ ಶ್ರೀರಾಮಸೇನೆ ಕೂಡ ಸಿನಿಮಾದ ಪೋಸ್ಟರ್ ಮತ್ತು ಟ್ರೈಲರ್ ನಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡೋ ಅಂಶಗಳಿವೆ ಅನ್ನೋ ಕಾರಣಕ್ಕೆ ಚಿತ್ರವನ್ನ ನಿಷೇಧಿಸಬೇಕು ಅಂತ ಪಟ್ಟು ಹಿಡಿದಿದ್ವು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದಿತ್ತು. ಕರ್ನಾಟಕ ಅಯೋಧ್ಯೆಪುರಂ ಚಿತ್ರದ ನಿರ್ದೇಶಕರು ವಿವಾದಾತ್ಮಕ ಪೋಸ್ಟರ್ ಗಳನ್ನ ಜಾಹೀರಾತುಗಳಲ್ಲಿ ನೀಡೋದಿಲ್ಲ ಅಂತ ಒಪ್ಪಿಕೊಂಡು ಚಿತ್ರವನ್ನ ಈ ವರ್ಷದಲ್ಲೇ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ರು.

    ಆದರೆ ಈಗ ವಾಣಿಜ್ಯ ಮಂಡಳಿ ಚಿತ್ರವನ್ನ ಪೊಲೀಸ್ ಅಧಿಕಾರಿಗಳಿಗೆ ತೋರಿಸಬೇಕು ಅನ್ನೋ ಸೂಚನೆಯನ್ನ ನಿರ್ದೇಶಕರಿಗೆ ನೀಡಿದೆಯಂತೆ. ಇದೇನಪ್ಪ ಹೊಸ ತರ್ಲೇ ಅಂತ ನಿರ್ದೇಶಕರು ತಲೆ ಕೆಡಿಸಿಕೊಂಡಿದ್ದಾರೆ.

    English summary
    Kannada movie Karnataka Ayodhyapuram is hitting headlines for wrong reason again. Karnataka Film Chamber of Commerce suggests that after releasing to public first show the movie to the police. Karnataka Ayodhyapuram stars Rakesh Adiga and Nayana in the lead roles.
    Wednesday, December 18, 2013, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X