For Quick Alerts
  ALLOW NOTIFICATIONS  
  For Daily Alerts

  ಐಟಂ ಸಾಂಗ್ ಬೇಡಿಕೆಗೆ ಬಿಸಿ ಮುಟ್ಟಿಸಿದ ಪೂಜಾ ಗಾಂಧಿ

  |

  ಯೋಗರಾಜ್ ಭಟ್ಟರ 'ಮುಂಗಾರು ಮಳೆ' ಚಿತ್ರದಲ್ಲಿ 'ಸಂಜನಾ ಗಾಂಧಿ' ಹೆಸರಿನ ಮೂಲಕ ಕನ್ನಡದಲ್ಲಿ ತಮ್ಮ ಸಿನಿಜರ್ನಿ ಆರಂಭಿಸಿದ ನಟಿ, ನಂತರ ತಮ್ಮ ಮೂಲ ಹೆಸರು ಪೂಜಾ ಗಾಂಧಿ ಮೂಲಕವೇ ಕನ್ನಡದಲ್ಲಿ ನೆಲೆ ಕಂಡವರು. ಆದರೆ ಮುಂಗಾರು ಮಳೆ ನಂತರ ಪೂಜಾ ಗಾಂಧಿ ನಾಯಕಿಯಾಗಿ ನಟಿಸಿದ ಚಿತ್ರಗಳೆಲ್ಲವೂ ಪಲ್ಟಿ ಹೊಡೆದಿದ್ದವು. ಇದೀಗ ಬಂದಿರುವ 'ದಂಡುಪಾಳ್ಯ', ಪೂಜಾಗೆ ಮರುಜನ್ಮ ನೀಡಿದೆ.

  ದಂಡುಪಾಳ್ಯ ಚಿತ್ರದಲ್ಲಿ ಹಂತಕಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾ ಗಾಂಧಿ ಅಮೋಘ ನಟನೆಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಭಾರಿ ಪ್ರಶಂಸೆಯ ಸುರಿಮಳೆಯಾಗಿದೆ. ಪೂಜಾ ಗಾಂಧಿಯ ಹಾವ-ಭಾವ-ಭಂಗಿಗಳಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅವರ ಬೋಲ್ಡ್ ನಟನೆಗೆ ಬೆಚ್ಚಿಬಿದ್ದಿದ್ದಾರೆ. ಪೂಜಾಗೆ ಈಗ ಮತ್ತೆ ಆಫರ್ ಗಳ ಸುರಿಮಳೆ.

  ದಂಡುಪಾಳ್ಯ ಚಿತ್ರದ ಪೋಸ್ಟರ್ ಗಳಲ್ಲಿ ಪೂಜಾ ಗಾಂಧಿ ಬೆತ್ತಲೆ ಬೆನ್ನು ಪ್ರದರ್ಶನವೇ ಹೈಲೈಟ್ ಆಗಿತ್ತು. ಆದರೆ ಚಿತ್ರ ನೋಡಿದ ಮೇಲೆ ಪೂಜಾರ ಅಭಿನಯವೇ ಹೈಲೈಟ್ ಆಗಿದೆ. ಚಿತ್ರದ ಪಾತ್ರಕ್ಕೆ ತಕ್ಕ ಮೇಕಪ್ ಹಾಗೂ ಉಡುಗೆಯಲ್ಲಿ ಪೂಜಾ ಗಾಂಧಿ ಬಹಳಷ್ಟು ಸೆಕ್ಸಿಯಾಗೇ ಕಾಣಿಸಿದ್ದಾರೆ. ಈ ಕಾರಣಕ್ಕೆ ಈಗ 'ಐಟಂ' ಹಾಡಿಗೆ ಪೂಜಾಗೆ ಆಫರ್ ಶುರುವಾಗಿದೆ.

  "ನಾನು ದಂಡುಪಾಳ್ಯ ಚಿತ್ರದಲ್ಲಿ ಪಾತ್ರಕ್ಕೆ ಅಗತ್ಯವಿತ್ತಾದ್ದರಿಂದ ಬೆನ್ನು ತೋರಿಸಿದ್ದೇನೆಯೇ ಹೊರತೂ ನನ್ನ ಮೈ ತೋರಿಸುವ ಉದ್ದೇಶದಿಂದಲ್ಲ. ಈಗ ಬೇಡಿಕೆಯಿದೆ ಎಂದ ಮಾತ್ರಕ್ಕೆ ಅನಗತ್ಯವಾಗಿ ತೆರೆಯ ಮೇಲೆ ಬೆನ್ನು ತೋರಿಸುವುದಿಲ್ಲ" ಎಂದು ಹೇಳಿ ಆಫರ್ ನೀಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ ಪೂಜಾ ಗಾಂಧಿ.

  ಸಾಧುಕೋಕಿಲಾ '90' ಚಿತ್ರ ನಿರ್ದೇಶಿಸಿದ್ದ ಲಕ್ಕಿ ಶಂಕರ್ ತಮ್ಮ ಚಿತ್ರೀಕರಣ ಹಂತದಲ್ಲಿರುವ 'ದೇವರಾಣೆ' ಚಿತ್ರದಲ್ಲಿ 'ಐಟಂ ಸಾಂಗ್' ಒಂದಕ್ಕೆ ಹೆಜ್ಜೆಹಾಕಲು ಪೂಜಾಗೆ ಆಹ್ವಾನ ನೀಡಿದ್ದರಂತೆ. ಈ ಮೊದಲು ಒಪ್ಪಿದ್ದ ಪೂಜಾ, ಈಗ "ಐಟಂ ಹಾಡಿಗೆ ಹೆಜ್ಜೆಹಾಕುವುದಿಲ್ಲ" ಎಂದು ಮೆಸೇಜ್ ಕಳುಹಿಸಿದ್ದಾರೆ. ಒಟ್ಟಿನಲ್ಲಿ, ಪೂಜಾಗೆ ಈಗ ಪಾತ್ರಗಳ ಆಯ್ಕೆಯ ಬಗ್ಗೆ ಅರಿವಾಗಿದೆ ಎಂದುಕೊಳ್ಳಬಹುದೇನೋ! (ಒನ್ ಇಂಡಿಯಾ ಕನ್ನಡ)

  English summary
  After Dandupalya movie success, actress Pooja Gandhi is getting more offers. But, the most of the offers are for 'Item song. Pooja Gandhi is rejecting the item song offers and told that she won't do the item song ever. 
 
  Tuesday, July 31, 2012, 12:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X