For Quick Alerts
  ALLOW NOTIFICATIONS  
  For Daily Alerts

  ತಂಗಿ ಬಿಟ್ಟು ಅಮ್ಮನಿಗೆ ಬಣ್ಣ ಹಚ್ಚಿಸುತ್ತಿರುವ ಪೂಜಾ ಗಾಂಧಿ

  |

  ನಟಿ ಪೂಜಾ ಗಾಂಧಿ 'ದಂಡುಪಾಳ್ಯ'ದ ನಂತರ ಭಾರಿ ಸುದ್ದಿಯಲ್ಲಿರುವುದು ಈಗ ಹಳೆಯ ಸಂಗತಿ. 'ಮಠ' ಖ್ಯಾತಿಯ ಗುರುಪ್ರಸಾದ್ ಚಿತ್ರದಲ್ಲಿ ಪೂಜಾ ಗಾಂಧಿ 'ಐಟಂ' ಸಾಂಗಿನಲ್ಲಿ ಕುಣಿಯುತ್ತಾರಂತೆ ಎಂಬ ಸುದ್ದಿಯೂ ಈಗ ಮಠ ಸೇರಿಯಾಗಿದೆ. ಹಾಗಾದರೆ ಹೊಸ ಸುದ್ದಿಯೇನು? ಖಂಡಿತ ಇದೆ. ಹೊಸ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆ ಪ್ರಕಾರ, ಪೂಜಾ ಗಾಂಧಿಯ ಅಮ್ಮ 'ಜ್ಯೋತಿ ಗಾಂಧಿ' ಚಿತ್ರವೊಂದಕ್ಕಾಗಿ ಮುಖಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

  ಪೂಜಾ ಗಾಂಧಿ ತಂಗಿ 'ರಾಧಿಕಾ ಗಾಂಧಿ' ಇರಬೇಕು ಅಥವಾ ಇನ್ನೊಬ್ಬ ಸಹೋದರಿ ಇರಬಹುದು ಎಂದು ನೀವಂದುಕೊಂಡಿದ್ದರೆ ಅದು ಸುಳ್ಳು! ಬರಲಿರುವುದು ನಿಜವಾಗಿಯೂ ಪೂಜಾ ಗಾಂಧಿಯ ಅಮ್ಮನೇ ಹೌದು. ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಪೂಜಾ ಗಾಂಧಿ ಅಮ್ಮ ಜ್ಯೋತಿ ಗಾಂಧಿ, 'ಸುಭದ್ರ' ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಮತ್ತೊಮ್ಮೆ ಗಾಂಧಿನಗರದಲ್ಲಿ 'ಗಾಂಧಿಗಿರಿ' ಪ್ರಾರಂಭವಾಗಲಿದೆ.

  ಹೀಗೆ ಹೇಳಲು ಕಾರಣವಿದೆ. 'ಸುಭದ್ರ' ಎಂಬ ಚಿತ್ರದಲ್ಲಿ ಅಮ್ಮ ಜ್ಯೋತಿ ಗಾಂಧಿ ಜೊತೆ ಸ್ವತಃ ಪೂಜಾ ಗಾಂಧಿ ಕೂಡ ನಟಿಸಲಿದ್ದಾರೆ. 'ರಿಯಲ್' ಅಮ್ಮ-ಮಗಳನ್ನು 'ರೀಲ್' ನಲ್ಲಿ ಕೂಡ ಅಮ್ಮ-ಮಗಳಾಗಿ ನೋಡುವ ಭಾಗ್ಯ ಪ್ರೇಕ್ಷಕರಿಗೆ ಸಿಗಲಿದೆ. ಪೂಜಾ ಗಾಂಧಿಗೆ ಇಬ್ಬರು ತಂಗಿಯರಿದ್ದಾರೆ ಎನ್ನುವುದು ಸಾಕಷ್ಟು ಮಂದಿಗೆ ತಿಳಿದಿರುವ ಸಮಾಚಾರ. ಅವರೂ ಈ ಚಿತ್ರದಲ್ಲಿ ಇರುತ್ತಾರಾ? ಸದ್ಯಕ್ಕೆ ಗೊತ್ತಿಲ್ಲ!

  ಅಂದಹಾಗೆ, ಪೂಜಾ ಗಾಂಧಿ ತಂಗಿಯರಿಬ್ಬರಲ್ಲಿ ಒಬ್ಬರಾಗಿರುವ 'ರಾಧಿಕಾ ಗಾಂಧಿ' ಈಗಾಗಲೇ 'ಚಿಕ್ಕಮಗಳೂರ ಓ ಚಿಕ್ಕಮಲ್ಲಿಗೆ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರು. ಇನ್ನೂ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರಾದರೂ ಅಕ್ಕನಂತೆ ಚೊಕ್ಕವಾಗಿ ನಟಿಸಲು ಬಾರದ ಕಾರಣಕ್ಕೆ ಹಾಗೂ ದುರಾದೃಷ್ಟವೂ ಜತೆಯಾಗಿದ್ದಕ್ಕೆ ರಾಧಿಕಾ ಗಾಂಧಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಹೀಗಾಗಿಯೇ ಪೂಜಾರ ಮತ್ತೊಬ್ಬ ಸಹೋದರಿ ಇನ್ನೂ ಚಿತ್ರರಂಗದ ಕಡೆ ಮುಖ ಹಾಕಿಲ್ಲ ಎನ್ನಲಾಗುತ್ತಿದೆ.

  ಆದರೆ ತಂಗಿ ಬಾರದಿದ್ದರೇನಂತೆ, ಅಮ್ಮನಿಲ್ಲವೇ? ಎಂದಿರುವ ಪೂಜಾ, ಅಮ್ಮನನ್ನೇ ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಪೂಜಾ ಅಮ್ಮ ಯಾವ ಪಾತ್ರ ಮಾಡಬಹುದು ಎಂದು ನೀವೂ ಕೇಳಲಾಗದು.., ನಾವು ಹೇಳಲಾಗದು. ಎಲ್ಲರಿಗೂ ತಿಳಿದಿರುವಂತೆ ಅಮ್ಮನ ಪಾತ್ರ. ಚಿತ್ರದಲ್ಲೂ ಸ್ವತಃ ಮಗಳಿಗೇ ಅಮ್ಮ. ಇನ್ನಿಬ್ಬರು ಸಹೋದರಿಯರೂ ಸೇರಿಕೊಂಡುಬಿಟ್ಟರೆ 'ಫುಲ್ ಫ್ಯಾಮಿಲಿ ಪ್ಯಾಕೇಜ್' ಆಗಬಹುದು.

  ಒಟ್ಟಿನಲ್ಲಿ 'ಮುಂಗಾರು ಮಳೆ' ಮೂಲಕ ಕನ್ನಡ ಸಿನಿಜೀವನ ಪ್ರಾರಂಭಿಸಿದ ಪೂಜಾ ಗಾಂಧಿ, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಏಳು-ಬೀಳು ಕಂಡವರು. 'ಮುಂಗಾರು ಮಳೆ' ಸೂಪರ್ ಹಿಟ್ ಸಿನಿಮಾದ ಮೂಲಕ ಬಂದರೂ ನಂತರವೆಲ್ಲಾ ಸಾಲು ಸಾಲು ಸೋಲುಗಳೇ! ಆದರೆ ಇತ್ತೀಚಿನ 'ಡಂಡುಪಾಳ್ಯ' ಗೆಲುವು ಪೂಜಾರಿಗೆ ಮತ್ತೆ 'ಭೂಸ್ಟ್' ಕುಡಿಸಿದೆ. ಅದು ಎಷ್ಟೆಂದರೆ, ತಾಯಿಗೇ ಬಣ್ನ ಹಚ್ಚಿಸುವಷ್ಟು! (ಒನ್ ಇಂಡಿಯಾ ಕನ್ನಡ)

  English summary
  There is news buzz that actress Pooja Gandhi's mother 'Jyothi Gandhi' acts in a Kannada movie titled 'Subhadra'. The news also added that Pooja Gandhi herself acts as daughter in this movie too for her mother. Now, anyone can tell that Pooja Gandhi is really Shining.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X